dolly dhananjay
ಮತ್ತೊಂದು ತೆಲುಗು ಸಿನಿಮಾದಲ್ಲಿ ವಿಲ್ಲನ್ ಆಗಲಿದ್ದಾರೆ ಡಾಲಿ..!
ಸದ್ಯ ಸ್ಯಾಂಡಲ್ ವುಡ್ ನಟ ಡಾಲಿ ಧನಂಜಯ್ ಸಾಲು ಸಾಲು ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಕನ್ನಡ ಅಷ್ಟೇ ಅಲ್ದೇ ತೆಲುಗಿನಲ್ಲೂ ನಟಿಸುತ್ತಿರುವ ಡಾಲಿಗೆ ಮತ್ತಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಲೇ ಇವೆ. ಈಗಾಗಲೇ ತೆಲುಗಿನ ಬಹುನಿರೀಕ್ಷೆಯ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ಪುಷ್ಪಾ ಹೊರತಾಗಿ ಮತ್ತೊಂದು ತೆಲುಗೂ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಇದೀಗ ಡಾಲಿಗೆ ಇನ್ನೊಂದು ತೆಲುಗು ಸಿನಿಮಾದಲ್ಲಿ ಖಳನಾಯಕನಾಗುವ ಅವಕಾಶ ಒಲಿದುಬಂದಿದೆ.
‘ಡಿಂಪಲ್ ಕಪಲ್’ ದಿಗಂತ್-ಐಂದ್ರಿತಾಗೆ ಶುಭಕೋರಿದ ಕಿಚ್ಚ : ಕಾರಣ ಏನ್ ಗೊತ್ತಾ..!
ಅಂದ್ಹಾಗೆ ತೆಲುಗು ಖ್ಯಾತ ನಿರ್ಮಾಪಕರೊಬ್ಬರ ಪುತ್ರ ನಾಯಕನಾಗಿ ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ಧನಂಜಯ್ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಡಾಲಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಕೇವಲ ವಿಲ್ ಆಗಿ ಅಷ್ಟೇ ಅಲ್ದೇ, ಧನಂಜಯ್ ಅವರು ನಾಯಕನಟನಾಗಿರುವ ಅನೇಕ ಸಿನಿಮಾಗಳು ಸೆಟ್ಟೇರುವುದು, ರಿಲೀಸ್ ಆಗುವುದೂ ಬಾಕಿಯಿದೆ. ಸದ್ಯ ರತ್ನನ್ ಪರ್ಪಂಚದಲ್ಲಿ ನಾಯಕನಾಗಿ ಕಾಣಿಸಿಕೊಳ್ತಾಯಿರುವ ಡಾಲಿ ಆ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.
ಮತ್ತೊಂದೆಡೆ ನಿರ್ಮಾಪಕರಾಗಿಯೂ ಬಡ್ತಿ ಹೊಂದಿರುವ ಡಾಲಿ ಈಗಾಗಲೇ ಬಡವ ರಾಸ್ಕಲ್ ಎಂಬ ಸಿನಿಮಾ ನಿರ್ಮಾಣ ಮಾಡಿದ್ದು, ಚಿತ್ರೀಕರಣವೂ ಮುಗಿದಿದೆ. ಸಿನಿಮಾದಲ್ಲಿ ಡಾಲಿ ಹೀರೋ ಆಗಿ ಕಾಣಿಸಿಕೊಂಡಿದ್ದು, ಚಿತ್ರ ರಿಲೀಸ್ ಗೆ ಡಾಲಿ ಅಭಿಮಾನಿಗಳು ಕಾಯುತ್ತಿದ್ದಾರೆ.
dolly dhananjay
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








