ನಾವು ಮಾತ್ರ ಕುಟುಂಬ ರಾಜಕಾರಣ ಮಾಡ್ತೀವಾ..? ಸಿದ್ದರಾಮಯ್ಯ ಕುಟುಂಬ ರಾಜಕಾರಣ ಮಾಡಲ್ವಾ..? – ನಿಖಿಲ್ ಕುಮಾರಸ್ವಾಮಿ
ಮಂಡ್ಯ : ಹೆಚ್ ಡಿಕೆ ಬಗೆಗಿನ ಜಮೀರ್ ಅಹ್ಮದ್ ಹೇಳಿಕೆ ವಿಚಾರವಾಗಿ ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಇದರ ಬಗ್ಗೆ ಚರ್ಚೆ ಸೂಕ್ತ ಅಲ್ಲ, ಕೆಲ ನಾಯಕರು ತಪ್ಪು ಸಂದೇಶ ಕೊಡಲು ಹೊರಟಿದ್ದಾರೆ. ಯಾರನ್ನೋ ಮೆಚ್ಚಿಸಲು ಈ ರೀತಿಯಾದ ಹೇಳಿಕೆ ಕೊಡ್ತಿದ್ದಾರೆ. ಜನ ಸೂಕ್ಷ್ಮವಾಗಿ ಪರಿಗಣಿಸ್ತಾರೆ, ಮುಂದಿನ ದಿನಗಳಲ್ಲಿ ಉತ್ತರ ಕೊಡ್ತಾರೆ ಎಂದಿದ್ದಾರೆ.
ಇಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದಲ್ಲಿರೋ ಶ್ರೀ ಕಾಳಿಕಾಂಬ ವಿದ್ಯಾಸಂಸ್ಥೆಯ ನೂತನ ಕಟ್ಟಡ ಉದ್ಘಾಟನೆ ಮಾಡಲಾಗಿದೆ. ಟಯೋಟ ಕಿರ್ಲೋಸ್ಕರ್ ಸಂಸ್ಥೆ ಸಹಯೋಗದಲ್ಲಿ ನಿರ್ಮಿಸಿರೋ ನೂತನ ಶಾಲಾ ಕಟ್ಟಡ ವನ್ನು ಆದಿಚುಂಚನಗಿರಿ ಪೀಠಾಧಿಪತಿ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಉದ್ಘಾಟಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ, ಶಾಸಕ ಡಿ ಸಿ ತಮ್ಮಣ್ಣ, ಡಿ ಟಿ ಸಂತೋಷ್ ಭಾಗಿಯಾಗಿದ್ದರು. ಕಾರ್ಯಕ್ರಮದ ನಂತರ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಹೆಚ್ ಡಿಕೆ ಬಗೆಗಿನ ಜಮೀರ್ ಅಹ್ಮದ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಇದೇ ವೇಳೆ ಜೆಡಿಎಸ್ ಕುಟುಂಬ ರಾಜಕಾರಣ ಮಾಡುತ್ತೆ ಎನ್ನುವ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ನಾವು ಮಾತ್ರ ಕುಟುಂಬ ರಾಜಕಾರಣ ಮಾಡ್ತೀವಾ. ಸಿದ್ದರಾಮಯ್ಯ ಕುಟುಂಬ ರಾಜಕಾರಣ ಮಾಡಲ್ವಾ..? ಸಿದ್ದರಾಮಯ್ಯ ಪುತ್ರ ಯತೀಂದ್ರ ವೈದ್ಯರು ರಾಜಕೀಯಕ್ಕೆ ಏಕೆ ಬಂದ್ರು, ಅವರು ಡಾಕ್ಟರ್ ಅಲ್ವಾ…? ಎಂದು ಪ್ರಧ್ನೆ ಮಾಡಿದ್ದಾರೆ.
ಇದೇ ವೇಳೆ ಪಂಚರತ್ನ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಕಾರ್ಯರೂಪಕ್ಕೆ ತರುತ್ತದೆ. ನಾನು ಕ್ಷೇತ್ರ ಬದಲಿಸ್ತೀನಾ ಅನ್ನೋ ಚರ್ಚೆ ಈಗ ಬೇಡ. ನಾನು ರಾಮ ನಗರಕ್ಕೆ ಸೀಮಿತ ಆಗಿಲ್ಲ, ಮಂಡ್ಯಕ್ಕೆ ಬರ್ತಿಲ್ಲಾ ಅನ್ನೋದು ಸುಳ್ಳು. ನಾನು ಮದ್ದೂರಿಗೆ ಬಂದು ಏಕೆ ಸ್ಪರ್ಧಿಸಲಿ, ಇಲ್ಲಿ ಹಿರಿಯರಾದ ತಮ್ಮಣ್ಣ ಸಾಹೇಬ್ರು ಇಲ್ವಾ ಎಂದು ಹೇಳಿದ್ದಾರೆ.