ಹೃದಯಾಘಾತ ಚಿಕಿತ್ಸೆ ವೇಳೆ ವೈದ್ಯರಿಗೂ ಹೃದಯಾಘಾತ – ಇಬ್ಬರು ಮೃತ
ಸಾವು ಯಾರಿಗೆ ಯಾವಾಗ ಹೇಗೆ ಬರುತ್ತೆ ಅಂತ ಯಾರಿಂದಲೂ ಊಯಿಸಲಾಗುವುದಿಲ್ಲ. ರೋಗಿಯೊಬ್ಬರ ಪ್ರಾಣ ಉಳಿಸುವ ಸಂದರ್ಭದಲ್ಲಿ ವೈದ್ಯರೊಬ್ಬರ ಪ್ರಾಣಪಕ್ಕಿಯೇ ಹಾರಿ ಹೋಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ತೆಲಂಗಾಣದ ಕಾಮಾರೆಡ್ಡಿ ಜಿಲ್ಲೆಯ ಗಾಂಧಾರಿ ಮಂಡಲದ ಗುಜ್ಜು ತಂಡ ಪ್ರದೇಶದ ಸರ್ಜು ಎಂಬ ವ್ಯಕ್ತಿಗೆ ಭಾನುವಾರ ಬೆಳಗ್ಗೆ ಹೃದಯಾಘಾತವಾಗಿದೆ. ಕೂಡಲೇ ಕುಟುಂಬದವರು ಖಾಸಗಿ ನರ್ಸಿಂಗ್ ಹೋಂಗೆ ಕರೆದುಕೊಂಡು ಹೋಗಿದ್ದಾರೆ.
ಹೃದಯಾಘಾತವಾಗಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿದ್ದಾಗಲೇ ಖಾಸಗಿ ಆಸ್ಪತ್ರೆಯ ವೈದ್ಯರಾದ ಡಾ. ಲಕ್ಷ್ಮಣ್ ಅವರಿಗೂ ಕೂಡ ಹೃದಯಾಘಾತವಾಗಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ವೈದ್ಯ ಮೃತಪಟ್ಟಿದ್ದರಿಂದ ಕುಟುಂಬದವರು ಸರ್ಜುನನ್ನು ಕಾಮಾರೆಡ್ಡಿ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನ ಪಟ್ಟಿದ್ದಾರೆ ಆದರೆ ಮಾರ್ಗಮಧ್ಯದಲ್ಲಿ ಆತನು ಮೃತಪಟ್ಟಿದ್ದಾನೆ.
ವೈದ್ಯ ಡಾ. ಲಕ್ಷ್ಮಣ್ ನಿಜಾಮಾಬಾದ್ ನಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡಿತ್ತಿದ್ದರು ಜೊತೆಗೆ ಖಾಸಗಿಯಾಗಿ ಕ್ಲಿನಿಕ್ ಸಹ ನಡೆಸುತ್ತಿದ್ದಾರೆ.








