ಭಾರತದ ಜೊತೆ ಗಡಿತಂಟೆಗೆ ಬಂದು ಚೀನಾ ಅನುಭವಿಸಿದ ನಷ್ಟ ಎಷ್ಟು ಗೊತ್ತಾ?
Do you know how much loss China suffered by coming to the border with India?
ಚೀನಾ ಕಳೆದ ಕೆಲ ವರ್ಷಗಳಿಂದ ಭಾರತದ ಜೊತೆ ಗಡಿತಂಟೆ ನಡೆಸತೊಡಗಿದೆ. 2017ರ ಡೋಕ್ಲಾಮ್ ಸಂಘರ್ಷದ ಬಳಿಕ ಭಾರತ ತನ್ನ ಚೀನಾ ಅವಲಂಬನೆ ಕಡಿಮೆ ಮಾಡುವ ನಿಟ್ಟಿನಲ್ಲಿ ಆಲೋಚಿಸ ತೊಡಗಿತು. ಆದರೆ ವೇಗ ಸಿಕ್ಕಿದ್ದು 2020ರಲ್ಲಿ.
ಹೌದು, 2020ರಲ್ಲಿ ಚೀನಾ ಲಡಾಖ್ ಗಡಿಭಾಗದ ವಿವಿಧೆಡೆ ಭಾರತದ ಭಾಗವನ್ನು ಆಕ್ರಮಿಸಲು ಯತ್ನಿಸಿತ್ತು. ಗಾಲ್ವನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ 24ಕ್ಕೂ ಹೆಚ್ಚು ಭಾರತೀಯ ಯೋಧರನ್ನು ಚೀನೀಯರು ಬಲಿತೆಗೆದುಕೊಂಡಿದ್ದರು.
ಈ ಘಟನೆಯ ನಂತರ ದೇಶದಲ್ಲಿ ಚೀನಾದ ವಿರುದ್ಧ ಟೀಕೆಗಳು ಕೇಳಿಬಂದವು. ಮತ್ತು ಚೀನಾ ಮುಟ್ಟಿ ನೋಡಿಕೊಳ್ಳುವಾ ಹಾಗೆ ತಿರುಗೇಟು ನೀಡಲೇಬೇಕೆಂದು ದೇಶವಾಸಿಗಳ ಕೂಗು ಒಕ್ಕೊರಲಿನಿಂದ ಹೊರ ಬಂದಿತ್ತು.
ಇದೇ ಸೂಕ್ತ ಅವಕಾಶವೆಂದು ಭಾರತ ಚೀನಾಕ್ಕೆ ಆರ್ಥಿಕ ಹೊಡೆತ ನೀಡಲು ಮುಂದಾಯ್ತು. ಅದರಂತೆ ಭಾರತ ಚೀನಾದ ಅನೇಕ ಆ್ಯಪ್ಗಳನ್ನು ನಿಷೇಧಿಸಿತು. 2020ರ ಬಳಿಕ ಭಾರತ ತನ್ನ ಬೆಳವಣಿಗೆಯ ಹಾದಿಯಿಂದ ಚೀನಾವನ್ನು ಬಹುತೇಕ ಹೊರಗಿಡುತ್ತಾ ಬಂದಿತು.
ಮೊನ್ನೆಮೊನ್ನೆ, ಲ್ಯಾಪ್‌ಟಾಪ್, ಕಂಪ್ಯೂಟರ್ ಮತ್ತು ಟ್ಯಾಬ್ಲೆಟ್ಗಳ ಆಮದನ್ನು ಭಾರತ ನಿರ್ಬಂಧಿಸಿದ್ದು ಇದೇ ಆಲೋಚನೆಯಲ್ಲಿ ಎಂಬ ಮಾತು ಕೇಳಿಬರುತ್ತಿದೆ.
ಇದರ ಮುಂದುವರೆದ ಭಾಗವಾಗಿ ಚೀನಾದ ಎಲೆಕ್ಟ್ರಿಕ್ ಕಾರು ತಯಾರಕ ಬಿವೈಡಿ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಘಟಕಗಳನ್ನು ಆರಂಭಿಸಲು 1 ಬಿಲಿಯನ್ ಡಾಲರ್ ಹೂಡಿಕೆ ಪ್ರಸ್ತಾವವನ್ನು ಭಾರತ ಸರ್ಕಾರದ ಮುಂದಿಟ್ಟಿತ್ತು. ಆದರೆ, ಇದಕ್ಕೆ ಸರ್ಕಾರದಿಂದ ಅನುಮೋದನೆ ದೊರೆಯದ ಕಾರಣ, ಬಿವೈಡಿ ತನ್ನ ಯೋಜನೆಯನ್ನು ನಿಲ್ಲಿಸಿತು.
ಚೀನಾದ ಮತ್ತೊಂದು ಆಟೊಮೊಬೈಲ್ ಕಂಪನಿ ಗ್ರೇಟ್ ವಾಲ್ ಮೋಟಾರ್ ಕೂಡ ಭಾರತದಲ್ಲಿ 1 ಬಿಲಿಯನ್ ಡಾಲರ್ ಹಣದ ಹೂಡಿಕೆ ಮಾಡಲು ಯೋಜಿಸಿತ್ತು. ಇದಕ್ಕೂ ಕೂಡ ಭಾರತ ಸರ್ಕಾರದ ಅನುಮೋದನೆ ದೊರಕಲಿಲ್ಲ.
ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿರುವ ಚೀನೀ ಕಂಪನಿ ಶಿಯೋಮಿ ಭಾರತದಲ್ಲಿ ಕಾನೂನು ಕ್ರಮ ಎದುರಿಸುತ್ತಿದೆ. ರಾಯಲ್ಟಿ ಅಥವಾ ರಾಯಧನದ ಹೆಸರಿನಲ್ಲಿ ವಿದೇಶೀ ಸಂಸ್ಥೆಗಳಿಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಆರೋಪ ಶಿಯೋಮಿ ಮೇಲಿದೆ. ಭಾರತದ ಕಾನೂನು ಪಾಲನಾ ಸಂಸ್ಥೆಯೊಂದು ಶಿಯೋಮಿಯ 670 ಮಿಲಿಯನ್ ಡಾಲರ್ ಮೊತ್ತದ ಹಣವನ್ನು ಬ್ಯಾಂಕಿನಲ್ಲಿ ಫ್ರೀಜ್ ಮಾಡಿಟ್ಟಿದೆ.
2020ರ ಬಳಿಕ ಚೀನಾದ 300ಕ್ಕೂ ಹೆಚ್ಚು ಮೊಬೈಲ್ ಆ್ಯಪ್ಗಳನ್ನು ಭಾರತ ನಿಷೇಧಿಸಿದೆ. ಇದರಲ್ಲಿ ಟಿಕ್ ಟಾಕ್ ಮೊದಲಾದ ಜನಪ್ರಿಯ ಆ್ಯಪ್ಗಳೂ ಸೇರಿವೆ. ಟಿಕ್ ಟಾಕ್ ನಿಷೇಧವಾಗಿದ್ದು ಚೀನಾಗೆ ತುಸು ಘಾಸಿಯನ್ನೂ ಮಾಡಿದೆ.
ಅಂತಾರಾಷ್ಟ್ರೀಯ ಹೂಡಿಕೆಯಲ್ಲಿ ಭಾರತ ಒಂದು ನಿಯಮ ಬದಲಿಸಿದೆ. ಅದು ನೆರೆಯ ದೇಶಗಳ ಕಂಪನಿಗಳಿಂದ ಭಾರತದಲ್ಲಿ ಮಾಡಲಾಗುವ ಹೂಡಿಕೆಗಳಿಗೆ ಪ್ರಾಧಿಕಾರದ ಅನುಮೋದನೆ ಬೇಕೆಂಬ ನಿಯಮ. ಚೀನಾವನ್ನು ಗಮನದಲ್ಲಿಟ್ಟುಕೊಂಡು ಈ ನಿಯಮ ಮಾಡಲಾಗಿದೆ. ಹೂಡಿಕೆಗಳನ್ನು ಮಾಡಿ ಆ ಮೂಲಕ ದೇಶದ ಮೇಲೆ ಹಿಡಿತ ಸಾಧಿಸುವ ಚೀನಾದ ಹುನ್ನಾರವನ್ನು ಹತ್ತಿಕ್ಕುವುದು ಭಾರತದ ಪ್ರಯತ್ನವಾಗಿದೆ.








