ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ನಾಯಿಗಳ ದರ್ಬಾರು Chitradurga
ಚಿತ್ರದುರ್ಗ : ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ನಾಯಿಗಳ ದರ್ಬಾರು ನಡೆಯುತ್ತಿದೆ.
ಇಲ್ಲಿನ ವಾರ್ಡ್ಗಳಲ್ಲಿ ನಾಯಿಗಳು ರಾಜಾರೋಷವಾಗಿ ಓಡಾಡುತ್ತಿವೆ.
ಜಿಲ್ಲಾಸ್ಪತ್ರೆಯಲ್ಲಿ ಈಗಾಗಲೇ ಸಾಕಷ್ಟು ತೊಂದರೆಗಳಿವೆ.
ಕೊರೊನಾ ಸೋಂಕಿತರಿಗೆ ಸೂಕ್ತ ಬೆಡ್, ಆಕ್ಸಿಜನ್ ವ್ಯವಸ್ಥೆ ಇಲ್ಲ. ಜೊತೆಗೆ ನೀರಿನ ವ್ಯವಸ್ಥೆ ಕೂಡ ಇಲ್ಲದೇ ರೋಗಿಗಳು ಪರದಾಡುತ್ತಿದ್ದಾರೆ.
ಇದೀಗ ನಾತಿಗಳ ಕಾಟ ಶುರುವಾಗಿದ್ದು, ಆಸ್ಪತ್ರೆಯಲ್ಲಿ ಸಿಬ್ಬಂದಿಗಳಿದ್ದಾರೋ ಇಲ್ಲವೋ ಎಂಬ ಅನುಮಾನ ಮೂಡಲು ಶುರುವಾಗಿದೆ.
ಹಿಂಡು ಹಿಂಡಾಗಿ ಆಸ್ಪತ್ರೆಗೆ ನುಗ್ಗುವ ನಾಯಿಗಳು ವಾರ್ಡ್ ಗಳಿಗೆ ಬಂದು ಭಯವಿಲ್ಲದೆ ಓಡಾಡುತ್ತವೆ.
ಸೋಂಕಿತರ ವಾರ್ಡ್ ಗಳು ನವಜಾತ ಶಿಶುಗಳ ವಾರ್ಡ್ ಹೀಗೆ ಎಲ್ಲಡೆ ಸುತ್ತಾಡುತ್ತಿವೆ. ಇದರಿಂದ ಕೆಲ ರೋಗಿಗಳು ಭಯ ಭೀತಗೊಂಡಿದ್ದಾರೆ.