doctor education in regional language-ಹೊಸದಿಲ್ಲಿ: ವೈದ್ಯಕೀಯ ಶಿಕ್ಷಣ ಪಡೆದು ಕೊಳ್ಳುವುದು ಎಂದರೆ ಎಲ್ಲರ ತಲೆಯಲ್ಲಿ ಆಂಗ್ಲ ಮಾಧ್ಯಮ ಎಂದೆ ಅಚ್ಚು ಉಳಿದು ವೈದ್ಯಕಿಯ ಶಿಕ್ಷಣ ಪಡೆದು ಕೊಳ್ಳುವ ಕನಸ್ಸು ಕನಸ್ಸಾಗಿ ಉಳಿಸಿಕೊಂಡವರೆ ಹೆಚ್ಚು ಆದರೆ ಇನ್ನೂ ಮುಂದೆ ಹಾಗಲ್ಲ…
ಹೌದು ಇನ್ನು ಮುಂದೆ ಪ್ರಾದೇಶಿಕ ಬಾಷೆಯಲ್ಲಿಯೂ ವೈದ್ಯಕಿಯ ಶಿಕ್ಷಣ ನೀಡಲು NMC ಸಿದ್ದತೆಗಳನ್ನು ನಡೆಸಿದೆ. ಆ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ಎನ್ ಎಂ ಸಿ ಮುಂದಾಗಿದೆ.
ಅದರ ಭಾಗವಾಗಿ ದೇಶದಲ್ಲಿಯೇ ಮೊದಲ ಬಾರಿಗೆ ಮಧ್ಯಪ್ರದೇಶದಲ್ಲಿ ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳಿಗಾಗಿ ಹಿಂದಿ ಭಾಷೆಯಲ್ಲಿ ಪಠ್ಯಪುಸ್ತಕಗಳನ್ನು ಹೊರತರಲಾಗಿದೆ.
ಅದರಂತೆ ಶೀಘ್ರದಲ್ಲಿ ದೇಶದದ ಇನ್ನುಳಿದ ಪ್ರದೇಶಿಕ ಭಾಷೆಗಳಲ್ಲೂ ಕೂಡ ಪಠ್ಯಪುಸ್ತಕಗಳನ್ನು ಹೊರತರಲು ರಾಷ್ಟ್ರೀಯ ವೈದ್ಯಕೀಯ ಆಯೋಗ ಪ್ಲಾನ್ ಮಾಡಿಕೊಂಡಿದೆ.
ಈ ಕುರಿತು ರಾಜ್ಯ ವೈದ್ಯಕೀಯ ಮಂಡಳಿಗಳು, ವೈದ್ಯಕೀಯ ವಿಶ್ವವಿದ್ಯಾಲಯಗಳು, ಕಾಲೇಜುಗಳು, ವೈದ್ಯರು ಮತ್ತು ಪ್ರಾಧ್ಯಾಪಕರೊಂದಿಗೆ ಸಂವಾದವನ್ನು ಪ್ರಾರಂಭಿಸಿದೆ.
ಇನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಕ್ಟೋಬರ್ 16 ರಂದು ಹಿಂದಿಯಲ್ಲಿ ದೇಶದ ಮೊದಲ ಎಂಬಿಬಿಎಸ್ ಪಠ್ಯಕ್ರಮವನ್ನು ಬಿಡುಗಡೆ ಮಾಡಲಿದ್ದಾರೆ.