‘ಬಡವ ರಾಸ್ಕಲ್’ ನನ್ನು ಕೊಂಡಾಡಿದ ಪ್ರಶಾಂತ್ ನೀಲ್..!
ದಕ್ಷಿಣ ಭಾರತ ಸಿನಿಮಾರಂಗದ ಪವರ್ ಏನು ಅನ್ನೋದನ್ನ ಬಾಲಿವುಡ್ ಗೆ ತೋರಿಸಿಕೊಟ್ಟ ನಿರ್ದೇಶಕರ ಪೈಕಿ ಒಬ್ಬರು ರಾಜಮೌಳಿ ಆದ್ರೆ ಮತ್ತೊಬ್ಬರು ನಮ್ಮ ಕನ್ನಡದ ಕಿಂಗ್ ಮೇಕರ್ ಪ್ರಶಾಂತ್ ನೀಲ್ ಅವರು.. ಪ್ರಶಾಂತ್ ನೀಲ್ ಅವರ ಕೆಜಿಎಫ್ ಸಿನಿಮಾ ಹೊಸ ಸೆನ್ಷೇಷನ್ ಹುಟ್ಟುಹಾಕಿದೆ.. ಪಾರ್ಟ್ 2 ಗಾಗಿ ಇಡೀ ಭಾರತೀಯ ಸಿನಿಮಾರಂಗವೇ ಕಾಯ್ತಿದೆ.. ಏಪ್ರಿಲ್ 14 ಕ್ಕೆ ಸಿನಿಮಾ ರಿಲೀಸ್ ಆಗಬೇಕಿದೆ.. ಪ್ರಸ್ತುತ ಪ್ರಶಾಂತ್ ನೀಲ್ ಅವರು ತೆಲುಗು ಸಿನಿಮಾರಂಗದಲ್ಲಿ ಬ್ಯುಜಿಯಾಗಿದ್ದಾರೆ..
ಪ್ರಭಾಸ್ ಗಾಗಿ ಸಲಾರ್ ಸಿನಿಮಾ ಮಾಡ್ತಿದ್ದಾರೆ.. ನಂತರ ಜ್ಯೂ NTR ಜೊತೆಗೂ ಸಿನಿಮಾ ಮಾಡಲಿದ್ದಾರೆ.. ಹೀಗೆ ತೆಲುಗಿನಲ್ಲೇ ಸದ್ಯಕ್ಕಂತೂ ಸೆಟಲ್ ಆಗಿರೋ ಪ್ರಶಾಂತ್ ನೀಲ್ ಈಗ ನಮ್ಮ ಸ್ಯಾಂಡಲ್ ವುಡ್ ನ ಪ್ರಾಮಿಸಿಂಗ್ ನಟ ಡಾಲಿ ಧನಂಜಯ್ ಅವರ ನಿರ್ಮಾಣದ ಮೊದಲ ಸಿನಿಮಾ “ ಬಡವ ರಾಸ್ಕಲ್ “ ನನ್ನ ಕೊಂಡಾಡಿದ್ದಾರೆ..
ಹೌದು ಡಾಲಿ ಧನಂಜಯ್ ನಟನೆಯ ಹೊಸ ಸಿನಿಮಾ ‘ಬಡವ ರಾಸ್ಕಲ್’ ಅನ್ನು ಪ್ರಶಾಂತ್ ನೀಲ್ ವೀಕ್ಷಿಸಿದ್ದು, ಸಿನಿಮಾದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಅಲ್ಲದೇ ”2021 ಎಲ್ಲರಿಗೂ ರೋಲರ್ ಕೋಸ್ಟರ್ ರೈಡ್ ರೀತಿ ಇತ್ತು. ಈ ವರ್ಷದಲ್ಲಿ ಏರು-ಇಳಿತ ಎಲ್ಲವೂ ಇತ್ತು. ಆ ವರ್ಷ ‘ಬಡವ ರಾಸ್ಕಲ್’ ಅಂಥ ಒಳ್ಳೆಯ ಸಿನಿಮಾದೊಂದಿಗೆ ಕೊನೆಯಾಗಿದ್ದು ಖುಷಿಯ ವಿಷಯ. ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಪ್ರದರ್ಶನ ಕಾಣುತ್ತಿರುವುದಕ್ಕೆ ಪ್ರತಿಭಾನ್ವಿತ ಧನಂಜಯ್‌ಗೆ ಅಭಿನಂದನೆಗಳು, ಜೊತೆಗೆ ನಟಿ ಅಮೃತಾ ಐಯ್ಯಂಗಾರ್, ನಿರ್ದೇಶಕ ಶಂಕರ್ ಮತ್ತು ಇಡೀಯ ಚಿತ್ರತಂಡಕ್ಕೆ ಶುಭಾಶಯಗಳು” ಎಂದು ಪ್ರಶಾಂತ್ ನೀಲ್ ಟ್ವೀಟ್ ಮಾಡಿದ್ದಾರೆ.

ಧನಂಜಯ್ ನಿರ್ಮಾಣ ಮಾಡಿ, ಶಂಕರ್ ಗುರು ನಿರ್ದೇಶನ ಮಾಡಿರುವ ‘ಬಡವ ರಾಸ್ಕಲ್’ ಸಿನಿಮಾವನ್ನು ಶಿವರಾಜ್ ಕುಮಾರ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಈಗಾಗಲೇ ನೋಡಿ ಮೆಚ್ಚಿಕೊಂಡಿದ್ದಾರೆ. ಇದೀಗ ಪ್ರಶಾಂತ್ ನೀಲ್ ಸಹ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ..
ಡಿಸೆಂಬರ್ 24ರಂದು ಬಿಡುಗಡೆ ಆದ ಬಡವ ರಾಸ್ಕಲ್ ಅದೇ ದಿನವೇ ಕರ್ನಾಟಕದಲ್ಲಿ ರಿಲೀಸ್ ಆದ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಬಾಲಿವುಡ್ ಸಿನಿಮಾದ ಮುಂದೆ ಅಬ್ಬರಿಸಿ ಬೊಬ್ಬಿರಿದಿದೆ.. ಅದೇ ದಿನ ನಿಖಿಲ್ ಕುಮಾರಸ್ವಾಮಿ ನಟನೆಯ ರೈಡರ್ ಸಿನಿಮಾ ಸಹ ಬಿಡುಗಡೆ ಆಗಿತ್ತು.ಅದು ಕೂಡ ಯಶಸ್ಸು ಕಂಡಿದೆ.. ಆದ್ರೆ ಬಡವ ರಾಸ್ಕಲ್ ವಿಶೇಷತೆ ಅಂದ್ರೆ ಈ ಸಿನಿಮಾ ಡಾಲಿ ನಿರ್ಮಾಣದ ಮೊದಲ ಸಿನಿಮಾ ಹಾಗೂ ಅವರದ್ದೇ ನಟನೆ.. ತಮ್ಮದೇ ವಿಭಿನ್ನ ಮ್ಯಾನರಿಸಮ್ ನಿಂದ ಡಾಲಿ ಸಾಕಷ್ಟು ಅಭಿಮಾನಿಗಳನ್ನ ಹೊಂದಿದ್ದಾರೆ..








