ಮನ್ ಕೀ ಬಾತ್ : ಹಿಂಜರಿಕೆ ಬೇಡ, ಎಲ್ಲರೂ ಲಸಿಕೆ ಪಡೆಯಿರಿ – ಮೋದಿ
ದೇಶದಲ್ಲಿ ಕೋವಿಡ್ 2ನೇ ಹಾವಳಿಯಿಂದಾಗಿ ಜನ ತತ್ತರಿಸಿಹೋಗಿದ್ದಾರೆ.. ಇನ್ನೂ 3ನೇ ಅಲೆಯ ಆತಂಕದ ನಡುವೆ ಸದ್ಯಕ್ಕೆ ಭರವಸೆಯ ಬೆಳಕಂತೆ ಕಾಣಿಸುತ್ತಿರುವ ದಾರಿ , ಲಸಿಕೆ ಅಭಿಯಾನಕ್ಕೆ ಉತ್ತೇಜನ ನೀಡುವುದು.. ಹೆಚ್ಚು ಹೆಚ್ಚು ಜನರು ಲಸಿಕೆ ಪಡೆದುಕೊಳ್ಳುವುದು.. ಈ ಮೂಲಕ ಮಹಾಮಾರಿಯ ವಿರುದ್ಧ ಹೋರಾಟ ಮಾಡಬಹುದು..
ಒಂದೆಡೆ ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲೂ ಕೋವಿಡ್ ಲಸಿಕೆ ಹಾಕಲಾಗ್ತಿದೆ.. ಮತ್ತೊಂದೆಡೆ ಅನೇಕರು ಲಸಿಕೆ ಪಡೆಯಲು ಹಿಂದೇಟು ಹಾಕ್ತಿದ್ದಾರೆ.. ನಾನಾ ಕಾರಣಗಳು , ಅಡ್ಡಪರಿಣಾಮದ ಭಯದಿಂದ ಲಸಿಕೆ ಹಾಕಿಸುಕೊಳ್ಳಲು ಸಾಕಷ್ಟು ಜನರು ಉತ್ಸಾಹ ತೋರುತ್ತಿಲ್ಲ.. ಹೀಗಾಗಿ ಸ್ಥಳೀಯ ಆಡಳಿತಗಳು , ಕೆಲವು ರಾಜ್ಯ ಸರ್ಕಾರಗಳು ಲಸಿಕೆ ಹಾಕಿಸಿಕೊಳ್ಳುವುದನ್ನ ಉತ್ತೇಜಿಸಲು ನಾನಾ ಮಕ್ರಮಗಳನ್ನ ಕೈಗೊಳ್ಳುತ್ತಾ, ಜನರಿಗೆ ಲಸಿಕೆ ಮಹತ್ವ ಸಾರುತ್ತಿದ್ದಾರೆ..
ಇದೀಗ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ದೇಶದ ಜನರನ್ನ ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿ ಅವರು ಕೋವಿಡ್ ಲಸಿಕೆ ಪಡೆಯಲು ಯಾರೂ ಹಿಂಜರಿಕೆ ಮಾಡಬಾರದು. ದಯವಿಟ್ಟು ಪ್ರತಿಯೊಬ್ಬರೂ ಲಸಿಕೆ ಪಡೆಯಿರಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.
ಹೌದು.. ತಿಂಗಳ ರೇಡಿಯೊ ಕಾರ್ಯಕ್ರಮ ‘ಮನ್ ಕೀ ಬಾತ್’ ನಲ್ಲಿ ಭಾನುವಾರ ಮಾತನಾಡಿದ ಅವರು ದೇಶದ ಲಸಿಕಾ ಅಭಿಯಾನವನ್ನು ಶ್ಲಾಘಿಸಿದ್ದಾರೆ. ‘ಲಸಿಕೆ ಕಾರ್ಯಕ್ರಮ ವೇಗ ಕುಂಠಿತಗೊಳ್ಳಬಾರದು, ದಯಮಾಡಿ ಹೆದರಿಕೆ ಬಿಡಿ. ಕೆಲವೊಮ್ಮೆ ಲಸಿಕೆ ಪಡೆದ ಬಳಿಕ ಜ್ವರ ಬರಬಹುದು. ಅದು ಸೌಮ್ಯವಾಗಿರುವುದಲ್ಲದೆ ಕೆಲವು ಗಂಟೆಗಳ ಬಳಿಕ ಕಡಿಮೆಯಾಗುತ್ತದೆ.
ಲಸಿಕೆ ಪಡೆಯದೇ ಇರುವುದು ಅಪಾಯಕಾರಿ. ಇದರಿಂದ ನಿಮ್ಮನ್ನು ನೀವು ಅಪಾಯಕ್ಕೆ ಒಡ್ಡಿಕೊಳ್ಳುವುದಲ್ಲದೆ ನಿಮ್ಮ ಕುಟುಂಬದವರು ಮತ್ತು ಇಡೀ ಗ್ರಾಮವನ್ನೇ ಅಪಾಯಕ್ಕೆ ಸಿಲುಕಿಸುತ್ತೀರಿ’ ಎಂದು ಹೇಳಿದ್ದಾರೆ. ಅಲ್ಲದೇ ಇತ್ತೀಚೆಗೆ ನಿಧನರಾದ ಒಲಿಂಪಿಯನ್ ಅಥ್ಲೀಟ್ ಮಿಲ್ಖಾ ಸಿಂಗ್ ಅವರಿಗೆ ನುಡಿ ನಮನ ಸಲ್ಲಿಸಿದ ಮೋದಿ ಅವರು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ತೆರಳುವ ಎಲ್ಲ ಕ್ರೀಡಾಳುಗಳಿಗೆ ಶುಭ ಹಾರೈಸಿದ್ದಾರೆ. ಇನ್ನೂ ಎಲ್ಲಾ ಸಿನಿಮಾರಂಗದ ಸೆಲೆಬ್ರಿಟಿಗಳು ಸಹ ತಾವು ಲಸಿಕೆ ಪಡೆದು , ಅದರ ಮಹತ್ವದ ಕುರಿತಾಗಿ ಜಾಗೃತಿ ಮೂಡಿಸುತ್ತಾ ಸೋಷಿಯಲ್ ಮೀಡಿಯಾಗಳಲ್ಲಿ ಫೋಟೋಗಳನ್ನ ಹಂಚಿಕೊಂಡಿದ್ದಾರೆ..








