ಬೆಂಗಳೂರು, ಜೂನ್ 3 : ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರ ಮಗ ಮತ್ತು ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಮಗಳ ಮದುವೆ ಮಾತುಕತೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
ಕಾಫಿ ಡೇ ಮಾಲೀಕ ದಿವಂಗತ ಸಿದ್ಧಾರ್ಥ್ ಅವರ ಹಿರಿಯ ಪುತ್ರ ಅಮರ್ತ್ಯ ಜೊತೆ ಡಿಕೆ ಶಿವಕುಮಾರ್ ತಮ್ಮ ಹಿರಿ ಮಗಳಾದ ಐಶ್ವರ್ಯಳ ಮದುವೆಯನ್ನು ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಕುಟುಂಬ ಮತ್ತು ಕಾಫಿ ಡೇ ಮಾಲೀಕ ದಿವಂಗತ ಸಿದ್ಧಾರ್ಥ್ ಅವರ ಕುಟುಂಬ ಬೀಗತನ ಮಾಡುವ ಅವಕಾಶಗಳು ಹೆಚ್ಚಿದ್ದು, ಡಿ.ಕೆ ಶಿವಕುಮಾರ್ ಮಗಳು ಐಶ್ವರ್ಯ ಹಾಗೂ
ಸಿದ್ದಾರ್ಥರ ಪುತ್ರ ಅಮರ್ತ್ಯ ರ ಮದುವೆ ನಡೆಯುವ ಸಾಧ್ಯತೆ ಹೆಚ್ಚಿವೆ ಎನ್ನಲಾಗಿದೆ. ಡಿ ಕೆ ಶಿವಕುಮಾರ್ ಮತ್ತು ದಿವಂಗತ ಸಿದ್ಧಾರ್ಥ್ ಉದ್ಯಮದಲ್ಲಿ ಪಾಲುದಾರರು ಕೂಡ ಆಗಿದ್ದರು ಎಂದು ಹೇಳಲಾಗುತ್ತಿದ್ದು, ಇಬ್ಬರ ನಡುವೆ ಆತ್ಮೀಯ ಗೆಳೆತನ ಕೂಡ ಇತ್ತು ಎನ್ನಲಾಗಿದೆ.
ಅಷ್ಟೇ ಅಲ್ಲ ಸಿದ್ಧಾರ್ಥ್ ಅವರ ಮಾವ ಎಸ್.ಎಂ.ಕೃಷ್ಣ ಡಿಕೆ ಶಿವಕುಮಾರ್ ಅವರ ರಾಜಕೀಯ ಗುರು. ಹಾಗಾಗಿ ಐಶ್ವರ್ಯ ಮತ್ತು ಅಮರ್ತ್ಯ ರ ಮದುವೆ ಮಾತುಕತೆ ಯಶಸ್ವಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.








