ADVERTISEMENT
Sunday, August 9, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

fifa world cup 2026-ಭವಿಷ್ಯದ ಫುಟ್‌ಬಾಲ್ ಅಧಿಪತಿಯ ಹೆಸರಿನ ಮಹಿಮೆ ಏನು ಗೊತ್ತಾ..? ಆ ಹೆಸರಿನ ಹಿಂದಿದೆ ರೋಚಕ ಸ್ಟೋರಿ..!

admin by admin
July 14, 2026
in Newsbeat, Sports, ಕ್ರೀಡೆ
Spain superstar Lamine Yamal

Spain superstar Lamine Yamal

Share on FacebookShare on TwitterShare on WhatsappShare on Telegram

ಈ ಹೆಸರು ಆತನ ಬರೀ ಒಂದು ಹೆಸರಲ್ಲ. ಈ ಹೆಸರಿನ ಹಿಂದಿದೆ ಬೆಲೆ ಕಟ್ಟಲಾಗದ ನೆನಪಿನ ಪ್ರೀತಿ..! ಈ ಹೆಸರಿನಲ್ಲಿದೆ ಹೆತ್ತವರು ಮತ್ತು ಹುಟ್ಟಿ ಬೆಳೆದ ಮಣ್ಣಿನ ಮೇಲಿನ ಭಕ್ತಿ. ಈ ಹೆಸರಿನಲ್ಲೇ ಅಂಟಿಕೊಂಡಿದೆ ಫುಟ್‍ಬಾಲ್ ಆಟದ ಮಾಂತ್ರಿಕ ಯುಕ್ತಿ..! ಭವಿಷ್ಯದ ಫುಟ್‍ಬಾಲ್ ಜಗತ್ತಿಗೆ ಈ ಹೆಸರೇ ಒಂದು ಮೋಹಕ ಶಕ್ತಿ..!

ಹೌದು, ಈ ಹೆಸರಿನ ಹುಡುಗನ ಆಟದಲ್ಲಿ ಝೆಂಕಾರದ ನಾದವಿದೆ. ಅಭಿಮಾನಿಗಳನ್ನು ಮೈಮರೆಯುವಂತೆ ಮಾಡುವ ಉನ್ಮಾದವಿದೆ. ಆಟದ ವೈಖರಿಯಂತೂ ಫುಟ್‍ಬಾಲ್ ಪ್ರಪಂಚವನ್ನು ತಲ್ಲಣಗೊಳಿಸುವಂತಿದೆ. ಈಗಾಗಲೇ ಈ ಹೆಸರು ಹೆಮ್ಮರವಾಗಿ ಬೆಳೆಯುವ ಸ್ಪಷ್ಟ ಸೂಚನೆ ನೀಡಿದೆ.

Related posts

weekly-horoscope-august-9-to-15-2026-kannada

ಈ ವಾರದ ರಾಶಿ ಭವಿಷ್ಯ (ಆಗಸ್ಟ್ 09 – 15, 2026): ಮೇಷದಿಂದ ಮೀನ ರಾಶಿಯವರೆಗೆ ಹೇಗಿರಲಿದೆ ಗ್ರಹಗತಿ? ಸಂಪೂರ್ಣ ಜ್ಯೋತಿಷ್ಯ ಫಲಗಳು!

August 9, 2026
ನನ್ನ ಮಂತ್ರಿಗಿರಿ ತಪ್ಪಿಸಲು ಸಿಎಂ ಮನೆಗೆ ಹೋಗಿದ್ರಾ? ಈಗ ಮಂತ್ರಿಯಾಗಿದ್ದೇನೆ ಜಗದ್ಗುರುಗಳೇ ಈಗೇನು ಮಾಡ್ತೀರಿ:ಹಾಕಿರೋ ಕಾವಿ ಬಟ್ಟೆಗೆ ವಿಧೇಯರಾಗಿರಿ- ಬಸವಜಯಮೃತ್ಯುಂಜಯ ಶ್ರೀಗಳ ವಿರುದ್ಧ ಕಾಶಪ್ಪನವರ ವಾಗ್ದಾಳಿ

ನನ್ನ ಮಂತ್ರಿಗಿರಿ ತಪ್ಪಿಸಲು ಸಿಎಂ ಮನೆಗೆ ಹೋಗಿದ್ರಾ? ಈಗ ಮಂತ್ರಿಯಾಗಿದ್ದೇನೆ ಜಗದ್ಗುರುಗಳೇ ಈಗೇನು ಮಾಡ್ತೀರಿ:ಹಾಕಿರೋ ಕಾವಿ ಬಟ್ಟೆಗೆ ವಿಧೇಯರಾಗಿರಿ- ಬಸವಜಯಮೃತ್ಯುಂಜಯ ಶ್ರೀಗಳ ವಿರುದ್ಧ ಕಾಶಪ್ಪನವರ ವಾಗ್ದಾಳಿ

August 9, 2026

ಹಾಗಿದ್ರೆ ನವ ಯುಗದ ಫುಟ್‍ಬಾಲ್ ಇತಿಹಾಸವನ್ನು ಬರೆಯಲಿರುವ ಹುಡುಗನ ಹೆಸರೇನು..?

ಉತ್ತರ -ಲ್ಯಾಮಿನೆ ಯಮಲ್ ನಸ್ರೌಯಿ ಎಬಾನಾ..!

ಪ್ರತಿಷ್ಠಿತ ಬಾರ್ಸಿಲೋನಾ ಕ್ಲಬ್‍ನ ಭರವಸೆಯ ಕುಡಿ. ಸ್ಪೇನ್ ತಂಡದ ನಂಬಿಕಸ್ಥ ಹಾಗೂ ಹೆಮ್ಮೆಯ ಮಗ. ಜಾಗತಿಕ ಫುಟ್‍ಬಾಲ್‍ನ ಮುಂದಿನ ವಾರಸುದಾರ.

ನಿಜ, ಯಮಲ್ ನಡೆದು ಬಂದ ಹಾದಿಯೇ ಯುವ ಆಟಗಾರರಿಗೊಂದು ಕೈಪಿಡಿ. ನೆಕ್ಸ್ಟ್ ಜಿ ಜನರೇಷನ್‍ನ ಫುಟ್‍ಬಾಲ್ ಅಧ್ಯಾಯಕ್ಕೆ ಈಗಾಗಲೇ ಬರೆದಿದ್ದಾನೆ ಅದ್ಭುತವಾದ ಮುನ್ನುಡಿ.

19ರ ಹರೆಯದಲ್ಲೇ ಮಾಡಿರುವ ಅದ್ಭುತ ಸಾಧನೆಗಳು ಅಧ್ಯಾಯದ ಪುಟಗಳನ್ನು ಸೇರಿಕೊಂಡಿದೆ. ಮುಂದಿನ ಅಧ್ಯಾಯಗಳ ಪುಟಗಳು ಬರೀ ಆತನ ದಾಖಲೆಗಳಿಗೆ ಸೀಮಿತವಾಗಿರಲಿದೆ. ಆತನ ಹೆಜ್ಜೆ ಗುರುತುಗಳು ಹೀಗೆ ಮುಂದುವರಿದ್ರೆ ಫುಟ್‍ಬಾಲ್ ಜಗತ್ತಿನ ಐತಿಹಾಸಿಕ ಕಾವ್ಯವಾಗಲಿದೆ.

ಲ್ಯಾಮಿನೆ ಯಮಲ್ ಮತ್ತು “ದೇವರ ವರ”..!✨

ಹಾಗೇ ನೋಡಿದ್ರೆ, ಯಮಲ್ ಶಾರೀರಿಕವಾಗಿ ಒಬ್ಬ ದೈತ್ಯ ಆಟಗಾರನಂತೆ ಕಾಣುವುದಿಲ್ಲ. ಆದ್ರೆ ಆಟಕ್ಕೆ ಬೇಕಾದ ಫಿಟ್‌ನೆಸ್ ಮತ್ತು ದೈಹಿಕ ಶಕ್ತಿಯನ್ನು ವೃದ್ಧಿಸಿಕೊಳ್ಳುವುದನ್ನು ಮರೆತಿಲ್ಲ. . ಹಾಗಂತ ಯಮಲ್, ಕೇವಲ ಕಠಿಣ ತರಬೇತಿಯಿಂದ ಸೃಷ್ಟಿಯಾದ ಆಟಗಾರನಲ್ಲ. ಫುಟ್‍ಬಾಲ್ ಆಟದ ಕೌಶಲ್ಯಗಳು ಆತನಿಗೆ ದೈವದತ್ತವಾಗಿ ಲಭಿಸಿರುವ ಅಪರೂಪದ ವರ..!

ಅಂದ ಹಾಗೇ, ಯಮಲ್ ಈ ಜನರೇಷನ್‍ನ ಅಸಾಮಾನ್ಯ ಪ್ರತಿಭೆ. ಅಂಗಣದಲ್ಲಿ ಲೇಸರ್ ಕಿರಣಗಳಂತೆ ಓಡಾಡಿಕೊಂಡು ಕಂಗೊಳಿಸುತ್ತಿರುವ ಅದ್ಭುತ ಪ್ರಭೆ. ಹಸಿರು ಮೈದಾನದಲ್ಲಿ ಮೆರಗು ನೀಡುವ ಈತನ ಹೆಸರೇ ಫುಟ್‍ಬಾಲ್ ಆಟಕ್ಕೊಂದು ಶೋಭೆ.

ಪಂದ್ಯ ಯಾವುದೇ ಆಗಿರಲಿ. ಅದು ಕ್ಲಬ್ ಲೀಗ್ ಆಗಿರಲಿ, ದೇಶದ ಪರವಾಗಿಯೇ ಇರಲಿ, ಅಥವಾ ಇದೀಗ ಫಿಫಾ ವಿಶ್ವಕಪ್ ಆಗಿರಲಿ, ತಂಡ ಮತ್ತು ಇಡೀ ಪಂದ್ಯದ ಮೇಲಿರುತ್ತೆ ಈತನ ಪ್ರಚಂಡ ಪ್ರಭಾವ. ಕಷ್ಟದ ಬದುಕಿನ ಯುದ್ಧ ಗೆದ್ದಂತೆ, ಪ್ರತಿ ಪಂದ್ಯವನ್ನು ಗೆಲ್ಲಲೇಬೇಕು ಎಂಬುದು ಯಾಮಲ್‍ನ ನೈಜ ಸ್ವಭಾವ.

ಹದಿಹರೆಯದಲ್ಲೇ ಸಂಚಲನ ಸೃಷ್ಟಿಸಿದ್ದ ಯಮಲ್..!⚡

ಹೌದು, ಯಮಲ್ ಆಟವನ್ನು ಮೆಸ್ಸಿಗೆ ಹೋಲಿಕೆ ಮಾಡಲಾಗುತ್ತದೆ. ಯಾಕಂದ್ರೆ ಮೆಸ್ಸಿಯ ಜಾಣ್ಮೆ ಹಾಗೂ ಕೌಶಲ್ಯಗಳನ್ನು ಈತನ ಆಟದಲ್ಲಿ ಕಾಣಬಹುದು. ಅದೇ ರೀತಿ ಕ್ರಿಸ್ಟಿಯಾನೊ ರೊನಾಲ್ಡೊ ನ ಆಕ್ರಮಣಕಾರಿ ಶೈಲಿ, ನೈಮರ್‍ನ ಕಲಾತ್ಮಕತೆಯ ಆಟವನ್ನು ನೋಡಬಹುದು.

ರೈಟ್ ವಿಂಗ್‍ನಿಂದ ಚಿರತೆಯಂತೆ ಮುನ್ನುಗ್ಗುವ ಯಮಲ್ ವೇಗ, ಡಿಫೆಂಡರ್‍ಗಳನ್ನು ತಲ್ಲಣಗೊಳ್ಳುವಂತೆ ಮಾಡುತ್ತದೆ. ಡ್ರಿಬ್ಲಿಂಗ್ ಜೊತೆ ಚೆಂಡಿನ ಜೊತೆ ಆತ ನಡೆಸುವ ಸರಸ ಸಲ್ಲಾಪದ ಪರಿ ಅಷ್ಟೇ ಸೊಗಸಾಗಿರುತ್ತದೆ. ನಾಜೂಕಿನಿಂದ ಗೋಲು ಹೊಡೆಯುವ ಕಲೆಯ ಚಾಕಚಕ್ಯತೆಯಂತೂ ಅಪ್ರತಿಮವಾಗಿರುತ್ತದೆ. ಈತನ ಬಲಗಾಲಿಗಿಂತಲೂ ಎಡಗಾಲು ತುಂಬಾನೇ ಸ್ಟ್ರಾಂಗ್ ಆಗಿದೆ. ಹೀಗಾಗಿಯೇ 19ರ ಹರೆಯದಲ್ಲೇ ಲ್ಯಾಮಿನೆ ಹೆಸರು ಫುಟ್‍ಬಾಲ್ ಅಂಗಣದಲ್ಲಿ ರಾರಾಜಿಸುತ್ತಿದೆ.

ಯಾರು ಈ ಲ್ಯಾಮಿನೆ ಯಮಲ್ ನಸ್ರೌಯಿ ಎಬಾನಾ..!🔍

ಅಷ್ಟಕ್ಕೂ ಯಮಲ್‍ನ ಬಾಲ್ಯದ ಬದುಕೇ ದುರಂತ ಕಥೆ. ಹುಟ್ಟಿದ್ದು 2007, ಜುಲೈ 13ರಂದು. ಆದ್ರೆ 2010ರಲ್ಲಿ ತೊದಲು ಮಾತು, ಅಂಬೆಗಾಲಿಡುತ್ತಿದ್ದ ಸಮಯದಲ್ಲೇ ಯಮಲ್ ಹೆತ್ತವರು ಬೇರ್ಪಟ್ಟಿದ್ದರು ಮೊರಾಕ್ಕೋ ಮೂಲದ ತಂದೆ ಮೌನೀರ್ ನಸ್ರೌಯಿ ಮತ್ತು ಈಕ್ವಟೋರಿಯಲ್ ಗಿನಿಯಾ ಮೂಲದ ತಾಯಿ ಶೀಯಿಲಾ ಎಬಾನಾ. ಬಡ ಕಾರ್ಮಿಕರು ವಾಸ ಮಾಡುತ್ತಿದ್ದ ಬಾರ್ಸಿಲೋನಾದ ರೊಕಾಫೊಂಡಾದ ಗಲ್ಲಿಯಲ್ಲಿ ಕಷ್ಟದ ಜೀವನ ಸಾಗಿಸುತ್ತಿದ್ದರು.

ಮನೆ ಬಾಡಿಗೆ ಕಟ್ಟಲು ಒದ್ದಾಡುತ್ತಿದ್ದ ಈ ದಂಪತಿಗೆ ನೆರವಾಗುತ್ತಿದ್ದವರು ಲ್ಯಾಮಿನೊ ಮತ್ತು ಯಮಲ್ ಎಂಬ ನೆರೆಹೊರೆಯ ಸ್ನೇಹಿತರು. ಹೀಗಾಗಿ ತಮ್ಮ ಮಗನಿಗೆ ಈ ಲ್ಯಾಮಿನೆ ಯಮಲ್ ನಸ್ರೌಯಿ ಎಬಾನಾ ಎಂದು ಹೆಸರಿಟ್ಟಿದ್ದರು. ಆದ್ರೆ ಈ ದಂಪತಿಯ ಖುಷಿ ಮೂರೇ ಮೂರು ವರ್ಷಕ್ಕೆ ಮಾಯಾವಾಯ್ತು.
ನಂತರ ಎದುರ್ಮನೇಲಿ ಗಂಡ, ಪಕ್ಕದ್ಮನೇಲಿ ಹೆಂಡ್ತಿ ಅನ್ನೋ ರೀತಿಯ ಜೀವನ..!

ತಾಯಿಯ ಕಷ್ಟಗಳನ್ನು ಕಣ್ಣಾರೆ ನೋಡಿ ಬೆಳೆದಿದ್ದ ಯಮಲ್, ಫುಟ್‍ಬಾಲ್ ಆಟವನ್ನೇ ಸಂಗಾತಿಯನ್ನಾಗಿಸಿಕೊಂಡಿದ್ದ. ಇತ್ತ ಹೆಂಡ್ತಿ ಜೊತೆ ಮುನಿಸಿಕೊಂಡಿದ್ದರೂ ಮೌನೀರ್ ಮಗನ ಫುಟ್‍ಬಾಲ್ ಪ್ರೀತಿಗೆ ಸರ್ವಸ್ವವನ್ನು ಧಾರೆ ಎರೆದಿದ್ದ. ಯಾಮಲ್ ಕೇವಲ ಆರು ವರ್ಷ ಇದ್ದಾಗಲೇ ಬಾರ್ಸಿಲೋನಾ ಕ್ಲಬ್‍ನ ಲಾ ಮಾಸಿಯಾ ಅಕಾಡೆಮಿಗೆ ಸೇರಿಸಿದ್ದ. ತನ್ನ ಮಗ ಜಗತ್ತಿನ ಅಪ್ರತಿಮ ಫುಟ್‍ಬಾಲ್ ಆಟಗಾರನಾಗಬೇಕು ಎಂದು ಕನಸು ಕಾಣುತ್ತಿದ್ದ.

ಇದೀಗ ತಂದೆಯ ಕನಸನ್ನು ಯಮಲ್ ನನಸು ಮಾಡಿದ್ದಾನೆ. ತಂದೆ ಮೌನೀರ್ ಈಗ ಯಮಲ್‍ನ ಅಪ್ಪಟ ಅಭಿಮಾನಿಯಾಗಿದ್ದಾನೆ. ಮಗನ ಆಟವನ್ನು ಕ್ರೀಡಾಂಗಣದಲ್ಲಿ ನೋಡುವುದು ಮಾತ್ರವಲ್ಲ. ಸಾಮಾಜಿಕ ಜಾಲ ತಾಣದಲ್ಲೂ ಮಗನ ಆಟದ ವಿಡಿಯೋಗಳನ್ನು ಶೇರ್ ಮಾಡಿಕೊಂಡು ಹೆಮ್ಮೆಯಿಂದ ಓಡಾಡುತ್ತಿದ್ದಾನೆ.

ಅಷ್ಟೇ ಅಲ್ಲ, ಯಮಲ್ ತಂದೆ ಮೌನೀರ್, ಲಿಯೋನಾಲ್ ಮೆಸ್ಸಿಯ ನೆಚ್ಚಿನ ಅಭಿಮಾನಿ. ಅದೇನೋ ಅದೃಷ್ಟವೋ ಗೊತ್ತಿಲ್ಲ. ಅದು 2007. ಆಗ ಮೆಸ್ಸಿಗೆ 20ರ ಹರೆಯ. ಬಾರ್ಸಿಲೋನಾದ ಸೂಪರ್ ಸ್ಟಾರ್ ಆಟಗಾರ. ಖಾಸಗಿ ಸಂಸ್ಥೆಗಳು ಚಾರಿಟಿ ಕ್ಯಾಲೆಂಡರ್ ಫೋಟೋ ಶೂಟ್ ಏರ್ಪಡಿಸಿತ್ತು.

ಬಾರ್ಸಿಲೋನಾದ ಬಡ ಮಕ್ಕಳ ಫೋಟೋ ಶೂಟ್‍ನ ಲಕ್ಕಿ ಡ್ರಾದಲ್ಲಿ ಯಮಲ್ ಹೆತ್ತವರು ಭಾಗವಹಿಸಿದ್ದರು. ಆಗ ಯಾಮಲ್‍ಗೆ ಐದು ತಿಂಗಳು. ಈ ಲಕ್ಕಿ ಡ್ರಾದಲ್ಲಿ ಯಾಮಲ್ ಹೆತ್ತವರಿಗೆ ಅದೃಷ್ಟ ಖುಲಾಯಿಸಿತ್ತು. ಪರಿಣಾಮ ಮೆಸ್ಸಿ ಕೈಯಿಂದಲೇ ಪುಟಾಣಿ ಯಮಲ್ ಬಾತ್ ಟಬ್‍ನಲ್ಲಿ ಸ್ನಾನ ಮಾಡಿಕೊಂಡಿಸಿದ್ದ..! ಇದೀಗ ಈ ಫೋಟೋ ಸಾಮಾಜಿಕ ಜಾಲ ತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಅಪ್ಪ – ಅಮ್ಮನ ಬದುಕನ್ನು ಶ್ರೀಮಂತಗೊಳಿಸಿದ್ದ ಯಮಲ್..!💖

ವೈಯಕ್ತಿಕವಾಗಿ ಯಮಲ್ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾನೆ. ಜೊತೆಯಾಗಿ ಅಪ್ಪ – ಅಮ್ಮನ ಪ್ರೀತಿಯ ಮಾತುಗಳನ್ನು ಕೇಳಿಸಿಕೊಂಡಿಲ್ಲ. ಜೊತೆಯಾಗಿ ವಾತ್ಸಲ್ಯ ಅಕ್ಕರೆಯೂ ಸಿಕ್ಕಿಲ್ಲ. ಆದ್ರೆ ಮೌನೀರ್ ಮತ್ತು ಶೀಯಿಲಾ ಎಬಾನಾ ಬ್ರೇಕ್ ಅಪ್ ಮಾಡಿಕೊಂಡಿದ್ರೂ ಮಗನ ಫುಟ್‍ಬಾಲ್ ಪ್ರೀತಿಯನ್ನು ಚಿವುಟಿ ಹಾಕಲಿಲ್ಲ. ಹಾಗಾಗಿ ಭಿನ್ನ ಹಾದಿಯಲ್ಲಿರುವ ಅಪ್ಪ, ಅಮ್ಮನ ಬಡತನ ಬದುಕನ್ನು ಶ್ರೀಮಂತಗೊಳಿಸಿದ್ದಾನೆ. ಜೊತೆಗೆ ಇಡೀ ಕುಟುಂಬಕ್ಕೆ ಆಸರೆಯಾಗಿದ್ದಾನೆ.

ಬಾರ್ಸಿಲೋನಾ ಫುಟ್‍ಬಾಲ್ ಕ್ಲಬ್‍ನ ಮಾಂತ್ರಿಕ..!🔵🔴

ಯಮಲ್ ತನ್ನ ಆರನೇ ವಯಸ್ಸಿನಲ್ಲೇ ಬಾರ್ಸಿಲೋನಾ ಕ್ಲಬ್‍ನ ಕಣ್ಣಿಗೆ ಬಿದ್ದಿದ್ದ. ಲಾ ಮಾಸಿಯಾ ಅಕಾಡೆಮಿಯಲ್ಲಿ ಪಳಗಿದ್ದ ಯಮಲ್, ಚುರುಕಿನ ಆಟದ ಮೂಲಕ ತನ್ನ 15ರ ಹರೆಯದಲ್ಲೇ ಸೀನಿಯರ್ ತಂಡವನ್ನು ಸೇರಿಕೊಂಡು ಇತಿಹಾಸ ಬರೆದಿದ್ದ. ಮೆಸ್ಸಿ ಯ ಕೈಯಿಂದ ಸ್ನಾನ ಮಾಡಿಸಿಕೊಂಡಿದ್ದ ಈ ಹುಡುಗ ಬಾರ್ಸಿಲೋನಾ ಕ್ಲಬ್‍ನಲ್ಲಿ ದಾಖಲೆ ಬರೆಯುತ್ತಿದ್ದಾನೆ. ಅಷ್ಟೇ ಅಲ್ಲ, ಮೆಸ್ಸಿಯ ಅಂದಿನ 19ನೇ ನಂಬರಿನ ಜೆರ್ಸಿಯಲ್ಲೂ ಕಾಣಿಸಿಕೊಳ್ಳುತ್ತಿದ್ದಾನೆ.

16-17ನೇ ವಯಸ್ಸಿಗೆ ಸ್ಪೇನ್ ರಾಷ್ಟ್ರೀಯ ತಂಡಕ್ಕೆ ಸೇರ್ಪಡೆ…!🇪🇸

ಹುಟ್ಟು ಪ್ರತಿಭೆ, ಅದ್ಭುತ ಕೌಶಲ್ಯದಿಂದಲೇ ಯಮಲ್ ಗಮನ ಸೆಳೆಯುತ್ತಿದ್ದ. 2024ರ ಯೂರೋ ಕಪ್‍ನ ಹೀರೋ ಆಗಿದ್ದ. ಸ್ಪೇನ್ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸಿದ್ದ. ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಫ್ರಾನ್ಸ್ ವಿರುದ್ಧ ಕರ್ವಿಂಗ್ ಗೋಲು ದಾಖಲಿಸಿ ಇಡೀ ಫುಟ್‍ಬಾಲ್ ಜಗತ್ತನ್ನೇ ಚಕಿತಗೊಳಿಸಿದ್ದ. ಅಲ್ಲದೆ ಟೂರ್ನಿಯಲ್ಲಿ ಯಂಗ್ ಪ್ಲೇಯರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದ.

ಇದೀಗ ಯಮಲ್, ಫಿಫಾ ವಿಶ್ವಕಪ್‍ನ ಸೆಮಿಫೈನಲ್‍ನಲ್ಲಿ ಬಲಿಷ್ಠ ಫ್ರಾನ್ಸ್ ವಿರುದ್ದ ಆಡುವುದನ್ನು ಎದುರು ನೋಡುತ್ತಿದ್ದಾನೆ. 19ನೇ ಹುಟ್ಟು ಹಬ್ಬದ ಆಚರಿಸಿಕೊಂಡ ಖುಷಿಯಲ್ಲಿದ್ದಾನೆ. ಫ್ರಾನ್ಸ್ ತಂಡವನ್ನು ಮಣಿಸಿದ್ದೇವೆ ಎಂದು ಮೈಂಡ್ ಗೇಮ್ ಕೂಡ ಮಾಡುತ್ತಿದ್ದಾನೆ. ಈಗಾಗಲೇ ಫಿಫಾ ವಿಶ್ವಕಪ್‍ನಲ್ಲೂ ಗಮನ ಸೆಳೆದಿದ್ದಾನೆ. ಯಮಲ್, ಬರೀ ಗೋಲು ದಾಖಲಿಸುವುದು ಮಾತ್ರವಲ್ಲ. ಸಹ ಆಟಗಾರರಿಗೂ ಗೋಲು ದಾಖಲಿಸಲು ನೆರವಾಗುತ್ತಾನೆ.

ಅಷ್ಟೇ ಅಲ್ಲ, ಮೈದಾನದಲ್ಲಿ ಯಮಲ್ ಸಂಭ್ರಮಿಸುವ ಸಿಗ್ನೇಚರ್ ಸ್ಟೈಲ್ ಕೂಡ ಗಮನ ಸೆಳೆಯುತ್ತಿದೆ. 304 ಎಂದು ಕೈ ಬೆರಳಿನಲ್ಲಿ ತೋರಿಸುವ ಸಂಭ್ರಮದ ಶೈಲಿಯ ಹಿಂದೆಯೂ ಒಂದು ಹೆಮ್ಮೆಯ ಸಂಕೇತವಿದೆ. ತಾನು ಹುಟ್ಟಿ ಬೆಳೆದಿರುವ ರೊಕಾಫೋಂಡಾದ ಪೋಸ್ಟಲ್ ಪಿನ್ ಕೋಡ್‍ನ ಕೊನೆಯ ಮೂರು ನಂಬರ್‍ಗಳನ್ನು ಇಡೀ ಜಗತ್ತಿಗೆ ತೋರಿಸುತ್ತಿದ್ದಾನೆ. ಈ ಮೂಲಕ ತನಗೆ ಬದುಕು ಕೊಟ್ಟ ಪುಣ್ಯ ಭೂಮಿಯನ್ನು ಇನ್ನೂ ಮರೆತಿಲ್ಲ ಎಂಬುದನ್ನು ಸಾರಿ ಸಾರಿ ಹೇಳುತ್ತಿದ್ದಾನೆ.

ಒಟ್ಟಿನಲ್ಲಿ ಯಮಲ್ ಒಬ್ಬ ಬರೀ ಫುಟ್‍ಬಾಲ್ ಆಟಗಾರನಲ್ಲ. ಬಡತನ , ವೈಯಕ್ತಿಕ ಸಮಸ್ಯೆಗಳ ಅಲೆಗಳನ್ನು ದಾಟಿ ಬಂದ ಅಪ್ರತಿಮ ಹೋರಾಟಗಾರ. ಬದುಕಿನಲ್ಲಿ ಎಷ್ಟೇ ತೊಂದರೆಗಳಿದ್ರೂ ಅದನ್ನೆಲ್ಲಾ ಸಹಿಸಿಕೊಂಡು ಫುಟ್‍ಬಾಲ್ ಜಗತ್ತಿನಲ್ಲಿ ಅದ್ಭುತ ಆಟಗಾರನಾಗಿ ರೂಪುಗೊಂಡಿರುವ ಈತನ, ದಿಟ್ಟ ಹೆಜ್ಜೆಗೊಂದು ದೊಡ್ಡ ಸಲಾಂ.. ಯಮಲ್ ಕೇವಲ ಫುಟ್‍ಬಾಲ್ ಜಗತ್ತಿನ ಭವಿಷ್ಯದ ತಾರೆಯಲ್ಲ. ಫುಟ್‍ಬಾಲ್ ಸಾಮ್ರಾಜ್ಯದ ಮುಂದಿನ ಅಧಿಪತಿ..!

💻✍️ ಸನತ್ ರೈ

 

Tags: #LamineYamal #Yamal304 #FootballFuture #LaMasia #FCBarcelona #SpainFootball #LionelMessi #fifawolrdcup2026 #francevssapin #sanathrai #saakshatv
ShareTweetSendShare
Join us on:

Related Posts

weekly-horoscope-august-9-to-15-2026-kannada

ಈ ವಾರದ ರಾಶಿ ಭವಿಷ್ಯ (ಆಗಸ್ಟ್ 09 – 15, 2026): ಮೇಷದಿಂದ ಮೀನ ರಾಶಿಯವರೆಗೆ ಹೇಗಿರಲಿದೆ ಗ್ರಹಗತಿ? ಸಂಪೂರ್ಣ ಜ್ಯೋತಿಷ್ಯ ಫಲಗಳು!

by admin
August 9, 2026
0

ಈ ವಾರ ಭವಿಷ್ಯ - 09.08.2026 - 15.08.2026 ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿರ್ವಿದ್ವಾನ್ ನಿಮ್ಮ...

ನನ್ನ ಮಂತ್ರಿಗಿರಿ ತಪ್ಪಿಸಲು ಸಿಎಂ ಮನೆಗೆ ಹೋಗಿದ್ರಾ? ಈಗ ಮಂತ್ರಿಯಾಗಿದ್ದೇನೆ ಜಗದ್ಗುರುಗಳೇ ಈಗೇನು ಮಾಡ್ತೀರಿ:ಹಾಕಿರೋ ಕಾವಿ ಬಟ್ಟೆಗೆ ವಿಧೇಯರಾಗಿರಿ- ಬಸವಜಯಮೃತ್ಯುಂಜಯ ಶ್ರೀಗಳ ವಿರುದ್ಧ ಕಾಶಪ್ಪನವರ ವಾಗ್ದಾಳಿ

ನನ್ನ ಮಂತ್ರಿಗಿರಿ ತಪ್ಪಿಸಲು ಸಿಎಂ ಮನೆಗೆ ಹೋಗಿದ್ರಾ? ಈಗ ಮಂತ್ರಿಯಾಗಿದ್ದೇನೆ ಜಗದ್ಗುರುಗಳೇ ಈಗೇನು ಮಾಡ್ತೀರಿ:ಹಾಕಿರೋ ಕಾವಿ ಬಟ್ಟೆಗೆ ವಿಧೇಯರಾಗಿರಿ- ಬಸವಜಯಮೃತ್ಯುಂಜಯ ಶ್ರೀಗಳ ವಿರುದ್ಧ ಕಾಶಪ್ಪನವರ ವಾಗ್ದಾಳಿ

by Shwetha
August 9, 2026
0

ಬಾಗಲಕೋಟೆ: ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಸಚಿವ ವಿಜಯಾನಂದ ಕಾಶಪ್ಪನವರ ನಡುವಿನ ಶೀತಲ ಸಮರ ಈಗ ಬೀದಿಗೆ ಬಂದಿದೆ. ತಮ್ಮ ಸಚಿವ ಸ್ಥಾನ ತಪ್ಪಿಸಲು ಸ್ವಾಮೀಜಿಗಳು...

ವಿದ್ಯಾರ್ಥಿಗಳ ಹೆಸರಲ್ಲಿ ಕಾಂಗ್ರೆಸ್ ಬೂಟಾಟಿಕೆ: ದೆಹಲಿಯಲ್ಲಿ ಬೆಂಬಲ ಜಾರ್ಖಂಡ್ ನಲ್ಲಿ ರಾಹುಲ್ ಗಾಂಧಿ‌ ಮೌನವೇಕೆ ಎಂದು ಬಿಜೆಪಿ ಪ್ರಶ್ನೆ

ವಿದ್ಯಾರ್ಥಿಗಳ ಹೆಸರಲ್ಲಿ ಕಾಂಗ್ರೆಸ್ ಬೂಟಾಟಿಕೆ: ದೆಹಲಿಯಲ್ಲಿ ಬೆಂಬಲ ಜಾರ್ಖಂಡ್ ನಲ್ಲಿ ರಾಹುಲ್ ಗಾಂಧಿ‌ ಮೌನವೇಕೆ ಎಂದು ಬಿಜೆಪಿ ಪ್ರಶ್ನೆ

by Shwetha
August 9, 2026
0

ನವದೆಹಲಿ: ವಿದ್ಯಾರ್ಥಿಗಳ ಹೋರಾಟದ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಇಂಡಿ ಒಕ್ಕೂಟವು ಡಬಲ್ ಸ್ಟ್ಯಾಂಡರ್ಡ್ ಅನುಸರಿಸುತ್ತಿವೆ ಎಂದು ಬಿಜೆಪಿ ತೀವ್ರವಾಗಿ ವಾಗ್ದಾಳಿ ನಡೆಸಿದೆ. ದೆಹಲಿಯಲ್ಲಿ ನಡೆಯುವ ಪ್ರತಿಭಟನೆಗಳಿಗೆ ಓಡೋಡಿ...

ಕ್ಯೂ ಲೈನ್‌ನಲ್ಲಿ 24 ಗಂಟೆ ಕಾಯುವ ಭಕ್ತರ ಕಷ್ಟಕ್ಕೆ ಟಿಟಿಡಿ ಚೆಕ್‌ಮೇಟ್: ಟಿಟಿಡಿಯಿಂದ ಮೂವಿಂಗ್ ಟೇಬಲ್ ಮ್ಯಾಜಿಕ್-ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಟೆಕ್ನಾಲಜಿ ಹವಾ ಶುರು

ಕ್ಯೂ ಲೈನ್‌ನಲ್ಲಿ 24 ಗಂಟೆ ಕಾಯುವ ಭಕ್ತರ ಕಷ್ಟಕ್ಕೆ ಟಿಟಿಡಿ ಚೆಕ್‌ಮೇಟ್: ಟಿಟಿಡಿಯಿಂದ ಮೂವಿಂಗ್ ಟೇಬಲ್ ಮ್ಯಾಜಿಕ್-ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಟೆಕ್ನಾಲಜಿ ಹವಾ ಶುರು

by Shwetha
August 9, 2026
0

ತಿರುಮಲಕ್ಕೆ ಬರುವ ಭಕ್ತರ ಸಂಖ್ಯೆ ಪ್ರತಿ ದಿನವೂ ಹೊಸ ದಾಖಲೆ ಬರೆಯುತ್ತಿದೆ. ವಿಶೇಷವಾಗಿ ಯಾವುದೇ ಟೋಕನ್ ಇಲ್ಲದೆ ಧರ್ಮ ದರ್ಶನಕ್ಕೆ ಬರುವ ಸಾಮಾನ್ಯ ಭಕ್ತರ ಸಂಖ್ಯೆ ಗಣನೀಯವಾಗಿ...

ಬಿಜೆಪಿ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡಲಿ ಇಲ್ಲದಿದ್ದರೆ ಕೋಮಾಗೆ ಹೋಗುವುದು ಗ್ಯಾರಂಟಿ: ಸವದಿ ವ್ಯಂಗ್ಯದ ಏಟು

ಬಿಜೆಪಿ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡಲಿ ಇಲ್ಲದಿದ್ದರೆ ಕೋಮಾಗೆ ಹೋಗುವುದು ಗ್ಯಾರಂಟಿ: ಸವದಿ ವ್ಯಂಗ್ಯದ ಏಟು

by Shwetha
August 9, 2026
0

ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಸಚಿವ ಲಕ್ಷ್ಮಣ ಸವದಿ ಅವರು ಪ್ರತಿಪಕ್ಷ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ್ದು, ಕೆಲಸ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram