ಬೆಂಗಳೂರು: ರೇಣುಕಾಸ್ವಾಮಿ (Ranukaswamy Murder Case) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿಜಂಚೆ ಆರೋಪಿಗಳು ಈಗಾಗಲೇ ಜೈಲಿನಲ್ಲಿದ್ದಾರೆ. 17 ಜನ ಜೈಲಿನಲ್ಲಿದ್ದು, 14 ಜನರ ಮೇಲೆ ಕೊಲೆ ಆರೋಪವಿದೆ. ಮೂವರು ಸಾಕ್ಷಿಗಳಾಗಿದ್ದಾರೆ. ಇಂದು ಪೊಲೀಸರು ಕೋರ್ಟ್ ನಲ್ಲಿ ಮೃತದೇಹದ ಮೇಲೆ 39 ಗಾಯದ ಗುರುತುಗಳಿವೆ ಎಂದು ಕೋರ್ಟ್ಗೆ ಪೊಲೀಸರು ಸಲ್ಲಿಸಿದ ಚಾರ್ಜ್ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ರೇಣುಕಾಸ್ವಾಮಿ ಮೇಲೆ ಭೀಕರ ಹಲ್ಲೆ ನಡೆಸಿರುವುದಾಗಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಕೊಲೆಯ ಭೀಕರತೆ ಬಗ್ಗೆ ಮಾಹಿತಿ ಇದೆ. ರೇಣುಕಾಸ್ವಾಮಿ ಮೃತದೇಹದ ಮೇಲೆ 39 ಗಾಯದ ಗುರುತುಗಳು ಪತ್ತೆಯಾಗಿವೆ. ಎದೆ ಮೂಳೆ ಮುರಿಯುವಷ್ಟರ ಮಟ್ಟಿಗೆ ಆತನನ್ನು ಥಳಿಸಿದ್ದಾರೆ. ತಲೆಯಲ್ಲಿ ಆಳವಾದ ಗಾಯ ಪತ್ತೆಯಾಗಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ಇದೆ.
ವೃಷಣಕ್ಕೆ ಹಾನಿಯಾಗಿದೆ. ಕರೆಂಟ್ ಶಾಕ್ ಕೊಟ್ಟು ಗ್ಯಾಂಗ್ ಕೊಲೆ ಮಾಡಿದೆ. ಆರೋಪಿಗಳು ಅತಿ ಕ್ರೂರವಾಗಿ ರೇಣುಕಾಸ್ವಾಮಿ ಕೊಲೆ ಮಾಡಿದ್ದಾರೆ ಎಂಬುವುದನ್ನು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.