‘ನಾಯಿಗಳಲ್ಲಿ ಕಾಣಿಸುವ ಕೊರೊನಾ ವೈರಸ್ ಮನುಷ್ಯರಲ್ಲೂ ಪತ್ತೆ’
ವಿಶ್ವಾದ್ಯಂತ ಆತಂಕ ಸೃಷ್ಟಿ ಮಾಡಿರುವ ಕೊರೊನಾ ವೈರಸ್ ನ ಅನೇಕ ರೂಪಾಂತರಗಳು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಪತ್ತೆಯಾಗಿದ್ದು, ಆತಂಕ ಸೃಷ್ಟಿ ಮಾಡಿದೆ. ಈ ನಡುವೆ ಪ್ರಾಣಿಗಳಲ್ಲೂ ಸೋಂಕು ಕಂಡುಬರುತ್ತಿದೆ.. ಇದೀಗ ನಾಯಿಗಳಲ್ಲಿ ಕಂಡುಬರುವ ಕೊರೊನಾ ವೈರಸ್ (ಕೆನೈನ್ ಕೊರೊನಾ ವೈರಸ್) ಮನುಷ್ಯರಲ್ಲಿಯೂ ಪತ್ತೆಯಾಗಿರುವುದಾಗಿ ವಿಜ್ಞಾನಿಗಳು ತಿಳಿಸಿದ್ದಾರೆ.
ಹೌದು ಮಲೇಷ್ಯಾದ ಸರಾವಾಕ್ ನಲ್ಲಿ ನ್ಯುಮೋನಿಯಾದಿಂದ ಆಸ್ಪತ್ರೆಗೆ ದಾಖಲಾದ 8 ಮಂದಿಯಲ್ಲಿ ‘ಕೆನೈನ್ ಕೊರೊನಾ ವೈರಸ್’ ಪತ್ತೆಯಾಗಿದೆ.. ಆದರೆ, ಈ ಬಗ್ಗೆ ಹೆಚ್ಚಿನ ಆತಂಕಪಡುವ ಅಗತ್ಯವಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಕೋವಿಡ್–19 ಸೋಂಕಿಗೆ ಕಾರಣವಾಗುವ ಸಾರ್ಸ್–ಕೊವ್–2 ಹಾಗೂ ಕೆನೈನ್ ಕೊರೊನಾ ವೈರಸ್ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಕೊರೊನಾ ವೈರಸ್ ಅನ್ನು ಆಲ್ಫಾ, ಬೇಟಾ, ಗಾಮಾ ಹಾಗೂ ಡೆಲ್ಟಾ ಎಂದು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಸಾರ್ಸ್–ಕೊವ್–2 ಬೇಟಾ ಕೊರೊನಾವೈರಸ್ ಗುಂಪಿಗೆ ಸೇರಿದೆ. ಕೆನೈನ್ ಕೊರೊನಾ ಸಂಪೂರ್ಣ ಭಿನ್ನವಾಗಿದ್ದು, ಆಲ್ಫಾ ಕೊರೊನಾ ವೈರಸ್ ಗುಂಪಿಗೆ ಸೇರಿದೆ.
ನ್ಯುಮೋನಿಯಾದಿಂದ ಮಲೇಷ್ಯಾದ ಆಸ್ಪತ್ರೆಗಳಲ್ಲಿ ದಾಖಲಾಗಿರುವ 192 ಮಂದಿಯ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಈ ಪೈಕಿ 8 ಮಂದಿಯಲ್ಲಿ ‘ಕೆನೈನ್ ಕೊರೊನಾ’ ಪತ್ತೆಯಾಗಿದೆ. ಈ ವೈರಸ್ ನ್ಯುಮೋನಿಯಾಕ್ಕೆ ಕಾರಣವಾಗುತ್ತವೆಯೇ ಮತ್ತು ಜನರಿಂದ ಜನರಿಗೆ ಹರಡುತ್ತವೆಯೇ ಎಂಬ ಬಗ್ಗೆ ಈಗಲೇ ಏನೂ ಹೇಳಲಾಗದು. ಯಾಕೆಂದರೆ ಈ ವೈರಸ್ ಪತ್ತೆಯಾದ ಸೋಂಕಿತರಲ್ಲಿ ನ್ಯುಮೋನಿಯಾಕ್ಕೆ ಕಾರಣವಾಗುವ ಬೇರೆ ವೈರಸ್ ಸಹ ಪತ್ತೆಯಾಗಿದ್ದವು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.