ಕೊರೊನಾ ವಿರುದ್ದ ಹೋರಾಟ ನಡೆಸಲು ದೇಶವೇ ಸಜ್ಜಾಗಿದೆ. ನಾಳೆ ದೇಶದಾದ್ಯಂತ ಜನತಾ ಕರ್ಫ್ಯೂ ಜಾರಿ ಮಾಡಲಾಗಿದೆ. ಮಾರ್ಚ್ 19 ರಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾರ್ಚ್ 22 ರಂದು ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಗೆ ವರೆಗೂ ಮನೆಯಿಂದ ಹೊರ ಬರಬೇಡಿ ಎಂದು ಮನವಿ ಮಾಡಿದ್ದರು. ಹಾಗಾಗಿ ನಾಳೆ ಜನತಾ ಕರ್ಫ್ಯೂ ನಡೆಸಲು ದೇಶದ ಜನರು ಸಿದ್ದರಾಗಿದ್ದರು. ಇದರ ಬೆನ್ನೆಲ್ಲೇ ಮೋದಿ ಟ್ವೀಟ್ ಮಾಡುವ ಮೂಲಕ ಜನತಾ ಕರ್ಫ್ಯೂ ಅನ್ನು ನೆನಪಿಸಿದ್ದಾರೆ. “ಕೊರೊನಾ ಬಗ್ಗೆ ಭಯ ಬೇಡ, ಆದರೆ ಮುನ್ನೆಚ್ಚರಿಕೆ ಇರಲಿ”. ಅನಗತ್ಯ ಪ್ರಯಾಣ ನಿಮಗೂ ಒಳ್ಳೆಯದಲ್ಲ, ಇತರರಿಗೂ ಒಳ್ಳೆಯದಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವೀಟ್ ನಲ್ಲಿ ಹೇಳಿದ್ದಾರೆ.









