ADVERTISEMENT
Thursday, April 2, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ರಾಯರ ಫೋಟೋ ಕಂಡರೆ ಕೆಂಡಾಮಂಡಲ, ಚಾಣಕ್ಯನ ಪುಸ್ತಕಕ್ಕೆ ಜೈ! ವಿವಾದದ ಕಿಡಿ ಹೊತ್ತಿಸಿದ ಸಿಎಂ ಸಿದ್ದರಾಮಯ್ಯ ನಡೆ

Does Siddaramaiah not value the feelings of his devotees? Public outrage against the CM who rejected and glared at Rayara photo

Shwetha by Shwetha
January 20, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತೊಮ್ಮೆ ತಮ್ಮ ನಡೆವಳಿಕೆಯಿಂದ ಭಾರೀ ವಿವಾದವೊಂದಕ್ಕೆ ಕಾರಣರಾಗಿದ್ದಾರೆ. ಸದಾ ಒಂದಿಲ್ಲೊಂದು ಧಾರ್ಮಿಕ ವಿಚಾರಗಳಲ್ಲಿ ಸುದ್ದಿಯಾಗುವ ಸಿಎಂ, ಇದೀಗ ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳ ಫೋಟೋವನ್ನು ತಿರಸ್ಕರಿಸುವ ಮೂಲಕ ಭಕ್ತರ ಮತ್ತು ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಾರ್ವಜನಿಕವಾಗಿ ಅಭಿಮಾನಿಯೊಬ್ಬರು ಪ್ರೀತಿಯಿಂದ ನೀಡಿದ ರಾಯರ ಫೋಟೋವನ್ನು ಸ್ವೀಕರಿಸಲು ನಿರಾಕರಿಸಿದ ಘಟನೆ ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಈ ಪ್ರಸಂಗ ನಡೆದಿದೆ. ಮುಖ್ಯಮಂತ್ರಿಗಳನ್ನು ಕಂಡ ತಕ್ಷಣ ಕೆಲವು ಅಭಿಮಾನಿಗಳು ಮತ್ತು ಸಾರ್ವಜನಿಕರು ಮನವಿ ಪತ್ರಗಳನ್ನು ಸಲ್ಲಿಸಲು ಮತ್ತು ಅವರನ್ನು ಮಾತನಾಡಿಸಲು ಕಾರಿನ ಬಳಿ ಮುಗಿಬಿದ್ದಿದ್ದರು. ಈ ಸಂದರ್ಭದಲ್ಲಿ ಓರ್ವ ಅಭಿಮಾನಿ ಅತ್ಯಂತ ಭಕ್ತಿಯಿಂದ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಫೋಟೋವನ್ನು ಸಿಎಂ ಅವರಿಗೆ ಉಡುಗೊರೆಯಾಗಿ ನೀಡಲು ಮುಂದಾದರು.

Related posts

ಕಾವೇರಿದ ಉಪಚುನಾವಣೆ ಅಖಾಡ; ಹಾಲಿ ಸಿಎಂ ವಿರುದ್ಧ ಮಾಜಿ ಸಿಎಂ ವಾಗ್ದಾಳಿ

ಕಾವೇರಿದ ಉಪಚುನಾವಣೆ ಅಖಾಡ; ಹಾಲಿ ಸಿಎಂ ವಿರುದ್ಧ ಮಾಜಿ ಸಿಎಂ ವಾಗ್ದಾಳಿ

April 2, 2026
SSLC & PUC ಪರೀಕ್ಷೆ-2 ಪರಿಷ್ಕೃತ ವೇಳಾಪಟ್ಟಿ ಪ್ರಕಟ

SSLC & PUC ಪರೀಕ್ಷೆ-2 ಪರಿಷ್ಕೃತ ವೇಳಾಪಟ್ಟಿ ಪ್ರಕಟ

April 2, 2026

ಆದರೆ, ರಾಯರ ಫೋಟೋವನ್ನು ಕೈಗೆತ್ತಿಕೊಂಡ ಸಿಎಂ ಸಿದ್ದರಾಮಯ್ಯ, ಕ್ಷಣಮಾತ್ರದಲ್ಲಿ ಅದನ್ನು ಆ ಅಭಿಮಾನಿಗೆ ವಾಪಸ್ ನೀಡಿದ್ದಾರೆ. ಅಷ್ಟೇ ಅಲ್ಲದೆ, ಫೋಟೋ ಕೊಟ್ಟ ವ್ಯಕ್ತಿಯತ್ತ ದುರುಗುಟ್ಟಿ ನೋಡಿದ್ದಾರೆ ಎಂದು ವರದಿಯಾಗಿದೆ. ಆಶ್ಚರ್ಯಕರ ಸಂಗತಿಯೆಂದರೆ, ಇದೇ ವೇಳೆ ಮತ್ತೊಬ್ಬ ಅಭಿಮಾನಿ ನೀಡಿದ ಚಾಣಕ್ಯನ ಕುರಿತಾದ ಪುಸ್ತಕವನ್ನು ಸಿದ್ದರಾಮಯ್ಯ ಅವರು ಯಾವುದೇ ತಕರಾರಿಲ್ಲದೆ ಸ್ವೀಕರಿಸಿದ್ದಾರೆ. ದೈವ ಭಕ್ತಿಯ ಸಂಕೇತವಾದ ಫೋಟೋವನ್ನು ತಿರಸ್ಕರಿಸಿ, ಬೌದ್ಧಿಕ ಸಂಕೇತವಾದ ಪುಸ್ತಕವನ್ನು ಸ್ವೀಕರಿಸಿದ ಸಿಎಂ ಅವರ ಈ ತಾರತಮ್ಯದ ನಡೆ ಈಗ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಹಿಂದೂ ವಿರೋಧಿ ಪಟ್ಟ ಮತ್ತೆ ಮುನ್ನೆಲೆಗೆ

ಈ ಹಿಂದೆಯೂ ಸಿದ್ದರಾಮಯ್ಯ ಅವರು ಕುಂಕುಮ ಇಟ್ಟುಕೊಳ್ಳಲು ನಿರಾಕರಿಸಿದ್ದು, ಮೈಸೂರು ಪೇಟ ಧರಿಸಲು ಹಿಂಜರಿದಿದ್ದು ಮತ್ತು ದೇವಸ್ಥಾನಗಳಿಗೆ ಭೇಟಿ ನೀಡಿದಾಗ ತೋರುವ ಹಾವಭಾವಗಳು ಚರ್ಚೆಯ ವಿಷಯವಾಗಿದ್ದವು. ಈಗ ರಾಯರ ಫೋಟೋ ತಿರಸ್ಕರಿಸಿದ ಘಟನೆ ಬಿಜೆಪಿಗೆ ಹೊಸ ಅಸ್ತ್ರವನ್ನು ಒದಗಿಸಿಕೊಟ್ಟಂತಾಗಿದೆ.

ಸಿದ್ದರಾಮಯ್ಯ ವಿರುದ್ಧ ಆರ್ ಅಶೋಕ್ ಆಕ್ರೋಶ

ಘಟನೆ ನಡೆಯುತ್ತಿದ್ದಂತೆಯೇ ದೆಹಲಿಯಲ್ಲಿದ್ದ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಸಿಎಂ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯನವರಿಗೆ ಹಿಂದೂ ದೇವರುಗಳನ್ನು ಕಂಡರೆ ಆಗುವುದಿಲ್ಲ. ಅವರಿಗೆ ಹಣೆಗೆ ಇಡುವ ತಿಲಕ, ನಾಮ ಹಾಗೂ ಕೃಷ್ಣನನ್ನು ಕಂಡರೆ ಮೈಮಲೆಯೇರುತ್ತದೆ. ಆದರೆ ಅವರಿಗೆ ಟೋಪಿ ಕಂಡರೆ ಮಾತ್ರ ಎಲ್ಲಿಲ್ಲದ ಖುಷಿ ಎಂದು ವ್ಯಂಗ್ಯವಾಡಿದ್ದಾರೆ.

ಅಂದು ಟಿಪ್ಪು ಜಯಂತಿ ಆಚರಿಸಿ ಕೋಮು ಗಲಭೆಗೆ ಕಾರಣರಾದರು. ಕೋಗಿಲು ಲೇಔಟ್ ನಲ್ಲಿ ಮುಸ್ಲಿಮರಿಗೆ ಮನೆಗಳನ್ನು ಕೊಡುವುದು ಇರಲಿ, ಪ್ರತಿಯೊಂದರಲ್ಲೂ ಅವರದ್ದು ತುಷ್ಟೀಕರಣದ ರಾಜಕಾರಣ. ಇದು ಅವರ ನಿರಂತರ ಪ್ರಕ್ರಿಯೆಯಾಗಿದೆ. ಬಹುಸಂಖ್ಯಾತ ಹಿಂದೂಗಳು ಇವರ ಈ ಧೋರಣೆಯನ್ನು ಅರ್ಥಮಾಡಿಕೊಂಡು ತಕ್ಕ ಪಾಠ ಕಲಿಸದಿದ್ದರೆ, ಸಿದ್ದರಾಮಯ್ಯ ತಮ್ಮ ಈ ಹಿಂದೂ ವಿರೋಧಿ ಚಾಳಿಯನ್ನು ಮುಂದುವರಿಸುತ್ತಾರೆ ಎಂದು ಅಶೋಕ್ ಎಚ್ಚರಿಕೆ ನೀಡಿದ್ದಾರೆ.

ಸೌಜನ್ಯ ಮರೆತರೆ ಹೇಗೆ? ಅಶ್ವತ್ಥನಾರಾಯಣ ಪ್ರಶ್ನೆ

ಬಿಜೆಪಿ ನಾಯಕ ಅಶ್ವತ್ಥನಾರಾಯಣ ಅವರು ಕೂಡ ಸಿಎಂ ನಡೆಯನ್ನು ಖಂಡಿಸಿದ್ದು, ಇದು ಸೌಜನ್ಯದ ಪ್ರಶ್ನೆ ಎಂದು ಹೇಳಿದ್ದಾರೆ. ಸಾರ್ವಜನಿಕ ಜೀವನದಲ್ಲಿರುವವರು ಯಾರೇ ಏನೇ ಪ್ರೀತಿಯಿಂದ ನೀಡಿದರೂ ಅದನ್ನು ಸ್ವೀಕರಿಸುವುದು ಕನಿಷ್ಠ ಸೌಜನ್ಯ. ಕೊಡುವವರ ಭಾವನೆ ಮತ್ತು ನಂಬಿಕೆಗೆ ಗೌರವ ಕೊಡುವುದು ಜನಪ್ರತಿನಿಧಿಯ ಕರ್ತವ್ಯ. ಧರ್ಮ ಯಾವುದಾಧರೂ ಇರಲಿ, ವ್ಯಕ್ತಿಯೊಬ್ಬರು ತಂದುಕೊಟ್ಟಿದ್ದನ್ನು ಪಡೆಯದೆ, ದುರುಗುಟ್ಟಿ ನೋಡುವುದು ಒಬ್ಬ ಮುಖ್ಯಮಂತ್ರಿಗೆ ಶೋಭೆ ತರುವಂತದ್ದಲ್ಲ. ಸಿದ್ದರಾಮಯ್ಯನಂತಹ ಹಿರಿಯ ನಾಯಕರಿಂದ ಇಂತಹ ಅಸೌಜನ್ಯದ ನಡೆಯನ್ನು ನಿರೀಕ್ಷಿಸಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ, ಚಾಣಕ್ಯನ ಪುಸ್ತಕ ಬೇಕು, ಆದರೆ ರಾಯರ ಫೋಟೋ ಬೇಡ ಎಂಬ ಸಿದ್ದರಾಮಯ್ಯನವರ ಈ ನಡೆ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗುತ್ತಿದ್ದು, ಪರ-ವಿರೋಧದ ಚರ್ಚೆ ತೀವ್ರಗೊಂಡಿದೆ.

ShareTweetSendShare
Join us on:

Related Posts

ಕಾವೇರಿದ ಉಪಚುನಾವಣೆ ಅಖಾಡ; ಹಾಲಿ ಸಿಎಂ ವಿರುದ್ಧ ಮಾಜಿ ಸಿಎಂ ವಾಗ್ದಾಳಿ

ಕಾವೇರಿದ ಉಪಚುನಾವಣೆ ಅಖಾಡ; ಹಾಲಿ ಸಿಎಂ ವಿರುದ್ಧ ಮಾಜಿ ಸಿಎಂ ವಾಗ್ದಾಳಿ

by Shwetha
April 2, 2026
0

ರಾಜ್ಯದ ಉಪಚುನಾವಣೆಯ ರಾಜಕೀಯ ಕಣ ಇದೀಗ ತೀವ್ರ ಕಾವೇರಿದ್ದು, ಕಾಂಗ್ರೆಸ್ ಹಾಗೂ BJP ಪಕ್ಷಗಳು ತಮ್ಮ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸುತ್ತಿವೆ. ಈ ಹಿನ್ನಲೆಯಲ್ಲಿ ಹಾಲಿ...

SSLC & PUC ಪರೀಕ್ಷೆ-2 ಪರಿಷ್ಕೃತ ವೇಳಾಪಟ್ಟಿ ಪ್ರಕಟ

SSLC & PUC ಪರೀಕ್ಷೆ-2 ಪರಿಷ್ಕೃತ ವೇಳಾಪಟ್ಟಿ ಪ್ರಕಟ

by Shwetha
April 2, 2026
0

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ದ್ವಿತೀಯ ಪಿಯುಸಿ ಹಾಗೂ SSLC ಪರೀಕ್ಷೆ-2ರ ಪರಿಷ್ಕೃತ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಹೊಸ ವೇಳಾಪಟ್ಟಿಯ ಪ್ರಕಾರ: ದ್ವಿತೀಯ ಪಿಯುಸಿ...

ಯೋಗಿ ತಾಯಿಗೆ ಅವಹೇಳನ ಮಾಡಿದ್ದ ಮೌಲ್ವಿ ಅರೆಸ್ಟ್ ದರ್ಪ ಬಿಟ್ಟು ಕ್ಷಮೆಯಾಚಿಸಿದ ಆರೋಪಿ

ಯೋಗಿ ತಾಯಿಗೆ ಅವಹೇಳನ ಮಾಡಿದ್ದ ಮೌಲ್ವಿ ಅರೆಸ್ಟ್ ದರ್ಪ ಬಿಟ್ಟು ಕ್ಷಮೆಯಾಚಿಸಿದ ಆರೋಪಿ

by Shwetha
April 2, 2026
0

ಪ್ರಜಾಪ್ರಭುತ್ವದಲ್ಲಿ ವಾಕ್ ಸ್ವಾತಂತ್ರ್ಯವಿದೆ ಎಂಬ ಒಂದೇ ಕಾರಣಕ್ಕೆ ದೇಶದ ಪ್ರಧಾನಿ, ಮುಖ್ಯಮಂತ್ರಿ ಸೇರಿದಂತೆ ಗಣ್ಯವ್ಯಕ್ತಿಗಳ ತಂದೆ ತಾಯಿ ಮತ್ತು ಕುಟುಂಬದವರ ಬಗ್ಗೆ ಅತ್ಯಂತ ಕೀಳಾಗಿ ಮಾತನಾಡುವ ಪ್ರವೃತ್ತಿ...

ಪ್ರಧಾನಿ ಮೋದಿ ತಾಯಿಯ ಬಗ್ಗೆ ನಕಲಿ ಟ್ವೀಟ್ ಸೃಷ್ಟಿಸಿದ ವಿಕೃತ ಮನಸ್ಸುಗಳ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರೈ ಕಠಿಣ ಕಾನೂನು ಕ್ರಮದ ಖಡಕ್ ಎಚ್ಚರಿಕೆ

ಪ್ರಧಾನಿ ಮೋದಿ ತಾಯಿಯ ಬಗ್ಗೆ ನಕಲಿ ಟ್ವೀಟ್ ಸೃಷ್ಟಿಸಿದ ವಿಕೃತ ಮನಸ್ಸುಗಳ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರೈ ಕಠಿಣ ಕಾನೂನು ಕ್ರಮದ ಖಡಕ್ ಎಚ್ಚರಿಕೆ

by Shwetha
April 2, 2026
0

ಬಹುಭಾಷಾ ನಟ ಹಾಗೂ ಸದಾ ಸಾಮಾಜಿಕ ವಿಷಯಗಳ ಬಗ್ಗೆ ನಿರ್ಭೀತವಾಗಿ ಧ್ವನಿ ಎತ್ತುವ ಪ್ರಕಾಶ್ ರೈ ಅವರು, ಇದೀಗ ತಮ್ಮ ಹೆಸರಿನಲ್ಲಿ ಹರಿದಾಡುತ್ತಿರುವ ನಕಲಿ ಟ್ವೀಟ್ ಒಂದರ...

ದಿನ ಭವಿಷ್ಯ (09-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (02-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
April 2, 2026
0

ದಿನ ಭವಿಷ್ಯ: 02-04-2026 ಮೇಷ ರಾಶಿ ಇಂದು ನಿಮಗೆ ಅತ್ಯಂತ ಶುಭದಾಯಕವಾದ ದಿನ. ಉದ್ಯೋಗದಲ್ಲಿ ನಿಮ್ಮ ಕಾರ್ಯವೈಖರಿಗೆ ಮೇಲಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ. ವ್ಯಾಪಾರದಲ್ಲಿ ಹೊಸ ಹೂಡಿಕೆಗಳಿಗೆ ಉತ್ತಮ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram