ಬಹುತೇಕ ಮನೆಗಳಲ್ಲಿ ನಾನ್‌ಸ್ಟಿಕ್ ಪ್ಯಾನ್‌ಗಳ ಬಳಕೆ ಸಾಮಾನ್ಯವಾಗಿದೆ. ಇದು ಮಾಡಲು ಸುಲಭ ಹಾಗೂ ಕಡಿಮೆ ಅಡುಗೆ ಎಣ್ಣೆ ಸಾಕು, ಹಾಗೆಯೇ ಸ್ವಚ್ಛಗೊಳಿಸಲು ಸುಲಭ. ನಾನ್‌ಸ್ಟಿಕ್ ಪಾತ್ರೆಗಳಿಗೆ ಆಹಾರವು ಹೆಚ್ಚು ಅಂಟಿಕೊಳ್ಳುವುದಿಲ್ಲ, ಇದರಿಂದ ಸ್ವಚ್ಛಗೊಳಿಸುವುದು ಸುಲಭ. ಆದರೆ, ನಾನ್‌ಸ್ಟಿಕ್ ಪ್ಯಾನ್‌ಗಳಲ್ಲಿ ಬಳಸಲಾಗುವ ರಾಸಾಯನಿಕಗಳು ನಮ್ಮ ಆರೋಗ್ಯಕ್ಕೆ ಅಪಾಯಕಾರಿ.ಹಾಗದ್ರೆ ಇದರ ಬಳಕೆಯನ್ನು ಹೇಗೆ ಮಾಡ್ಬೇಕು ತಿಳಿಯೋಣ ಬನ್ನಿ..
ನಾನ್‌ಸ್ಟಿಕ್ ಪ್ಯಾನ್‌ಗಳ ವಿಧಗಳು
ಸಾಂಪ್ರದಾಯಿಕ ನಾನ್‌ಸ್ಟಿಕ್ ಪ್ಯಾನ್‌ಗಳು ಸಿಂಥೆಟಿಕ್ ಕೆಮಿಕಲ್‌ಗಳಿಂದ ತಯಾರಿಸಲಾಗಿರುತ್ತದೆ.
ಸಿರಾಮಿಕ್ ನಾನ್‌ಸ್ಟಿಕ್ ಪ್ಯಾನ್‌ಗಳು ಅಲ್ಯೂಮಿನಿಯಂ ಅಥವಾ ಇತರ ವಸ್ತುಗಳಿಂದ ಮಾಡಲ್ಪಟ್ಟಿರುತ್ತದೆ.
ಆರೋಗ್ಯದ ಅಪಾಯಗಳು
ಟೆಫ್ಲಾನ್: ಸಾಂಪ್ರದಾಯಿಕ ನಾನ್‌ಸ್ಟಿಕ್ ಪ್ಯಾನ್‌ಗಳಲ್ಲಿ ಟೆಫ್ಲಾನ್ ಅಂಶವಿದೆ, ಇದು ಆರೋಗ್ಯಕ್ಕೆ ಹಾನಿಕಾರಕ. ಹೆಚ್ಚಿನ ತಾಪಮಾನದಲ್ಲಿ, ಟೆಫ್ಲಾನ್ ಲೇಪನಗಳು ಒಡೆಯಲು ಪ್ರಾರಂಭಿಸಬಹುದು, ಇದು ವಿಷಕಾರಿ ಹೊಗೆಯನ್ನು ಗಾಳಿಯಲ್ಲಿ ಬಿಡುಗಡೆ ಮಾಡುತ್ತದೆ.
ಕ್ಯಾನ್ಸರ್ ಅಪಾಯ: ಕೆಲವು ಅಧ್ಯಯನಗಳು ಟೆಫ್ಲಾನ್ ಹಾನಿಕಾರಕ ಮತ್ತು ಕ್ಯಾನ್ಸರ್‌ನಂತಹ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಹೇಳುತ್ತವೆ.
ಸುರಕ್ಷತಾ ಕ್ರಮಗಳು
ಖಾಲಿ ಪ್ಯಾನ್ ಬಿಸಿ ಮಾಡಬೇಡಿ: ನಾನ್‌ಸ್ಟಿಕ್ ಪಾತ್ರೆಯನ್ನು ಸ್ಟೌವ್ ಮೇಲಿಟ್ಟು, ಅದಕ್ಕೆ ಏನೂ ಹಾಕದೆ ಖಾಲಿಯಾಗಿ ಬಿಸಿ ಮಾಡಬೇಡಿ.
ಮಧ್ಯಮ ಅಥವಾ ಕಡಿಮೆ ಶಾಖ: ಹೆಚ್ಚಿನ ಶಾಖದಲ್ಲಿ ಅಡುಗೆ ಮಾಡುವುದನ್ನು ತಪ್ಪಿಸಿ.
ಗಾಳಿಯಾಡಲು ಅನುವು ಮಾಡಿಕೊಡಿ: ಅಡುಗೆ ಮಾಡುವಾಗ ಎಕ್ಸಾಸ್ಟ್ ಫ್ಯಾನ್ ಅನ್ನು ಆನ್ ಮಾಡಿ ಅಥವಾ ಕಿಟಕಿಗಳನ್ನು ತೆರೆದಿಡಿ.
ಮೃದುವಾದ ಸಾಧನಗಳು: ಮರದ, ಸಿಲಿಕೋನ್ ಅಥವಾ ಪ್ಲಾಸ್ಟಿಕ್ ಸೌಟ್ಗಳನ್ನು ಬಳಸಿ.
ನಿಧಾನವಾಗಿ ತೊಳೆಯಿರಿ: ನಾನ್‌ಸ್ಟಿಕ್ ಪಾತ್ರೆಗಳನ್ನು ಸ್ಪಾಂಜ್ ಅಥವಾ ಕೈಗಳಿಂದಲೇ ನಿಧಾನವಾಗಿ ತೊಳೆಯಿರಿ.
ಹಳೆಯ ಪಾತ್ರೆಗಳನ್ನು ಬದಲಾಯಿಸಿ: ನಾನ್‌ಸ್ಟಿಕ್ ಪಾತ್ರೆಗಳನ್ನು ಬಹಳ ದಿನಗಳಿಂದ ಬಳಸುತ್ತಿದ್ದರೆ ಅಥವಾ ಅದರ ಮೇಲ್ಭಾಗದ ಲೇಯರ್ ಕಿತ್ತುಹೋಗಿದ್ದರೆ ಹೊಸತು ಖರೀದಿಸಿ.
ನಾನ್‌ಸ್ಟಿಕ್ ಪ್ಯಾನ್‌ಗಳನ್ನು ಬಳಸುವಾಗ ಈ ಅಂಶಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.








