ರುಂಡವಿಲ್ಲದ ನವಜಾತ ಶಿಶುವನ್ನು ಪತ್ತೆ ಕಿತ್ತು ತಿಂದ ನಾಯಿಗಳು Saaksha Tv
ಹಾಸನ: ನವಜಾತ ಶಿಶುವಿನ ದೇಹವನ್ನು ನಾಯಿಗಳು ಕಿತ್ತು ತಿಂದಿರುವ ದಾರುಣ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸಮೀಪ ರುಂಡವಿಲ್ಲದ ನವಜಾತ ಶಿಶುವೊಂದು ಪತ್ತೆಯಾಗಿದೆ. ಈ ಶಿಶುವನ್ನು ನಾಯಿಗಳು ತಿನ್ನುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು, ತಕ್ಷಣ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತಮಗುವಿನ ದೇಹವನ್ನು ವಶಕ್ಕೆ ಪಡೆದಿದ್ದಾರೆ.
ಯಾರೋ ಮಗುವನ್ನು ಹೆತ್ತು ಬಿಸಾಡಿ ಹೋಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇದರಿಂದ ನಾಯಿಗಳು ಕಿತ್ತು ತಿಂದು ಕೊಂದು ಹಾಕಿರಬಹುದು ಎನ್ನಲಾಗಿದೆ. ಈ ಬಗ್ಗೆ ಮಗು ಯಾರದ್ದು, ಇಲ್ಲಿ ಹೇಗೆ ಬಂದು ಬಿದ್ದಿದೆ ಎಂದು ಪೊಲೀಸರು ತನಿಕೆ ನಡಡೆಸುತ್ತಿದ್ದಾರೆ. ಇದರಲ್ಲಿ ಹೆತ್ತವರ ತಪ್ಪಿದ್ದರೆ ಅವರನ್ನು ನಿರ್ದಾಕ್ಷಿಣ್ಯವಾಗಿ ಶಿಕ್ಷಿಸಬೇಕು ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಹಾಸನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.