ಏಕದಿನ ಕ್ರಿಕೆಟ್ ಹುಟ್ಟಿದ್ದು ಹೇಗೆ ಗೊತ್ತಾ..?
ನಾವು ಒಂದು ಸಾರಿ ಚರಿತ್ರೆಯ ಪುಟಗಳನ್ನ ತೆರೆದು ನೋಡಿದ್ರೆ ಪ್ರತಿಯೊಂದು ಪರಿಣಾಮಕ್ಕೆ ಅಕಸ್ಮಾತಾಗಿ ನಡೆಯುವ ಘಟನೆಗಳೇ ಹೆಚ್ಚಾಗಿ ಕಾರಣವಾಗಿರುತ್ತೆ. ಅದೇ ರೀತಿ ಕ್ರಿಕೆಟ್ ನಲ್ಲೂ ಕೆಲವೊಂದು ಸಡನ್ ಆಕ್ಸಿಡೆಂಟ್ ಗಳಿಂದ ಅನೇಕ ಪರಿಣಾಮಗಳು ಆಗಿವೆ. ಸಾಮಾನ್ಯ ಕ್ರಿಕೆಟ್ ಆಟಗಾರರು ಅಸಾಮಾನ್ಯ ಕ್ರಿಕೆಟ್ ಆಟಗಾರರಾಗಿ ಬದಲಾಗೋಕು ಕೆಲವೊಂದು ಸಡನ್ ನಡೆದ ಘಟನೆಗಳೇ ಕಾರಣವಾಗಿರುತ್ತೆ. ಹಾಗಾದ್ರೆ ಕ್ರಿಕೆಟ್ ಇತಿಹಾಸದಲ್ಲಿ ನಡೆದ ಆ ಆಕ್ಸಿಡೆಂಟಲ್ ಘಟನೆ..? ಅದು ಹೇಗೆ ಒನ್ ಡೇ ಕ್ರಿಕೆಟ್ ಮಾದರಿಯನ್ನ ಹುಟ್ಟು ಹಾಕಿತು ಅನ್ನೋದನ್ನ ಮುಂದೆ ಓದಿ..
ನಮಗೆಲ್ಲರಿಗೂ ತಿಳಿದಿರುವಂತೆ ಟೆಸ್ಟ್ ಮ್ಯಾಚ್ ಐದು ದಿನಗಳ ಕಾಲ ನಡೆಯುತ್ತೆ. ಆದ್ರೆ ಎರಡನೇ ಮಹಾಯುದ್ಧಕ್ಕೂ ಹಿಂದೆ ಟೈಂ ಲೆಸ್ ಟೆಸ್ಟ್ ಮ್ಯಾಚ್ ಗಳು ನಡೆಯುತ್ತಿದ್ದವು. ಆ ರೀತಿ 99 ಟೆಸ್ಟ್ ಮ್ಯಾಚ್ ಗಳು ನಡೆದಿದೆ. ಕೆಲವೊಂದು ಪಂದ್ಯಗಳು ಹತ್ತು ದಿನಕ್ಕೂ ಹೆಚ್ಚು ದಿನಗಳ ಕಾಲ ನಡೆದಿದೆ. ಈ ರೀತಿ ಕೊನೆಯದಾಗಿ ಇಂಗ್ಲೆಂಡ್ ಮತ್ತು ಸೌತ್ ಆಫ್ರೀಕಾ ನಡುವೆ ಪಂದ್ಯ ನಡೆದಿದೆ. ಈ ಪಂದ್ಯ ಹನ್ನೆರಡು ದಿನಗಳ ಕಾಲ ನಡೆದಿತ್ತು.
1877 ರಲ್ಲಿ ಟೆಸ್ಟ್ ಕ್ರಿಕೆಟ್ ಶುರುವಾದ್ರೆ 1971 ವರೆಗೂ ಒಂದೇ ಮಾದರಿಯ ಕ್ರಿಕೆಟ್ ಇತ್ತು.
ಆದ್ರೆ 1971ರಲ್ಲಿ ಏಕದಿನ ಕ್ರಿಕೆಟ್ ಮಾದರಿ ಹುಟ್ಟುಕೊಳ್ತು. ಅದಕ್ಕೆ ಕಾರಣ ಏನು ಅಂದ್ರೆ 1970-71ರಲ್ಲಿ ಆಸ್ಟ್ರೇಲಿಯಾದಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ಆಶಸ್ ಸರಣಿ ನಡೆಯುತ್ತಿತ್ತು. ಮೂರನೇ ಟೆಸ್ಟ್ ಪಂದ್ಯ ಮೆಲ್ಬೋರ್ನ್ ನಲ್ಲಿ ನಡೆಯಬೇಕಿತ್ತು. ಆದ್ರೆ ಅಲ್ಲಿ ಭಾರಿ ಮಳೆ ಸುರಿಯುತ್ತಿತ್ತು. ಹೀಗಾಗಿ ಮೊದಲ ಮೂರು ದಿನಗಳ ಕಾಲ ಪಂದ್ಯ ಆರಂಭವಾಗಿಲೇ ಇಲ್ಲ. ಇನ್ನುಳಿದ ಎರಡು ದಿನಗಳಲ್ಲಿ ಫಲಿತಾಂಶ ಬರುವ ಸಾಧ್ಯತೆಗಳು ಕಡಿಮೆ ಇತ್ತು. ಹೀಗಾಗಿ ಅಲ್ಲಿನ ಆಯೋಜಕರು ತಮ್ಮ ನಷ್ಟವನ್ನ ಸರಿದೂಗಿಸಲು 40 ಓವರ್ ಗಳ ಪಂದ್ಯ ನಡೆಸುವ ಪ್ಲಾನ್ ಮಾಡಿಕೊಂಡರು. ಅದೇ ರೀತಿ ಪಂದ್ಯವನ್ನ ಕೂಡ ನಡೆಸಿದ್ರು. ಇದಕ್ಕೆ ಜನ ಹೆಚ್ಚಾಗಿ ಸೇರಿ ಪ್ರೋತ್ಸಾಹಿಸಿದ್ರು. ಈ ಮಾದರಿ ಎಲ್ಲರಿಗೂ ಇಷ್ಟವಾಯ್ತು. ಅಲ್ಲಿನಿಂದ ಕ್ರಿಕೆಟ್ ನಲ್ಲಿ ಏಕದಿನ ಮಾದರಿ ಪಂದ್ಯಗಳು ಹುಟ್ಟಿಕೊಂಡವು.