Trump
ಅಮೆರಿಕ: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಜೊ ಬಿಡೆನ್ ವಿರುದ್ಧ ಹೀನಾಯವಾಗಿ ಸೋತ ಟ್ರಂಪ್ ಅವರು ತಮ್ಮ ಸೋಲನ್ನ ಈವರೆಗೂ ಒಪ್ಪಿಕೊಂಡಿಲ್ಲ. ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಹೊರಬಿದ್ದು ಡೆಮಾಕ್ರಟಿಕ್ ಅಭ್ಯರ್ಥಿ ಜೊ ಬೈಡನ್ ಶ್ವೇತಭವನದ ಗದ್ದುಗೆ ಏರಲು ಸಿದ್ಧವಾಗಿದ್ದಾರೆ. ಇಷ್ಟಾದ್ರು ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಾತ್ರ ತಮ್ಮ ಹಠ ಮುಂದುವರಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ನಾವು ಗೆದ್ದುಬರಲಿದ್ದು ಜೊ ಬಿಡನ್ ಅವರು ಬದಲಾವಣೆ ಮಾಡಲು ಹೊರಟಿರುವ ಸಿದ್ಧತೆಗಳಿಗೆ ತಡೆಯೊಡ್ಡುವುದಾಗಿ ಹೇಳಿದ್ದಾರೆ. ಟ್ವೀಟ್ ಮಾಡಿರುವ ಟ್ರಂಪ್ ಅವರು ‘ನಾವು ಖಂಡಿತಾ ಗೆಲ್ಲುತ್ತೇವೆ, ಮುಂದಿನ ವಾರ ಫಲಿತಾಂಶ ಹೊರಬೀಳಲು ಆರಂಭವಾಗುತ್ತದೆ. ಅಮೆರಿಕವನ್ನು ಮತ್ತೆ ದೊಡ್ಡ ರಾಷ್ಟ್ರವನ್ನಾಗಿ ಮಾಡೋಣ’ ಎಂದು ಹೇಳಿಕೊಂಡಿದ್ದಾರೆ. ಇನ್ನೂ ಈಗಾಗಲೇ ಟ್ರಂಪ್ ಅವರು ಬಿಡೆನ್ ರ ಗೆಲುವು ಪ್ರಶ್ನಿಸಿ, ಮತ ಎಣಿಕೆ ವಿರುದ್ಧ ಕೋರ್ಟ್ ಮೊರೆ ಹೋಗಿದ್ದಾರೆ. ಹೀಗಾಗಿ ನ್ಯಾಯಾಲಯದಲ್ಲಿ ತಮಗೆ ಜಯಸಿಗಲಿದೆ ಎಂಬ ಲೆಕ್ಕಾಚಾರ ಟ್ರಂಪ್ ಅವರದ್ದು.
ಇನ್ನೂ ವಿಶ್ವದ ದೊಡ್ಡಣ ಅಮೆರಿಕಾದ ಅಧ್ಯಕ್ಷರಾಗಿದ್ದ ಟ್ರಂಪ್ ಅವರ ಈ ರೀತಿಯಾದ ವರ್ತನೆಗಳು ನಗೆಪಾಟಲಿಗೀಡಾಗುತ್ತಿದೆ ಎನ್ನಬಹುದು. ಅಲ್ಲದೇ ಟ್ರಂಪ್ ಅವರು ಟ್ರೋಲಿಗರ ಆಹಾರವಾಗಿಬಿಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಟ್ರಂಪ್ ಅವರ ಟ್ರೋಲ್ ಟ್ರೆಂಡಿಂಗ್ ಆಗಿಬಿಟ್ಟಿದೆ. ನೂತನ ಅಧ್ಯಕ್ಷರ ಘೋಷಣೆಯಾದಾಗ ನಿರ್ಗಮಿತ ಅಧ್ಯಕ್ಷರು ಅವರನ್ನು ಶ್ವೇತಭವನಕ್ಕೆ ಆಹ್ವಾನಿಸಿ ವ್ಯವಸ್ಥೆ ಬಗ್ಗೆ ತೋರಿಸಿಕೊಡಬೇಕು, ಔಪಚಾರಿಕವಾಗಿ ಶುಭಾಶಯ ತಿಳಿಸಬೇಕು. ಸಹಹಜವಾಗಿ ಇದು ನಿರ್ಗಮಿತ ಅಧ್ಯಕ್ಷರ ಕರ್ತವ್ಯ. ಆದ್ರೆ ಟ್ರಂಪ್ ಅವರು ಮಾತ್ರ ಅಧಿಕಾರದಿಂದ ಕೆಳಗಿಳಿಲು ಇಷ್ಟವೇ ಇಲ್ಲದೆ, ನಾನೇ ಗೆದ್ದಿದ್ದೀನಿ ಎಂಬ ಹಟವನ್ನ ಹಿಡಿದು ಅಧಿಕಾರಿಕ್ಕೆ ಪಟ್ಟು ಬಿದ್ದು ಕೂತಿದ್ದಾರೆ. ಅದೂ ಅಲ್ಲದೇ ರೂಪಾಂತರ ನಿಧಿ ಪ್ಯಾಕೇಜ್ ಗಳನ್ನು ಜೋ ಬಿಡೆನ್ ಅವರಿಗೆ ನೀಡದಂತೆ ಟ್ರಂಪ್ ಹೇಳಿದ್ದಾರೆ ಎಂಬುದು ತಿಳಿದುಬಂದಿದೆ. ಇನ್ನೂ ಜೊ ಬೈಡನ್ ಶ್ವೇತಭವನದ ಅಧಿಕಾರದ ಚುಕ್ಕಾಣಿ ಹಿಡಿಯುವುದಕ್ಕೆ 71 ದಿನಗಳು ಬಾಕಿಯಿದೆ. ಜನವರಿ 20ರಂದು ಬಿಡೆನ್ ಅವರು ನೂತನ ಅಮೆರಿಕಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
Trump
ರಾಜ್ಯದಲ್ಲಿ ‘ಉಪಸಮರ’, ಗೆದ್ದು ಬೀಗಿದ ಬಿಜೆಪಿ, ಕನ್ನಡದಲ್ಲೇ ಮೋದಿ, ಅಮಿತ್ ಶಾ ಟ್ವೀಟ್..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel