ADVERTISEMENT
Thursday, March 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

2025ರ ಗಲ್ಲಾಪೆಟ್ಟಿಗೆಯ ಸುಲ್ತಾನರು ಇವರೇ ಕಾಂತಾರ ಚಾಪ್ಟರ್ 1 ಅಬ್ಬರಕ್ಕೆ ಶೇಕ್ ಆದ ಇಂಡಸ್ಟ್ರಿ ಬಾಕ್ಸ್ ಆಫೀಸ್ ಕೊಳ್ಳೆಹೊಡೆದ ಕನ್ನಡದ ಟಾಪ್ 10 ಸಿನಿಮಾಗಳು ಯಾವುದು ಗೊತ್ತಾ?

Do you know what are the top 10 Kannada movies that looted the box office in 2025?

Shwetha by Shwetha
December 18, 2025
in ರಾಜ್ಯ, Cinema, Newsbeat, State, ಮನರಂಜನೆ
Share on FacebookShare on TwitterShare on WhatsappShare on Telegram

ಗಾಂಧಿನಗರದ ಗಲ್ಲಾಪೆಟ್ಟಿಗೆಯಲ್ಲಿ 2025ನೇ ಇಸವಿ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ವರ್ಷ ಪೂರ್ತಿ ಸುಮಾರು 250ಕ್ಕೂ ಹೆಚ್ಚು ಕನ್ನಡ ಸಿನಿಮಾಗಳು ಬಿಡುಗಡೆಯಾಗಿವೆ. ಸೋಲು ಗೆಲುವಿನ ಲೆಕ್ಕಾಚಾರದ ನಡುವೆಯೂ, ಕೆಲವೇ ಕೆಲವು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ದೂಳೆಬ್ಬಿಸಿವೆ. ಸ್ಟಾರ್ ನಟರ ಅಬ್ಬರ ಹಾಗೂ ಕಥೆಯ ತಾಕತ್ತಿನಿಂದಾಗಿ ಈ ಬಾರಿ ಕನ್ನಡ ಚಿತ್ರರಂಗದ ಮಾರುಕಟ್ಟೆ ಸಾವಿರ ಕೋಟಿ ದಾಟಿದೆ ಎಂದರೆ ತಪ್ಪಾಗಲಾರದು.

ವಿಶೇಷವಾಗಿ ರಿಷಬ್ ಶೆಟ್ಟಿ ಅವರ ಕಾಂತಾರ ಚಾಪ್ಟರ್ 1 ಸಿನಿಮಾ ನಿರೀಕ್ಷೆಗೂ ಮೀರಿ ಕಲೆಕ್ಷನ್ ಮಾಡುವ ಮೂಲಕ ಭಾರತೀಯ ಚಿತ್ರರಂಗದ ದೃಷ್ಟಿ ಮತ್ತೊಮ್ಮೆ ಸ್ಯಾಂಡಲ್ ವುಡ್ ಕಡೆಗೆ ತಿರುಗುವಂತೆ ಮಾಡಿದೆ. ದೈವಿಕ ಕಥಾಹಂದರ ಹೊಂದಿರುವ ಈ ಚಿತ್ರ ಬರೋಬ್ಬರಿ 850 ಕೋಟಿಗೂ ಅಧಿಕ ಗಳಿಕೆ ಕಂಡು ಜೈಭೇರಿ ಬಾರಿಸಿದೆ. ಇನ್ನು ಪೌರಾಣಿಕ ಹಿನ್ನೆಲೆಯ ಮಹಾವತಾರ್ ನರಸಿಂಹ ಕೂಡ 300 ಕೋಟಿ ಕ್ಲಬ್ ಸೇರುವ ಮೂಲಕ ಪ್ರೇಕ್ಷಕರ ಮನಗೆದ್ದಿದೆ.

Related posts

ಉತ್ತರ ಪ್ರದೇಶದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಿಜೆಪಿ ತಂತ್ರ: ‘ಮಿಷನ್ ಯುಪಿ 2027’

ಉತ್ತರ ಪ್ರದೇಶದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಿಜೆಪಿ ತಂತ್ರ: ‘ಮಿಷನ್ ಯುಪಿ 2027’

March 12, 2026
ಯುದ್ಧದ ಹಿನ್ನೆಲೆ: IPL ಪಂದ್ಯಗಳು ಮುಂದೂಡಿಕೆ ಸಾಧ್ಯತೆ?

ಯುದ್ಧದ ಹಿನ್ನೆಲೆ: IPL ಪಂದ್ಯಗಳು ಮುಂದೂಡಿಕೆ ಸಾಧ್ಯತೆ?

March 12, 2026

ಇತ್ತ ಸು ಫ್ರಮ್​ ಸೋ ಸಿನಿಮಾ ಕೂಡ ಶತಕೋಟಿ ಸರದಾರನಾಗಿ ಹೊರಹೊಮ್ಮಿದರೆ, ದರ್ಶನ್ ಅಭಿನಯದ ದಿ ಡೆವಿಲ್ ಸಿನಿಮಾ ಇನ್ನೂ ಕೂಡ ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿದ್ದು ಕಲೆಕ್ಷನ್ ಮತ್ತಷ್ಟು ಏರಿಕೆಯಾಗುವ ಮುನ್ಸೂಚನೆ ನೀಡಿದೆ.

ಹಾಗಾದರೆ 2025ರಲ್ಲಿ ಅತಿ ಹೆಚ್ಚು ಹಣ ಗಳಿಸಿದ, ಪ್ರೇಕ್ಷಕರ ಜೇಬಿಗೆ ಕತ್ತರಿ ಹಾಕದೆ ಮನರಂಜನೆಯ ಮಹಾಪೂರವನ್ನೇ ಹರಿಸಿದ ಆ ಟಾಪ್ 10 ಸಿನಿಮಾಗಳು ಯಾವುವು? ಅವುಗಳ ಗಳಿಕೆ ಎಷ್ಟು? ಇಲ್ಲಿದೆ ನೋಡಿ ಸಿನಿ ರಿಪೋರ್ಟ್.

2025ರ ಟಾಪ್ 10 ಬ್ಲಾಕ್ ಬಸ್ಟರ್ ಸಿನಿಮಾಗಳು

1. ಕಾಂತಾರ ಚಾಪ್ಟರ್ 1
ಗಳಿಕೆ 852.25 ಕೋಟಿ ರೂಪಾಯಿ

2. ಮಹಾವತಾರ್ ನರಸಿಂಹ
ಗಳಿಕೆ 326.82 ಕೋಟಿ ರೂಪಾಯಿ

3. ಸು ಫ್ರಮ್​ ಸೋ
ಗಳಿಕೆ 122.83 ಕೋಟಿ ರೂಪಾಯಿ

4. ದಿ ಡೆವಿಲ್
ಗಳಿಕೆ 26.85 ಕೋಟಿ ರೂಪಾಯಿ (ಪ್ರದರ್ಶನ ಮುಂದುವರಿದಿದೆ)

5. ಎಕ್ಕ
ಗಳಿಕೆ 11.39 ಕೋಟಿ ರೂಪಾಯಿ

6. ಮಾದೇವ
ಗಳಿಕೆ 7.4 ಕೋಟಿ ರೂಪಾಯಿ

7. ಛೂ ಮಂತರ್
ಗಳಿಕೆ 6.45 ಕೋಟಿ ರೂಪಾಯಿ

8. ಬ್ರ್ಯಾಟ್
ಗಳಿಕೆ 5.61 ಕೋಟಿ ರೂಪಾಯಿ

9. ಯುದ್ಧಕಾಂಡ ಚಾಪ್ಟರ್ 2
ಗಳಿಕೆ 5.54 ಕೋಟಿ ರೂಪಾಯಿ

10. ಏಳುಮಲೆ
ಗಳಿಕೆ 5.25 ಕೋಟಿ ರೂಪಾಯಿ

ಒಟ್ಟಾರೆಯಾಗಿ 2025 ನೇ ಸಾಲು ಕನ್ನಡ ಚಿತ್ರರಂಗಕ್ಕೆ ಸುವರ್ಣ ಅಧ್ಯಾಯವಾಗಿ ಪರಿಣಮಿಸಿದೆ. ಸಣ್ಣ ಮತ್ತು ಮಧ್ಯಮ ಬಜೆಟ್ ಸಿನಿಮಾಗಳು ಕಷ್ಟಪಟ್ಟರೂ, ಬಿಗ್ ಬಜೆಟ್ ಸಿನಿಮಾಗಳು ಮಾತ್ರ ನಿರ್ಮಾಪಕರ ಜೇಬು ತುಂಬಿಸುವಲ್ಲಿ ಯಶಸ್ವಿಯಾಗಿವೆ.

ShareTweetSendShare
Join us on:

Related Posts

ಉತ್ತರ ಪ್ರದೇಶದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಿಜೆಪಿ ತಂತ್ರ: ‘ಮಿಷನ್ ಯುಪಿ 2027’

ಉತ್ತರ ಪ್ರದೇಶದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಿಜೆಪಿ ತಂತ್ರ: ‘ಮಿಷನ್ ಯುಪಿ 2027’

by Shwetha
March 12, 2026
0

ಭಾರತೀಯ ಜನತಾ ಪಾರ್ಟಿ ಉತ್ತರ ಪ್ರದೇಶದಲ್ಲಿ ಸತತ ಮೂರನೇ ಅವಧಿಗೆ ಅಧಿಕಾರವನ್ನು ಮರಳಿ ಪಡೆಯಲು ಹೊಸ ರಾಜಕೀಯ ತಂತ್ರವನ್ನು ರೂಪಿಸಿದೆ. ಈ ತಂತ್ರಕ್ಕೆ ಆರ್‌ಎಸ್‌ಎಸ್ ಸಹ ಒಪ್ಪಿಗೆ...

ಯುದ್ಧದ ಹಿನ್ನೆಲೆ: IPL ಪಂದ್ಯಗಳು ಮುಂದೂಡಿಕೆ ಸಾಧ್ಯತೆ?

ಯುದ್ಧದ ಹಿನ್ನೆಲೆ: IPL ಪಂದ್ಯಗಳು ಮುಂದೂಡಿಕೆ ಸಾಧ್ಯತೆ?

by Shwetha
March 12, 2026
0

ಮಾರ್ಚ್ 28ರಿಂದ ಆರಂಭವಾಗಬೇಕಿದ್ದ ಐಪಿಎಲ್ ಟೂರ್ನಿ ಮುಂದೂಡಲಾಗುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿ ಮತ್ತು ಅದರ ಪರಿಣಾಮಗಳಿಂದ ಹಲವು ವ್ಯವಸ್ಥಾತ್ಮಕ ಸಮಸ್ಯೆಗಳು...

ಸುಪ್ರೀಂ ಕೋರ್ಟ್ ಅಸಮಾಧಾನ ಬಳಿಕ  ಇಡೀ ಪಠ್ಯಪುಸ್ತಕ ಹಿಂಪಡೆದು ಕ್ಷಮೆಯಾಚಿಸಿದ NCERT

NCERT ಪಠ್ಯಪುಸ್ತಕಗಳ ಸಮಗ್ರ ಪರಿಶೀಲನೆ: ಸುಪ್ರೀಂ ಕೋರ್ಟ್ ಸೂಚನೆ

by Shwetha
March 12, 2026
0

ಸುಪ್ರೀಂ ಕೋರ್ಟ್ ಎನ್‌ಸಿಇಆರ್‌ಟಿ ಪಠ್ಯಪುಸ್ತಕ ವಿವಾದದ ಹಿನ್ನೆಲೆಯಲ್ಲಿ ಮಹತ್ವದ ಸೂಚನೆ ನೀಡಿದೆ. NCERT ಪ್ರಕಟಿಸಿರುವ 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿನ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಎಂಬ ವಿಷಯಕ್ಕೆ...

ಇರಾನ್ ಬೆದರಿಕೆ ನಡುವೆಯೂ ಮುಂಬೈ ತಲುಪಿದ ತೈಲ ಟ್ಯಾಂಕರ್: ಜಾಗತಿಕ ಮಟ್ಟದಲ್ಲಿ ಭಾರತದ ದರ್ಬಾರ್ ಶುರು!

ಇರಾನ್ ಬೆದರಿಕೆ ನಡುವೆಯೂ ಮುಂಬೈ ತಲುಪಿದ ತೈಲ ಟ್ಯಾಂಕರ್: ಜಾಗತಿಕ ಮಟ್ಟದಲ್ಲಿ ಭಾರತದ ದರ್ಬಾರ್ ಶುರು!

by Shwetha
March 12, 2026
0

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡಗಳು ಕವಿದಿರುವ ಪ್ರಸ್ತುತ ಸಂದರ್ಭದಲ್ಲಿ, ಇಡೀ ವಿಶ್ವದ ಜೀವನಾಡಿಯಾಗಿರುವ ತೈಲ ಪೂರೈಕೆ ಮಾರ್ಗ 'ಹಾರ್ಮುಜ್ ಜಲಸಂಧಿ' ಬಹುತೇಕ ಸ್ತಬ್ಧಗೊಂಡಿದೆ. ಇರಾನ್ ನೀಡಿದ್ದ ನೇರ...

ಗ್ಯಾಸ್ ಕೊರತೆ ಪರಿಣಾಮ: ಬೆಂಗಳೂರಿನ ಹೋಟೆಲ್‌ಗಳಲ್ಲಿ ಕೆಲವು ತಿಂಡಿಗಳಿಗೆ ತಾತ್ಕಾಲಿಕ ಬಂದ್

ಗ್ಯಾಸ್ ಕೊರತೆ ಪರಿಣಾಮ: ಬೆಂಗಳೂರಿನ ಹೋಟೆಲ್‌ಗಳಲ್ಲಿ ಕೆಲವು ತಿಂಡಿಗಳಿಗೆ ತಾತ್ಕಾಲಿಕ ಬಂದ್

by Shwetha
March 12, 2026
0

ಬೆಂಗಳೂರು ನಗರದಲ್ಲಿನ ಹೋಟೆಲ್‌ಗಳಲ್ಲಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿರುವ ಹಿನ್ನೆಲೆ ಕೆಲವು ತಿಂಡಿಗಳನ್ನು ತಾತ್ಕಾಲಿಕವಾಗಿ ತಯಾರಿಸದಂತೆ ಹೋಟೆಲ್ ಮಾಲೀಕರು ನಿರ್ಧರಿಸಿದ್ದಾರೆ. ವಿಶೇಷವಾಗಿ ಹೆಚ್ಚು...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram