ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಸರ್ಕಾರ ಸಂಡೇ ಲಾಕ್ ಡೌನ್ ನಿಯಮವನ್ನು ಜಾರಿಗೆ ತಂದಿದೆ. ಅದರಂತೆ ನಾಳೆ ರಾಜ್ಯಕ್ಕೆ ರಾಜ್ಯವೇ ಸ್ಥಬ್ಧವಾಗಲಿದ್ದು, ಬೆಂಗಳೂರಿನಲ್ಲಿ ಇಂದು ರಾತ್ರಿ 8 ರಿಂದಲೇ ಕರ್ಫ್ಯೂ ಜಾರಿಯಲ್ಲಿರಲಿದೆ. ಈ ಹಿನ್ನೆಲೆ ಜನತೆ ಸ್ವಯಂ ಪ್ರೇರಿತವಾಗಿ ಲಾಕ್ ಡೌನ್ ಗೆ ಬೆಂಬಲ ಕೊಡುವಂತೆ ಭಾಸ್ಕರ್ ರಾವ್ ಅವರು ಕೇಳಿಕೊಂಡಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ಬೆಂಗಳೂರು ಸಿಟಿಯಲ್ಲಿ ಲಾಕ್ ಡೌನ್ ಇಂದು ರಾತ್ರಿ 8ಗಂಟೆಗೆ ಪ್ರಾರಂಭವಾಗಿ ಸೋಮವಾರ ಬೆಳಿಗ್ಗೆ 5ಗಂಟೆಗೆ ಮುಕ್ತಾಯಗೊಳ್ಳುತ್ತದೆ. ಗೌರವಾನ್ವಿತ ನಾಗರಿಕರೇ, ಮನೆಯಲ್ಲಿಯೇ ಇರಿ ಮತ್ತು ಎಲ್ಲರ ಹಿತದೃಷ್ಟಿಯಿಂದ ಲಾಕ್ ಡೌನ್ ಮಾಡಲಾಗುತ್ತಿರುವುದರಿಂದ ವಿನಾಯಿತಿಗಳನ್ನು ಕೇಳಬೇಡಿ. ನೀವು ಒಂದು ದಿನ ನಿಮ್ಮ ಕೆಲಸ ಮುಂದೂಡಿದರೆ ಯಾವುದೇ ನಷ್ಟವಾಗುವುದಿಲ್ಲ. ದಯವಿಟ್ಟು ನೀವೇ ಸ್ವಯಂ ಪ್ರೇರಿತವಾಗಿ ಸಹಕಾರ ನೀಡಿ. ಹ್ಯಾಪಿ ಸಂಡೇ ಎಂದು ಹೇಳಿದ್ದಾರೆ.