ನಾಯಿಗೆ ವೆಜ್ ಊಟ ನೀಡಿದರೆ ಶಿಕ್ಷೆ
ಇಂಗ್ಲೆಂಡ್ ನಲ್ಲಿ ಸಾಕು ನಾಯಿಗಳನ್ನು ಸಸ್ಯಹಾರಿಗಳನ್ನಾಗಿ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ರೀತಿಯ ತಪ್ಪು ಮಾಡಿದ್ರೆ ನಾಯಿಯ ಮಾಲೀಕರಿಗೆ ದಂಡ ವಿಧಿಸುವುದು ಅಥವಾ ಜೈಲು ಶಿಕ್ಷೆ ಆಗುವ ಸಾಧ್ಯತೆಗಳಿವೆ.
ಹೌದು..! ಇಂಗ್ಲೆಂಡ್ ನಲ್ಲಿ ಹೆಚ್ಚಿನ ಸಾಕು ಪ್ರಾಣಿ ಮಾಲೀಕರು ತಮ್ಮ ಸಾಕು ಪ್ರಾಣಿಗಳನ್ನು ಸಸ್ಯಹಾರಿಗಳನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅವುಗಳಿಗೆ ಮಾಂಸ ರಹಿತ ಆಹಾರ ನೀಡುತ್ತಿದ್ದಾರೆ. ಇದು ಸಾಕು ಪ್ರಾಣಿ ಇಚ್ಛೆಗೆ ವಿರುದ್ಧದವಾದ್ದದ್ದು. ಬಲವಂತವಾಗಿ ಸಾಕು ಪ್ರಾಣಿಗಳ ಇಚ್ಚೆಗೆ ವಿರುದ್ಧವಾಗಿ ಅವುಗಳ ಆಹಾರ ಪದ್ದತಿಗಳನ್ನು ಬದಲಾಯಿಸಲಾಗುತ್ತಿದೆ ಎಂದು ಕೆಲವೊಂದು ಅಧ್ಯಯನಗಳು ಬಹಿರಂಗ ಪಡಿಸಿವೆ.
ಹೀಗಾಗಿ ಪ್ರಾಣಿ ಕ್ಷೇಮ ಕಾಯ್ದೆಯನ್ನು ಜಾರಿಗೆ ತರಲಾಗಿದ್ದು, ಅದರ ಅನ್ವಯ ಪ್ರಾಣಿಗಳಿಗೆ ಪೋಷಕಾಂಶಗಳನ್ನು ಪೂರೈಸುವ ಸೂಕ್ತವಾದ ಆಹಾರವನ್ನು ನೀಡುವುದು ಮಾಲೀಕರ ಜವಾಬ್ದಾರಿಯಾಗಿದೆ. ಅದನ್ನು ಬಿಟ್ಟು ಸಾಕು ಪ್ರಾಣಿಗಳನ್ನು ಸಸ್ಯಹಾರಿಗಳನ್ನಾಗಿಸುವುದು ಅಥವಾ ಅವುಗಳನ್ನು ಸಸ್ಯಹಾರಿ ಪದ್ಧತಿಯಲ್ಲಿರುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ವರದಿಯಾಗಿದೆ.
ಇನ್ನು ಈ ನಿಯಮದ ಬಗ್ಗೆ ಅಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.