ಒಂದೆಡೆ ಇಡೀ ವಿಶ್ವವೇ ಕೊರೊನಾದಿಂದ ಬಚಾವಾದ್ರೆ ಸಾಕಪ್ಪಾ ಸಾಕು ಅಂತ ಮನೆಯಲ್ಲೇ ಆದಷ್ಟು ಕಾಲ ಕಳೆಯುತ್ತಿದ್ದಾರೆ. ಆದ್ರೆ ಇನ್ನೂ ಕೆಲವರು ಇದ್ಯಾವುದಕ್ಕೂ ಕೇರ್ ಮಾಡ್ದೇ ಪಾರ್ಟಿ , ಬೀಚ್ ಅಂತ ಎಂಜಾಯ್ ಮಾಡ್ತಿದ್ದಾರೆ. ಬಾಲಿವುಡ್ ನಟಿ ಸನ್ನಿ ಲಿಯೋನ್ ಸಹ ಇದೇ ಸಾಲಿಗೆ ಸೇರಿಕೊಂಡಿದ್ದಾರೆ.
ಹೌದು ಭಾರತದಲ್ಲಿ ಕೊರೊನಾ ಹಾವಳಿ ಹೆಚ್ಚಾಗ್ತಿದ್ದಂತೆ ರಾತ್ರೋರಾತ್ರಿ ಸನ್ನಿ ಲಿಯೋನ್ ದೇಶ ಬಿಟ್ಟು ಅಮೆರಿಕಾಗೆ ಹೋಗಿ ಸೆಟಲ್ ಆಗಿದ್ದಾರೆ. ಸದ್ಯ ಕ್ಯಾಲಿಫೋರ್ನಿಯಾದಲ್ಲಿನ ತಮ್ಮ ನಿವಾಸದಲ್ಲೇ ನೆಲೆಸಿರುವ ಸನ್ನಿ ಪಾರ್ಟಿ ಬೀಚ್ ಅಂತ ಪ್ಯಾಮಿಲಿ ಹಾಗೂ ಫ್ರೆಂಡ್ಸ್ ಜೊತೆ ಸಿಕ್ಕಾಪಟ್ಟೆ ಎಂಜಾಯ್ ಮಾಡ್ತಿದ್ದಾರೆ.
ಪತಿ ಮತ್ತು ತಮ್ಮ ಮಕ್ಕಳ ಜೊತೆ ಬೀಚ್ನಲ್ಲಿ ಮಸ್ತಿ ಮಾಡ್ತಿರುವ ಸನ್ನಿ ಕೆಲ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.