ಬೆಂಗಳೂರು : ಹೆಚ್. ವಿಶ್ವನಾಥ್ ಅವರನ್ನು ನಡು ಬೀದಿಯಲ್ಲಿ ಕೈ ಬಿಡಬೇಡಿ ಎಂದು ಮಾಜಿ ಸಚಿವ ಆರ್.ಶಂಕರ್ ಅವರು, ಹಳ್ಳಿಹಕ್ಕಿಗೆ ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ಕೈ ತಪ್ಪಿದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವನಾಥ್ ಅಧಿಕಾರವಿಲ್ಲದೆ ಬಂದವರಲ್ಲ, ಅವರು ಬಂದಿದ್ದರಿಂದಲೇ ನಾವೆಲ್ಲ ಇಲ್ಲಿಗೆ ಬಂದಿದ್ದು. ಸಿಎಂ ಭರವಸೆ ಕೊಟ್ಟಿದ್ದಾರೆ ಅವರಿಗೆ ಸಚಿವ ಸ್ಥಾನ ಕೊಟ್ಟೇ ಕೊಡ್ತಾರೆ. ನಾಮಕರಣ ಮಾಡುವ ವೇಳೆ ಅಣ್ಣನಿಗೆ ಅವಕಾಶ ಕೊಡ್ತಾರೆ. ಈ ಬಗ್ಗೆ ನಾವು ಸಿಎಂ ಅವರಿಗೆ ಮನವಿ ಮಾಡುತ್ತೇವೆ. ಬೇರೆಯವರ ಬಗ್ಗೆ ಗೊತ್ತಿಲ್ಲ ಆದರೆ ನಾನಂತೂ ವಿಶ್ವನಾಥ್ ಪರ ಒತ್ತಡ ತರ್ತೇನೆ ಎಂದು ತಿಳಿಸಿದರು.
ಇನ್ನು ಈಗ ಅವರಿಗೆ ವಯಸ್ಸಾಗಿದೆ ಇಂತಹ ಸಂದರ್ಭದಲ್ಲಿ ಮಿಸ್ ಮಾಡಿದ್ರೆ ಬೇರೆ ಅರ್ಥ ಹೋಗುತ್ತೆ. ಆಗಲೂ ನಾವೆಲ್ಲ ಒಟ್ಟಾಗಿಯೇ ಬಂದಿದ್ದೆವು. ಈಗಲೂ ವಿಶ್ವನಾಥ್ ಪರ ನಾವು ನಿಲ್ಲುತ್ತೇವೆ ಎಂದ ಶಂಕರ್, ಸಾಕಷ್ಟು ಸಲ ಬಿಜೆಪಿ ಸರ್ಕಾರ ತರೋಕೆ ಪ್ರಯತ್ನ ಮಾಡಲಾಗಿತ್ತು. ಆದರೆ, ವಿಶ್ವನಾಥ್ ಬಂದ ಬಳಿಕವೇ ಅದು ಸಾಧ್ಯವಾಗಿದ್ದು, ನಡು ಬೀದಿಯಲ್ಲಿ ವಿಶ್ವನಾಥ್ ಅವರನ್ನು ಕೈ ಬಿಡಬೇಡಿ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.