ಸ್ಪೇನ್ ನಲ್ಲಿ ಕೊರೊನಾಸುರ ಮರಣಮೃದಂಗ ಬಾರಿಸುತ್ತಿದ್ದು, 7,716 ಮಂದಿ ಜೀವ ಕಳೆದುಕೊಂಡಿದ್ದಾರೆ. ಈ ಮೂಲಕ ಕೊರೊನಾ ವೈರಸ್ ನಿಂದ ಅತಿ ಹೆಚ್ಚು ಸಾವು ಸಂಭವಿಸಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಸ್ಪೇನ್ ಎರಡನೇ ಸ್ಥಾನಕ್ಕೇರಿದೆ. ಈ ಭೀಕರ ಪರಿಸ್ಥಿತಿಯನ್ನು ನಿಭಾಯಿಸಲು ಹರಸಾಹಸ ಪಡುತ್ತಿರುವ ಸ್ಪ್ಯಾನಿಶ್ ವೈದ್ಯರು ದೇವರ ಮೊರೆ ಹೋಗಿದ್ದಾರೆ.
ರೋಗಿಗಳ ಪ್ರಾಣ ಉಳಿಸಲು ಸ್ಪೇನ್ ನ ವೈದ್ಯರು ಓಂಕಾರ ಪಠಿಸಿ, ಜೀವ ಸಂಕುಲ ಉಳಿಸಲು ದೇವರಲ್ಲಿ ಬೇಡಿ ಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಸ್ಪೇನ್ ವೈದ್ಯರು ಓಂಕಾರ ಪಠಿಸುತ್ತಿದ್ದಾರೆ ಎನ್ನಲಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.ವಿಶೇಷ ಎಂದರೆ ಭಾರತೀಯರನ್ನೂ ಈ ವಿಡಿಯೋ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.
ಕೋವಿಡ್-19 ರೋಗಿಗಳು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುವ ವಿಡಿಯೋ ಫೇಸ್ ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಮ್, ವಾಟ್ಸಾಪ್ ಗಳಲ್ಲಿ ಹರಿದಾಡುತ್ತಿದೆ.








