ನಮಗೆ ಸಚಿವರಾಗುವ ಅರ್ಹತೆ ಇಲ್ಲವಾ? : ಶಾಸಕ ರೇಣುಕಾಚಾರ್ಯ ಅಸಮಾಧಾನ Saaksha Tv
ದಾವಣಗೆರೆ: ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗಲು ನಾನು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಷ್ಟು ಪ್ರಯತ್ನಿಸಿದ್ದೇವೆ. ನಮಗೆ ಸಚಿವರಾಗುವ ಅರ್ಹತೆ ಇಲ್ಲವಾ? ಎಂದು ಶಾಸಕ ರೇಣುಕಾಚಾರ್ಯ (MP Renukacharya) ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದಾವಣಗೆರೆಯ ಹೊನ್ನಾಳಿ ಪಟ್ಟಣದಲ್ಲಿ ಮಾತನಾಡಿದ ಅವರು ಕೆಲವು ಸಚಿವರು ಶಾಸಕರ ಪೋನ್ ರಿಸಿವ್ ಮಾಡಲ್ಲ. ಶಾಸಕರು ಪತ್ರ ಬರೆದರೆ ಸಚಿವರು ಉತ್ತರ ಕೊಡಬೇಕು. ಆದರೆ ಸಚಿವರ ಆಪ್ತ ಸಹಾಯಕರು ಶರಾ ಬರೆದು ಕಳುಹಿಸುತ್ತಾರೆ. ಇದರಿಂದ ನಮಗೆ ಬೇಜಾರು, ಅವಮಾನ ಆಗುತ್ತೆ. ಇಂಥಾ ಸಚಿವರು ಬೇಕಾ? ಎಂದು ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.
ಮಾರ್ಚ್ನಲ್ಲಿ ಸಂಪುಟ ವಿಸ್ತರಣೆ ಬೇಡ. ಈಗಲೇ ಸಂಪುಟ ವಿಸ್ತರಣೆ ಆಗಲಿ. ನಾಲ್ಕು ಸಚಿವ ಸ್ಥಾನ ಖಾಲಿಯಿದ್ದರೂ ಸಹ ಬೇರೆಯವರಿಗೆ ಹೆಚ್ಚುವರಿ ಕೊಟ್ಟಿದ್ದಾರೆ. ಸತತ ಸಚಿವರಾದವರು ತಾವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಈ ವಿಚಾರದ ಬಗ್ಗೆ ನಾನು ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಸೇರಿ ನಿರ್ಧರಿಸಿದ್ದೇವೆ ಎಂದರು.
ಅವರು ಕಾರು ಸೇರಿದಂತೆ ಎಲ್ಲ ಬಳಕೆ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಹೊರೆಯಾಗುತ್ತಿದೆ. ನಮಗೂ ಸಚಿವ ಸ್ಥಾನ ಕೊಡಲಿ. ಈ ಎಲ್ಲ ವಿಚಾರವನ್ನ ಯತ್ನಾಳ್ ಜತೆ ಮಾತಾಡಿರುವೆ. ಇದು ಚುನಾವಣೆ ವರ್ಷ. ವಿಳಂಬ ಮಾಡಿ ಸಚಿವ ಸ್ಥಾನ ಕೊಟ್ಟರೇ ಉಪಯೋಗವಿಲ್ಲ. ಕೊಡುವುದಿದ್ದರೇ ಬೇಗ ಕೊಡಿ ಎಂದು ಆಗ್ರಹಿಸಿದರು.