ಹೈಡ್ರಾಕ್ಸಿಕ್ಲೋರೋಕ್ವಿನ್, ರೆಮ್ ಡೆಸಿವಿಯರ್ ಪ್ರಭಾವ ಮತ್ತು ಪರಿಣಾಮಗಳ ಕುರಿತು ಬ್ರಿಟನ್ ಸಂಶೋಧಕರ ಅಧ್ಯಯನದ ವರದಿಗಳೇನು ಗೊತ್ತಾ?
ಹೊಸದಿಲ್ಲಿ, ಜುಲೈ 27: ಜಾಗತಿಕ ಮಟ್ಟದಲ್ಲಿ ಕೋವಿಡ್-19 ಗೆ ಯಾವ ಚಿಕಿತ್ಸೆಗಳು ಹೇಗೆ ಕೆಲಸ ಮಾಡುತ್ತಿವೆ ಅಥವಾ ಯಾವುದು ಸಮರ್ಪಕವಾಗಿ ಕೆಲಸ ಮಾಡುವುದಿಲ್ಲ ಎಂಬುದರ ಕುರಿತು ಬ್ರಿಟೀಶ್ ಸಂಶೋಧಕರ ಇತ್ತೀಚೆಗಿನ ಕೆಲವು ಹೊಸ ಅಧ್ಯಯನಗಳು ಹೆಚ್ಚಿನ ಮಾಹಿತಿ ನೀಡಿವೆ. ಉತ್ತಮ ಗುಣಮಟ್ಟದ ವಿಧಾನಗಳು ವಿಶ್ವಾಸಾರ್ಹ ಫಲಿತಾಂಶಗಳನ್ನು ನೀಡಿವೆ ಎನ್ನುವುದು ಈ ಹೊಸ ಅಧ್ಯಯನದಿಂದ ತಿಳಿದುಬಂದಿದೆ.
ಬ್ರಿಟಿಷ್ ಸಂಶೋಧಕರು ಶುಕ್ರವಾರ ತಮ್ಮ ಸಂಶೋಧನೆಯಲ್ಲಿ ಕೊರೋನಾ ಸೋಂಕಿನಿಂದ ಸುಧಾರಿಸಲು ಸಹಾಯ ಮಾಡುವ ಏಕೈಕ ಔಷಧ ಡೆಕ್ಸಮೆಥಾಸೊನ್ ಎಂಬ ಅಗ್ಗದ ಸ್ಟೀರಾಯ್ಡ್ ಬಗ್ಗೆ ಅಧ್ಯಯನ ವರದಿಯೊಂದನ್ನು ಪ್ರಕಟಿಸಿದ್ದಾರೆ.
ಮಲೇರಿಯಾ ಔಷಧಿ ಹೈಡ್ರಾಕ್ಸಿಕ್ಲೋರೋಕ್ವಿನ್ ಕೇವಲ ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳಿಗೆ ಸಹಾಯ ಮಾಡುವುದಿಲ್ಲ ಎನ್ನುವುದರ ಕುರಿತಾಗಿ ಇತರ ಎರಡು ಅಧ್ಯಯನಗಳಲ್ಲಿ ಬೆಳಕು ಚೆಲ್ಲಲಾಗಿದೆ.
ಈ ರೀತಿಯ ಅಧ್ಯಯನಗಳ ನಡೆಯುವ ತಿಂಗಳುಗಳ ಮೊದಲು, ವೈದ್ಯರು ಮತ್ತು ರೋಗಿಗಳು ತಮ್ಮದೇ ಆದ ಪ್ರತ್ಯೇಕ ಚಿಕಿತ್ಸೆಯನ್ನು ಪ್ರಯತ್ನಿಸಿದ್ದರಿಂದ ಸ್ಪಷ್ಟವಾದ ಉತ್ತರಗಳು ಸಿಗುವಲ್ಲಿ ವಿಫಲವಾಗಿದೆ. ವೈದ್ಯಕೀಯ ಕ್ಷೇತ್ರವು ಮುಂದುವರಿಯಲು ಮತ್ತು ರೋಗಿಗಳ ಫಲಿತಾಂಶಗಳು ಸುಧಾರಿಸಲು, ಆಗಾಗ ಇಂತಹ ಅನಿರ್ದಿಷ್ಟ ಅಧ್ಯಯನಗಳು ಅಗತ್ಯ ಎಂದು ಬ್ರಿಟಿಷ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್‌ನ ಡಾ. ಆಂಥೋನಿ ಫೌಸಿ ಮತ್ತು ಹೆಚ್. ಕ್ಲಿಫರ್ಡ್ ಲೇನ್ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿನ ತಮ್ಮ ವರದಿಯಲ್ಲಿ ಬರೆದುಕೊಂಡಿದ್ದಾರೆ. ಚಿಕಿತ್ಸೆಗಳು ಮತ್ತು ಪರೀಕ್ಷಾ ಸಂಯೋಜನೆಗಳನ್ನು ಹೋಲಿಸುವ ಹೆಚ್ಚಿನ ಅಧ್ಯಯನಗಳನ್ನು ಮಾಡುವ ಸಮಯ ಇದೀಗ ಬಂದಿದೆ ಎಂದು ನ್ಯೂಯಾರ್ಕ್‌ನ ಸ್ಲೋನ್ ಕೆಟ್ಟರಿಂಗ್ ಕ್ಯಾನ್ಸರ್ ಕೇಂದ್ರದ ಆರೋಗ್ಯ ನೀತಿ ತಜ್ಞ ಡಾ. ಪೀಟರ್ ಬಾಚ್ ಹೇಳಿದ್ದಾರೆ
ಇತ್ತೀಚಿನ ಚಿಕಿತ್ಸೆಯ ಬೆಳವಣಿಗೆಗಳ ಮುಖ್ಯಾಂಶಗಳು ಇಲ್ಲಿವೆ:
1) ಡೆಕ್ಸಮೆಥಾಸೊನ್:
ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ನೇತೃತ್ವದ ಬ್ರಿಟಿಷ್ ಅಧ್ಯಯನವು ಉರಿಯೂತವನ್ನು ತಗ್ಗಿಸಲು ವ್ಯಾಪಕವಾಗಿ ಬಳಸಲಾಗುವ ಒಂದು ರೀತಿಯ ಸ್ಟೀರಾಯ್ಡ್ ಅನ್ನು ಪರೀಕ್ಷಿಸಿತು. ಇದು ತೀವ್ರವಾದ ಲಕ್ಷಣಗಳುಳ್ಳ ಮತ್ತು ಕೋವಿಡ್-19 ಸೋಂಕಿನ ನಂತರದ ಹಂತಗಳಲ್ಲಿ ರೋಗಿಗಳಿಗೆ ಮಾರಕವಾಗಬಹುದು ಎನ್ನುವ ಆಘಾತಕಾರಿ ಸಂಗತಿಯನ್ನು ಬಹಿರಂಗಗೊಳಿಸಲಾಗಿದೆ. ಈ ಔಷಧವನ್ನು ನೀಡಿದ ಸುಮಾರು 2,104 ರೋಗಿಗಳ ಜೊತೆಗೆ ಸಾಮಾನ್ಯ ಆರೈಕೆ ಪಡೆಯುವ 4,321 ರೋಗಿಗಳಿಗೆ ಲಕ್ಷಣಗಳನ್ನು ಹೋಲಿಕೆ ಮಾಡಿ ಅಧ್ಯಯನ ವರದಿ ತಯಾರಿಸಲಾಗಿದೆ.
ಉಸಿರಾಟದ ಯಂತ್ರಗಳ ಅಗತ್ಯವಿರುವ ರೋಗಿಗಳ ಸಾವುಗಳನ್ನು ಇದು 36% ರಷ್ಟು ಕಡಿಮೆ ಮಾಡಿದೆ. ಈ ಔಷಧದ ಚಿಕಿತ್ಸೆ ಪಡೆದ ಮೇಲೆ ಶೇ 41% ರಷ್ಟು ಸಾಮಾನ್ಯ ಆರೈಕೆ ನೀಡಲಾಗಿರುವ ರೋಗಿಗಳಲ್ಲಿ ಶೇ. 29% ಜನರು ಸಾವನ್ನಪ್ಪಿದ್ದಾರೆ. ಕೇವಲ ಪೂರಕ ಆಮ್ಲಜನಕದ ಅಗತ್ಯವಿರುವ ರೋಗಿಗಳಿಗೆ ಮಾತ್ರ ಇದು ಸಾವಿನ ಅಪಾಯವನ್ನು 18% ರಷ್ಟು ತಡೆಯುತ್ತದೆ. ಔಷಧ ಪಡೆದ ಮೇಲೆ 23% ಜನರು ಮತ್ತು ಇತರ ವರ್ಗದ 26% ರಷ್ಟು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಆದಾಗ್ಯೂ, ಇದು ಪ್ರಾರಂಭಿಕ ಹಂತಗಳಲ್ಲಿ ಅಥವಾ ಅನಾರೋಗ್ಯದ ಸೌಮ್ಯ ಪ್ರಕರಣಗಳಲ್ಲಿ ಹಾನಿಕಾರಕವೆಂದು ತೋರುತ್ತಿದೆ. ಔಷಧ ಪಡೆದವರಲ್ಲಿ 18% ಜನರು ಸಾವನ್ನಪ್ಪಿದರೆ, 14% ಜನರು ಸಾಮಾನ್ಯ ಆರೈಕೆಯನ್ನು ಪಡೆದು ಚೇತರಿಸಿಕೊಂಡಿದ್ದಾರೆ. ಇದು ಯಾರಿಗೆ ಪ್ರಯೋಜನ ಮತ್ತು ಇದರಿಂದ ಯಾರಿಗೆ ಉಪಯೋಗವಿಲ್ಲ ಎಂಬ ಸ್ಪಷ್ಟತೆ ದೊರೆತರೆ ಬಹುಶಃ ಅನೇಕ ಜೀವಗಳನ್ನು ಉಳಿಸಬಹುದು ಎಂದು ಫೌಸಿ ಮತ್ತು ಲೇನ್ ಅಭಿಪ್ರಾಯಪಟ್ಟಿದ್ದಾರೆ.
2) ಹೈಡ್ರಾಕ್ಸಿಕ್ಲೋರೋಕ್ವಿನ್:
ಅದೇ ಆಕ್ಸ್‌ಫರ್ಡ್ ಅಧ್ಯಯನವು ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಕಠಿಣ ರೀತಿಯಲ್ಲಿ ಪರೀಕ್ಷೆ ನಡೆಸಿದೆ. ಸಂಶೋಧಕರು ಈ ಹಿಂದೆ ಕೋವಿಡ್-19 ಯೊಂದಿಗೆ ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ಇದು ಸಹಾಯ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
28 ದಿನಗಳ ನಂತರ, ಹೈಡ್ರಾಕ್ಸಿಕ್ಲೋರೊಕ್ವಿನ್ನಲ್ಲಿ ಸುಮಾರು 25.7% ರಷ್ಟು ಸಾಮಾನ್ಯ ಆರೈಕೆಯನ್ನು ಪಡೆದರೆ, 23.5% ನಷ್ಟು ಜನರು ಸಾವನ್ನಪ್ಪಿದ್ದಾರೆ. ಆಕಸ್ಮಿಕವಾಗಿ ಈ ಸಾವುಗಳು ಸಂಭವಿಸಿರಬಹುದು ಎಂದು ಮೊದಲು ನಂಬಲಾಗಿತ್ತು. ಆದರೆ ಈಗ, ವಿಜ್ಞಾನಿಗಳ ಸಂಶೋಧನಾ ತಾಣದಲ್ಲಿ ಪ್ರಕಟವಾದ ವಿವರಗಳು ಈ ಔಷದಿಯಿಂದಾಗಿ ಸಾವುಗಳು ಸಂಭವಿಸಿರಬಹುದು ಎನ್ನುವ ಅನುಮಾನ ಹುಟ್ಟಿಸಿದೆ.
ಹೈಡ್ರಾಕ್ಸಿಕ್ಲೋರೋಕ್ವಿನ್ ನೀಡಿದ ರೋಗಿಗಳಲ್ಲಿ 60% ನಷ್ಟು ಮಂದಿ 28 ದಿನಗಳ ನಂತರ ಆಸ್ಪತ್ರೆಯಿಂದ ಜೀವಂತ ಹೊರಬರುವವರ ಸಂಖ್ಯೆ ಕಡಿಮೆ ಇದೆ. ಶೇ. 63% ರಷ್ಟು ಜನರು ಸಾಮಾನ್ಯ ಆರೈಕೆ ಪಡೆದು ಬದುಕಿದ್ದಾರೆ. ಈ ಚಿಕಿತ್ಸೆಯನ್ನು ಪ್ರಾರಂಭಿಸಿದಾಗ ಉಸಿರಾಟದ ಯಂತ್ರಗಳ ಅಗತ್ಯವಿಲ್ಲದವರು ಸಹ 1% ನಷ್ಟು ರೋಗಿಗಳು ಸಾಯುವ ಸಾಧ್ಯತೆ ಹೆಚ್ಚು ಎಂದು ತಿಳಿಸಲಾಗಿದೆ. ಇತರ ಎರಡು ಪ್ರಯೋಗಗಳು ಔಷಧದ ಆರಂಭಿಕ ಚಿಕಿತ್ಸೆಯು ಸೌಮ್ಯ ಕೋವಿಡ್-19 ಹೊಂದಿರುವ ಹೊರರೋಗಿಗಳಿಗೆ ಸಹಾಯ ಮಾಡುವುದಿಲ್ಲ ಎಂದು ತಿಳಿದುಬಂದಿದೆ.
ಸಾಂಕ್ರಾಮಿಕ ಕಾಯಿಲೆಗಳ ಜರ್ನಲ್ ನಲ್ಲಿ ಪ್ರಕಟವಾದ ಸ್ಪೇನ್‌ನ 293 ಜನರ ಅಧ್ಯಯನವು ವೈರಸ್ ರೋಗಿಗಳ ಪ್ರಮಾಣವನ್ನು ಕಡಿಮೆ ಮಾಡುವುದರಲ್ಲಿ, ಹದಗೆಡುತ್ತಿರುವ ಮತ್ತು ಆಸ್ಪತ್ರೆಗೆ ದಾಖಲಾಗುವ ಪ್ರಮಾಣದಲ್ಲಿ ಅಥವಾ ಚೇತರಿಸಿಕೊಳ್ಳುವ ಸಮಯದಲ್ಲಿ ಯಾವುದೇ ಮಹತ್ವದ ವ್ಯತ್ಯಾಸಗಳನ್ನು ಕಂಡುಕೊಂಡಿಲ್ಲ.
423 ಜನ ಲಘು ಅನಾರೋಗ್ಯದ ಕೋವಿಡ್-19 ರೋಗಿಗಳ ಅನ್ನಲ್ಸ್ ಆಫ್ ಇಂಟರ್ನಲ್ ಮೆಡಿಸಿನ್‌ನಲ್ಲಿ ಮಿನ್ನೇಸೋಟ ವಿಶ್ವವಿದ್ಯಾಲಯದ ವೈದ್ಯರು ನಡೆಸಿದ ಇದೇ ರೀತಿಯ ಅಧ್ಯಯನವು ಹೈಡ್ರಾಕ್ಸಿಕ್ಲೋರೋಕ್ವಿನ್ ರೋಗಲಕ್ಷಣದ ತೀವ್ರತೆಯನ್ನು ಗಣನೀಯವಾಗಿ ಕಡಿಮೆಗೊಳಿಸಲಿಲ್ಲ ಮತ್ತು ಹೆಚ್ಚಿನ ಅಡ್ಡಪರಿಣಾಮಗಳನ್ನು ತಂದಿದೆ ಎಂದು ಸಾಬೀತು ಮಾಡಲಾಗಿದೆ.
3) ರೆಮ್ ಡೆಸಿವಿಯರ್:
ಕೋವಿಡ್-19 ರೋಗಿಗಳಿಗೆ ಸಹಾಯ ಮಾಡುವ ಇತರ ಚಿಕಿತ್ಸೆಯಲ್ಲಿ ರೆಮ್ಡೆಸಿವಿರ್ ಕೂಡ ಒಂದು. ಇದು ಆಂಟಿವೈರಲ್ ಔಷದವಾಗಿದ್ದು, ಕರೋನಾ ಸೋಂಕಿತರಿಗೆ ರೋಗನಿಯಂತ್ರಣಕ್ಕಾಗಿ ಈ ಮಾತ್ರೆ ನೀಡಲಾಗುತ್ತಿದೆ.
ತೀವ್ರವಾದ ಕೋವಿಡ್ ಸೋಂಕಿಗೆ ರೆಮ್‌ಡೆಸಿವಿರ್‌ನ ಪಾತ್ರವನ್ನು ನಾವು ಕಂಡುಹಿಡಿಯಬೇಕಾಗಿದೆ ಎಂದು ಮೆಮೋರಿಯಲ್ ಸ್ಲೋನ್ ಕೆಟ್ಟರಿಂಗ್ಸ್ ಬ್ಯಾಚ್ ಇಮೇಲ್ ನಲ್ಲಿ ಬರೆದಿದ್ದಾರೆ. ಈ ಔಷಧವನ್ನು ಈಗ ಡೆಕ್ಸಮೆಥಾಸೊನ್ ಸಂಯೋಜನೆಯೊಂದಿಗೆ ಪರೀಕ್ಷಿಸಬೇಕಾಗಿದೆ. ರೆಮ್ ಡೆಸಿವಿರ್ ಅಧ್ಯಯನದ ವಿವರಗಳನ್ನು ಇನ್ನೂ ಪ್ರಕಟಿಸಲಾಗಿಲ್ಲ, ಆದರೆ ಎಷ್ಟು ರೋಗಿಗಳು ಸ್ಟೀರಾಯ್ಡ್ಗಳು ಮತ್ತು ಹೈಡ್ರಾಕ್ಸಿಕ್ಲೋರೋಕ್ವಿನ್ ನಂತಹ ಇತರ ಔಷಧಿಗಳನ್ನು ಪಡೆದಿದ್ದಾರೆ ಎಂಬುದನ್ನು ತಿಳಿಯಲು ಸಂಶೋಧಕರು ಉತ್ಸುಕರಾಗಿದ್ದಾರೆ.
ಏತನ್ಮಧ್ಯೆ, ಈಗ ಐವಿ ಆಗಿ ನೀಡಲಾಗಿರುವ ರಿಮೆಡೆಸಿವಿರ್ ಅನ್ನು ತಯಾರಿಸುವ ಗಿಲ್ಯಾಡ್ ಸೈನ್ಸಸ್, ಇನ್ಹೇಲ್ ಮಾಡಿದ ಆವೃತ್ತಿಯನ್ನು ಪರೀಕ್ಷಿಸಲು ಪ್ರಾರಂಭಿಸಿದೆ, ಅದು ಕಡಿಮೆ ಅನಾರೋಗ್ಯದ ಕೋವಿಡ್ -19 ರೋಗಿಗಳಲ್ಲಿ ಪ್ರಯತ್ನಿಸಲು ಅನುವು ಮಾಡಿಕೊಡುತ್ತದೆ ಮತ್ತು ಸಾಧ್ಯವಾದಷ್ಟು ಕಾಯಿಲೆಯಿಂದ ಬಳಲುವ ರೋಗಿಗಳನ್ನು ಆಸ್ಪತ್ರೆಗೆ ದಾಖಲಾಗದಂತೆ ತಡೆಯಬಹುದು ಎನ್ನಲಾಗಿದೆ.
ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಈ ಬ್ರಿಟನ್ ಸಂಶೋಧಕರು ಯುರೋಪಿಯನ್ ರೋಗಿಗಳ ಮೇಲೆ ಹೈಡ್ರಾಕ್ಸಿ ಕ್ಲೋರೋಕ್ವಿನ್ ಮತ್ತು ರೆಮ್ ಡೆಸಿವಿರ್ ನಂತಹ ಮಾತ್ರೆಗಳ ಪ್ರಮಾಣ ಮತ್ತು ಪರಿಣಾಮಗಳನ್ನು ಅಧ್ಯಯನ ಮಾಡಿದ್ದಾರೆ. ಭಾರತದಂತಹ ರಾಷ್ಟ್ರಗಳಲ್ಲಿ ಇವೇ ಎರಡು ಮಾತ್ರೆಗಳನ್ನು ಪ್ರಮುಖವಾಗಿ ಕರೋನಾ ಸೋಂಕಿತರಿಗೆ ನೀಡಲಾಗುತ್ತಿದೆ ಮತ್ತು ರೋಗಿಗಳು ಚೇತರಿಸಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ನಮ್ಮಲ್ಲೂ ಈ ರೀತಿಯ ಆಮೂಲಾಗ್ರ ಸಂಶೋಧನೆಗಳಾಗಬೇಕಿದೆ.