ಬೆಂಗಳೂರು : ಹೆಮ್ಮಾರಿ ಕೊರೊನಾ ವೈರಸ್ ಸೋಂಕಿಗೆ ಹೆದರಿ ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿಚಾರವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪ್ರತಿಕಿಯೆ ನೀಡಿದ್ದು, ದಯಮಾಡಿ ತಮ್ಮ ಅಮೂಲ್ಯವಾದ ಪ್ರಾಣಗಳನ್ನು ಕಳೆದುಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ವೈರಸ್ ಗೆ ಭಯ ಬಿದ್ದು ದಯಮಾಡಿ ತಮ್ಮ ಪ್ರಾಣ ಕಳೆದುಕೊಳ್ಳಬೇಡಿ. ಇಂದು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೂ ಮೊದಲು ನಮ್ಮ ಸಿಬ್ಬಂದಿಯೊಬ್ಬರು ಬಸ್ಸಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ದಯಮಾಡಿ ಹಾಗೆಲ್ಲ ಮಾಡಬೇಡಿ, ಸರ್ಕಾರ ನಿಮ್ಮ ಜೀವಕ್ಕೆ ಶ್ರಮಿಸುತ್ತಿದೆ. ಯಾವುದಕ್ಕೂ ಹೆದರಬೇಡಿ ಇದೊಂದು ಕಾಯಿಲೆ ಅಷ್ಟೆ. ಕಾಯಿಲೆ ಅಂತೆಯೇ ನೋಡಿ ಎಂದು ಪೊಲೀಸ್ ಆಯುಕ್ತರು ಜನರಲ್ಲಿ ಕೇಳಿಕೊಂಡಿದ್ದಾರೆ.
ಇದೇ ವೇಳೆ ಪೊಲೀಸರಿಗೆ ಕೊರೊನಾ ದೃಢಪಟ್ಟ ವಿಚಾರವಾಗಿ ಮಾತನಾಡಿದ ಭಾಸ್ಕರ್ ರಾವ್, ಸುಮಾರು ಜನ ಪೊಲೀಸ್ ಸಿಬ್ಬಂದಿ ಜೊತೆ ಮಾತಾನಾಡಿದ್ದೇನೆ. ವಾಟ್ಸಾಪ್ ಗ್ರೂಪ್ ಕೂಡ ಮಾಡಿದ್ದೇವೆ. ಅವರ ಕಾಂಟಾಕ್ಟ್ ಮಾಡಿ ಮನೋಸ್ಥೈರ್ಯ ಮೂಡಿಸುತ್ತಿದೇವೆ. ಎಲ್ಲಾರೂ ಟ್ರೀಟ್ಮೆಂಮ್ ನಲ್ಲಿದ್ದಾರೆ. ಯಾರೂ ಐಸಿಯುನಲ್ಲಿಲ್ಲ. ಅಲ್ಲದೆ ಎಲ್ಲಾ ರಿಕವರಿ ಆಗ್ತಿದ್ದಾರೆ ಎಂದರು.