ಈಗಾಗಲೇ ಕೊರೋನಾ ವೈರಸ್ ಚೀನಾದಲ್ಲಿ ಮರಣ ಶಾಸನ ಬರೆಯಲು ಹೊರಟಿದೆ. ಎಲ್ಲಿ ನಮ್ಮ ದೇಶಕ್ಕೂ ವ್ಯಾಪಿಸಿ ಪ್ರಾಣ ಹಾನಿ ಮಾಡುತ್ತೋ ಅಂತ ಸುತ್ತಲಿನ ದೇಶಗಳು ಆತಂಕದಲ್ಲಿವೆ. ಆದ್ರೆ ಈ ಆತಂಕದ ನಡುವೆಯೂ ದ್ವೀಪ ರಾಷ್ಟ್ರ ಇಂಡೋನೇಷ್ಯಾದ ಜನರು ಮಾತ್ರ ಬಾವಲಿಗಳನ್ನು ತಿನ್ನೋದು ಕಡಿಮೆ ಮಾಡಿಲ್ಲ. ಅಷ್ಟೇ ಅಲ್ಲದೆ ಹಿಂದೆಂದೂ ಕಾಣದ ಮಟ್ಟಿಗೆ ಬಾವಲಿ ಮಾಂಸಕ್ಕೆ ಬೇಡಿಕೆ ಬಂದಿದೆ.
ಇಂಡೋನೇಷಿಯಾ ರಾಜಧಾನಿ ಜಕಾರ್ತಾ ಸೇರಿದಂತೆ ಪ್ರಮುಖ ನಗರಗಳಲ್ಲಿ ಬಾವಲಿ ಮಾಂಸದ ಮಾರಾಟ ಜೋರಾಗಿ ನಡೆಯುತ್ತಿದೆ. ಚಳಿಗಾಲದಲ್ಲಿ ಬಾವಲಿ ಮಾಂಸ ಸೇವಿಸಿದರೆ ಆಸ್ತಮ ಮತ್ತು ಇತರ ಸೋಂಕು ರೋಗಗಳು ಬರುವುದಿಲ್ಲ ಎಂಬ ಕಾರಣಕ್ಕಾಗಿ ಇಂಡೋನೇಷ್ಯನ್ನರು ಕೊರೋನಾ ಸೋಂಕಿನ ಭೀತಿಯ ನಡುವೆಯೂ ಬಾವಲಿಯ ಮಾಂಸವನ್ನು ಯಥೇಚ್ಚವಾಗಿ ಸೇವಿಸುತ್ತಿದ್ದಾರೆ. ಏನೇ ಆಗಲಿ ಕೊರೋನಾ ಭಯದಿಂದ ತತ್ತರಿಸಿರುವ ಹಲವಾರು ದೆಶಗಳ ಜನ ಸಸ್ತನಿಗಳ ಮಾಂಸ ಕಂಡರೆ ಸಾಕು ಹೆದರುತ್ತಿದ್ದಾರೆ. ಈ ನಡುವೆ ಇಂಡೋನೇಷಿಯಾದ ಜನ ಮಾತ್ರ ಬಾವಲಿ ಹಿಂದೆ ಬಿದ್ದಿರೋದು ವಿಪರ್ಯಾಸವೇ ಸರಿ..