Dolly Dhananjay : ಪುಷ್ಪ 2 ಶೂಟಿಂಗ್ ಸೂಚನೆ ಸಿಕ್ಕಿಲ್ಲ..?? ಡಾಲಿ ಹೇಳಿದ್ದೇನು..??
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಡಾಲಿ ಧನಂಜಯ್ ಕನ್ನಡ , ತೆಲುಗು ಇಂಡಸ್ಟ್ರಿಯಲ್ಲೂ ಮಿಂಚುತ್ತಿದ್ದಾರೆ.. 2021 ಡಿಸೆಂಬರ್ ನಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಗಿದ್ದ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾದಲ್ಲೂ ಡಾಲಿ ಬಣ್ಣ ಹಚ್ಚಿದ್ದರು.. ಖಡಕ್ ವಿಲ್ಲನ್ ಜಾಲಿ ರೆಡ್ಡಿಯಾಗಿ ಮಿಂಚಿದ್ದರು,..
ಪುಷ್ಪ 2 ಸಿನಿಮಾ ಸಹ ಬರಲಿದೆ.. ಈ ಸಿನಿಮಾದಲ್ಲಿ ಕಥೆ ಮುಂದುವರೆಯಲಿದ್ದು , ಡಾಲಿ ಭಾಗ 2 ರಲ್ಲೂ ಕಾಣಿಸಿಕೊಳ್ತಿದ್ದಾರೆ.. ಅಂದ್ಹಾಗೆ ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇದೆ.. ಅಪ್ ಡೇಟ್ಸ್ ಗಾಗಿಯೂ ಕಾಯುತ್ತಿದ್ದಾರೆ. ಆದ್ರೆ ಇನ್ನೂ ಸಿನಿಮಾದ ಶೂಟಿಂಗ್ ಶುರುವಾಗಿಲ್ಲವಾ..?? ಎಂಬ ಅನುಮಾನ ಈಗ ಹುಟ್ಟಿದೆ.,. ಇಂತಹದೊಂದು ಡೌಟ್ ಹುಟ್ಟೋದಕ್ಕೆ ಕಾರಣ ಡಾಲಿ ಹೇಳಿಕೆ..
ಸದ್ಯ ಡಾಲಿ ಹಲವು ಕನ್ನಡ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇದರ ಜತೆ ನಿರ್ಮಾಣದಲ್ಲೂ ಅವರು ತೊಡಗಿಕೊಂಡಿದ್ದಾರೆ. ಪುಷ್ಪ 2 ನಲ್ಲಿಯೂ ಅವರ ಪಾತ್ರ ಮುಂದುವರೆಯಲಿದೆ.. ಈ ವೇಳೆ ಚಿತ್ರದ ಶೂಟಿಂಗ್ ಬಗ್ಗೆ ಯಾವುದೇ ಅಪ್ಡೇಟ್ ಸಿಕ್ಕಿಲ್ಲ. ಪುಷ್ಪ 2 ಚಿತ್ರತಂಡದ ಜತೆಗೆ ಇನ್ನಷ್ಟೇ ಮೀಟಿಂಗ್ ಆಗಬೇಕಿದೆ ಎಂದಿದ್ದಾರೆ.. ಈ ಮೂಲಕ ಸದ್ಯಕ್ಕೆ ಶೂಟಿಂಗ್ ಆರಂಭವಾಗುವ ಸೂಚನೆ ಇಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.








