ಬೆಂಗಳೂರು: ಸುಪಾರಿ ಕೊಟ್ಟಂತಹ ವ್ಯಕ್ತಿಗಳ ಬಗ್ಗೆ ಮಾತನಾಡುವುದಿಲ್ಲ. ತನ್ನ ಪತ್ರಕರ್ತನಿಗೇ ಸುಪಾರಿ ಕೊಟ್ಟವರಿಗೆ ಮಾಧ್ಯಮಗಳು ಪ್ರಚಾರ ಕೊಡಬೇಡಿ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹಿರಿಯ ಪತ್ರಕರ್ತ ರವಿ ಬೆಳಗೆರೆಗೆ ಟಾಂಗ್ ನೀಡಿದ್ದಾರೆ.
ಸ್ಯಾಂಡಲ್ವುಡ್ ಡ್ರಗ್ ಜಾಲದ ಬಗ್ಗೆ ಸಿಸಿಬಿ ಕಚೇರಿಯಲ್ಲಿ ವಿಚಾರಣೆ ಮುಕ್ತಾಯಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಇಂದ್ರಜಿತ್ ಲಂಕೇಶ್, ಬೇರೆ ಸಾಹಿತಿಗಳನ್ನು ಕಾಪಿ ಮಾಡುವವರ ಬಗ್ಗೆ ನಾನೇಕೆ ಮಾತನಾಡಲಿ. ಬೇರೆ ಸಾಹಿತಿಗಳನ್ನು ಕಾಪಿ ಮಾಡುವವರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಅವರಿಗೆ ಸ್ವಂತ ಪದ ಬಳಸಲು ಬರುವುದಿಲ್ಲ ಎಂದು ರವಿ ಬೆಳೆಗೆರೆ ಅವರಿಗೆ ತಿರುಗೇಟು ನೀಡಿದ್ದಾರೆ.
ಇಂದ್ರಜಿತ್ ಲಂಕೇಶ್ ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ, ಆತ ಲಂಕೇಶ್ ಅಲ್ಲ, ಕೇಶ್ ಎಂದು ರವಿ ಬೆಳಗೆರೆ ವಾಗ್ದಾಳಿ ನಡೆಸಿದ್ದರು. ರವಿ ಬೆಳಗೆರೆ ಹೇಳಿಕೆಗೆ ತಿರುಗೇಟು ನೀಡಿರುವ ಇಂದ್ರಜಿತ್, ಲಂಕೇಶ್, ಕೇಶ್ ಎಂದು ಹೇಳಿದವರು ದೊಡ್ಡ ಸಾಹಿತಿ, ಅದು ಚಂದ್ರಶೇಖರ್ ಪಾಟೀಲ್. ಅವರು ಹೇಳಿದ್ದನ್ನು ಕಾಪಿ ಮಾಡಿದ್ದಾರೆ. ಈ ಪತ್ರಕರ್ತರಿಗೆ ಸ್ವಂತ ಪದ ಬಳಸಿ ಬರೆಯಲು ಬರುವುದಿಲ್ಲ ಎಂದಿದ್ದಾರೆ.
ಸ್ಯಾಂಡಲ್ವುಡ್ನ ಡ್ರಗ್ಸ್ ಜಾಲದಲ್ಲಿ ನಟರೊಬ್ಬರು ಇದ್ದಾರೆ, ಅವರು ಹಿರಿಯ ಪತ್ರಕರ್ತರೊಬ್ಬರ ಸಂಬಂಧಿ ಎಂದು ಪರೋಕ್ಷವಾಗಿ ಶ್ರೀನಗರ ಕಿಟ್ಟಿ ಹಾಗೂ ರವಿ ಬೆಳಗೆರೆ ಬಗ್ಗೆ ಇಂದ್ರಜಿತ್ ಲಂಕೇಶ್ ಹೇಳಿಕೆ ನೀಡಿದ್ದರು. ಇಂದ್ರಜಿತ್ ಲಂಕೇಶ್ ಹೇಳಿಕೆಗೆ ಅಂದೇ ವಾಗ್ದಾಳಿ ನಡೆಸಿದ್ದ ರವಿ ಬೆಳಗೆರೆ, ಇವರು ಲಂಕೇಶ್ ಅಲ್ಲ, ಕೇಶ್. ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ ಎಂದು ಟೀಕಿಸಿದ್ದರು.
****
ಕೇರಳ ಮತ್ತು ಕೊಳ್ಳೇಗಾಲದ ಮಹಾ ವಶೀಕರಣ ಮಾಂತ್ರಿಕರು ಮತ್ತು ತಾಂತ್ರಿಕರು ಪಂಡಿತ್ ಸಂತೋಷ್ ಆಚಾರ್ಯ ಗುರೂಜಿ
ಇವರು ನಿಮ್ಮ ಸಮಸ್ಯೆಗಳಾದ ವಶೀಕರಣ, ವಿವಾಹ, ಸಂತಾನ, ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಹೋಗಿದ್ರೆ, ಇಷ್ಟ ಪಟ್ಟ ಪುರುಷ ಮತ್ತು ಸ್ತ್ರಿ ನಿಮ್ಮ ವಶ ಆಗಬೇಕಾದರೆ ಮತ್ತು ಲೈಂಗಿಕ ಸಮಸ್ಯೆ, ಸಾಲಬಾಧೆ, ಗುಪ್ತ ಸಮಸ್ಯೆಗಳಿಗೆ ಕೇರಳದ ಭದ್ರಕಾಳಿ ದೇವಿ ಶಕ್ತಿಯಿಂದ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ದೂರವಾಣಿ ಸಂಖ್ಯೆ 9901005534
ಕರೆ ಅಥವಾ ವಾಟ್ಸಾಪ್ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.