ಜಿಕಾ ವೈರಸ್ ಸೋಂಕು ಗಾಳಿಯ/ಸಂಪರ್ಕದ ಮೂಲಕ ಹರಡುವುದೇ? ಈ ಬಗ್ಗೆ ತಜ್ಞರ ಅಭಿಪ್ರಾಯವೇನು?
ಕೇರಳದಲ್ಲಿ 14 ಸೋಂಕಿನ ಪ್ರಕರಣಗಳು ವರದಿಯಾದ ನಂತರ ಜಿಕಾ ವೈರಸ್ ಸೋಂಕು ಗಾಳಿಯ/ಸಂಪರ್ಕದ ಮೂಲಕ ಹರಡುವುದೇ ಎಂಬ ಆತಂಕ ಜನರಲ್ಲಿ ಉಂಟಾಗಿದೆ.
ದೆಹಲಿಯ ಸೇಂಟ್ ಸ್ಟೀಫನ್ಸ್ ಆಸ್ಪತ್ರೆಯ ಮಾಜಿ ನಿರ್ದೇಶಕ ಮತ್ತು ಸಾರ್ವಜನಿಕ ಆರೋಗ್ಯ ತಜ್ಞ ಡಾ. ಮ್ಯಾಥ್ಯೂ ವರ್ಗೀಸ್, ಜಿಕಾ ವೈರಸ್ ಸಂಪರ್ಕ ಅಥವಾ ಗಾಳಿಯ ಮೂಲಕ ಹರಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಮತ್ತು ರಾಜ್ಯ ಆರೋಗ್ಯವು ವೈರಸ್ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದೆ.
ಇದು ಸೊಳ್ಳೆ ಕಡಿತದ ಮೂಲಕ ಹರಡುತ್ತದೆ. ಇದು ಪ್ರತ್ಯೇಕ ಸಾಂಕ್ರಾಮಿಕ ರೋಗ. ಈ ಸಮಯದಲ್ಲಿ ನಾವು ಅದರ ಬಗ್ಗೆ ಚಿಂತಿಸುತ್ತಿಲ್ಲ. ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಮತ್ತು ಕೇರಳದ ಆರೋಗ್ಯ ಇಲಾಖೆ ಈ ಬಗ್ಗೆ ಕಾಳಜಿ ವಹಿಸಬೇಕು. ಜಿಕಾ ಬರದಂತೆ ಸೊಳ್ಳೆಗಳು ಮತ್ತು ವೈರಸ್ಗಳನ್ನು ನಿಯಂತ್ರಿಸುವ ಮಾರ್ಗವನ್ನು ಕಂಡುಕೊಳ್ಳಬೇಕು. ನಾವು ಜನರಲ್ಲಿ ಭೀತಿ ಉಂಟುಮಾಡಬಾರದು ಎಂದು ಹೇಳಿದ್ದಾರೆ.
ಜಿಕಾ ವೈರಸ್ ಪ್ರಕರಣಗಳು ಕೇರಳದಲ್ಲಿ ವರದಿಯಾಗಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ಶುಕ್ರವಾರ ತಿಳಿಸಿದೆ. ಇದರ ತಡೆಗಟ್ಟುವಿಕೆಯ ಬಗ್ಗೆ ಮಾಹಿತಿ ನೀಡಿ, ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲಿ ಹೈ ಅಲರ್ಟ್ ಹೊರಡಿಸಲಾಗಿದೆ. ಗರ್ಭಿಣಿ ಮಹಿಳೆಗೆ ಸೊಳ್ಳೆಯಿಂದ ಹರಡುವ ಜಿಕಾ ವೈರಸ್ ಸೋಂಕು ತಗುಲಿರುವುದು ದೃಢ ಪಟ್ಟಿದೆ.
ದೇಶದಲ್ಲಿ ವೈರಸ್ಗಳ ತ್ವರಿತ ರೂಪಾಂತರದ ಕುರಿತು ಮಾತನಾಡಿದ ಅವರು, ಈ ವೈರಸ್ಗಳು ರೂಪಾಂತರಗೊಳ್ಳುವುದು ಸಾಮಾನ್ಯವಾಗಿದೆ. ವೈರಸ್ಗಳು ಬದಲಾಗುತ್ತಲೇ ಇರುತ್ತವೆ. ಇದು ಸಾಮಾನ್ಯ ಪ್ರಕ್ರಿಯೆ, ಅಸಹಜವಲ್ಲ. ಪರಿಸರವು ವಿವಿಧ ರೀತಿಯ ರೂಪಾಂತರಗಳಿಗೆ ಸಿದ್ಧವಾಗಿರಬೇಕು ಮತ್ತು ಮತ್ತು ಜಾಗರೂಕರಾಗಿರಬೇಕು ಎಂದು ಡಾ. ವರ್ಗೀಸ್ ಹೇಳಿದರು.
ಸಾಂಕ್ರಾಮಿಕದ ನಡುವೆ ಗಿರಿಧಾಮಗಳು ಮತ್ತು ಪ್ರವಾಸಿ ಸ್ಥಳಗಳಲ್ಲಿ ಜನರಿಗೆ ತೆರೆದ ಸ್ಥಳಕ್ಕೆ ಹೋಗಲು ಅವಕಾಶ ನೀಡಬೇಕು ಆದರೆ ಅವರು ಕೋವಿಡ್ -19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ವರ್ಗೀಸ್ ಹೇಳಿದ್ದಾರೆ. ಮಾಸ್ಕ್ ಧರಿಸುವುದು, ಸಾಮಾಜಿಕ ದೂರ ಮತ್ತು ಇತರ ಸುರಕ್ಷಿತ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಇದರಲ್ಲಿ ಸೇರಿದೆ ಎಂದು ಅವರು ಹೇಳಿದರು.
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಪಾನ್ ಕಾರ್ಡ್ ಅಸಲಿಯೋ ನಕಲಿಯೋ ತಿಳಿಯುವುದು ಹೇಗೆ – ಇಲ್ಲಿದೆ ವಿವರ#pancard https://t.co/DelPMnL3Cm
— Saaksha TV (@SaakshaTv) July 10, 2021
ಬದನೆ ಪಲಾವ್#Saakshatv #cookingrecipe #brinjalpulav https://t.co/B64w6eBD5Z
— Saaksha TV (@SaakshaTv) July 10, 2021
ಬಾಳೆಹಣ್ಣಿನ ಸಿಪ್ಪೆಯ ಆರೋಗ್ಯ ಪ್ರಯೋಜನಗಳು#Saakshatv #healthtips #bananapeels https://t.co/Y6hr5AJHAG
— Saaksha TV (@SaakshaTv) July 10, 2021
ಪುದೀನಾ ರೊಟ್ಟಿ#Saakshatv #cookingrecipe #pudinarotti https://t.co/mcXVkPZeUD
— Saaksha TV (@SaakshaTv) July 9, 2021
#Zikavirus #infection