ಕೊರೊನಾ ಅಥಾವ ಕೋವಿಡ್ 19 ತಲ್ಲಣ ಎಬ್ಬಿಸಿದೆ. ಕ್ಷಣದಿಂದ ಕ್ಷಣಕ್ಕೆ ಕಾಡ್ಗಿಚ್ಚಿನಂತೆ ದೇಶ ವಿದೇಶಗಳಿಗೆ ವ್ಯಾಪಿಸುತ್ತಿದೆ. ವಿಶ್ವದಾದ್ಯಂತ ಕೊರೊನಾ ವೈರಸ್ ಮರಣ ಮೃದಂಗವನ್ನು ಭಾರಿಸುತ್ತಿದೆ. ಯಾವದೇ ಜನರನ್ನು ಕೇಳಿದರು ಕೊರೊನಾ ವೈರಸ್ ನಿಂದಾಗುವ ಅಪಾಯಗಳ ಬಗ್ಗೆ ಹೇಳುತ್ತಿದ್ದಾರೆ. ಅಲ್ಲದೆ ಕೊರೊನಾ ವೈರಸ್ ಬಗ್ಗೆ ತಿಳಿಯದ ವ್ಯಕ್ತಿಗಳಿಲ್ಲ. ಚಿಕ್ಕ ಬಾಲಕನಿಂದ ವೃದ್ಧಾಪ್ಯದಲ್ಲಿರುವ ವ್ಯಕ್ತಿಗಳಿಗೂ ಕೋವಿಡ್ 19 ಬಗ್ಗೆ ತಿಳಿದೆ.
ವಿಶ್ವದ ಬಹುತೇಕ ರಾಷ್ಟ್ರಗಳು ಕೊರೊನಾ ವೈರಸ್ ಬಗ್ಗೆ ಅರಿವು ಮೂಡಿಸೊಲು ಪ್ರಯತ್ನಿಸುತ್ತಿವೆ. ಅರಿವಿನ ಭಾಗವಾಗಿ ಸಾಕಷ್ಟು ಎಚ್ಚರಿಕೆಯ ಕ್ರಮಗಳನ್ನು ಕೈಗೊಂಡಿವೆ. ಆದ್ದರಿಂದ ಕೊರೊನಾ ಬಗ್ಗೆ ವಿಶ್ವದ ಎಲ್ಲ ಜನರಿಗೂ ತಿಳಿದಿದೆ ಎಂದು ಭಾವಿಸಲಾಗಿದೆ. ಆದರೆ ಈ ಮಾಹಿತಿ ಸುಳ್ಳು ಆಗಿದೆ. ಯಾಕೆಂದರೆ ಕೊರೊನಾ ವೈರಸ್ ಬಗ್ಗೆ ಜರ್ಮನಿಯ ಮನೆಯೊಂದರಲ್ಲಿ ಇರುವ 14 ಜನರಿಗೆ ಗೊತ್ತೇ ಇಲ್ಲ. ಬಹುಷಃ ಕೊರೊನಾ ವೈರಸ್ ಕುರಿತಾಗಿ ತಿಳಿದುಕೊಳ್ಳದ ಕಟ್ಟ ಕಡೆಯ ಹದಿನಾಲ್ಕು ಜನರು ಇವರೇ ಇರಬೇಕು ಎಂದು ಊಹಿಸಬಹುದು.
ಜರ್ಮನಿಯಲ್ಲಿ ನಡೆಯುತ್ತಿರುವ ‘ಬಿಗ್ ಬ್ರದರ್’ ರಿಯಾಲಿಟಿ ಶೋನಲ್ಲಿ 14 ಜನ ಭಾಗಿಯಾಗಿದ್ದಾರೆ. ಇವರು ಆ ಮನೆಯಲ್ಲಿ ಬಂಧಿಗಳಾಗಿದ್ದಾರೆ. ಹಾಗಾಗಿ ಇಲ್ಲಿಯವರೆಗ ಕೊರೊನಾ ಸುದ್ದಿಯ ಮಾಹಿತಿಯೇ ಇವರಿಗೆ ಇಲ್ಲ.








