ನನ್ನ ಧರ್ಮ ಯಾಕೆ ಎಳೆದು ತರುತ್ತೀಯಾ – ಸಲ್ಮಾನ್ ಗುಡುಗು….
ಅನೇಕ ಸಂದರ್ಭಗಳಲ್ಲಿ, ನಟ ಸಲ್ಮಾನ್ ಖಾನ್ ಕೋಪಗೊಳ್ಳುತ್ತಾರೆ. ಅದಕ್ಕೆ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆ ಸೇರಿದಂತೆ ಅನೇಕ ನಿದರ್ಶನಗಳಿವೆ. ಸಾರ್ವಜನಿಕ ಸ್ಥಳಗಳಲ್ಲಿ ಅಭಿಮಾನಿಗಳು ಅತಿಯಾಗಿ ವರ್ತಿಸಿದಾಗಲೂ ಸಲ್ಮಾನ್ ಗುಡುಗಿದ್ದಾರೆ. ಇದೀಗ ಸಲ್ಮಾನ್ ಖಾನ್ ಪಕ್ಕದ ಮನೆಯವರ ವಿರುದ್ಧ ಕಿಡಿಕಾರಿದ್ದಾರೆ.
ಆದರೆ ಇದು ಸಲ್ಮಾನ್ ಖಾನ್ ಧರ್ಮಕ್ಕೆ ಕಾರಣ ಎಂಬುದು ಗಮನಿಸಬೇಕಾದ ಸಂಗತಿ. ಸಲ್ಮಾನ್ ಖಾನ್ ತಂದೆ ಮುಸ್ಲಿಂ, ಸಾಲು ತಾಯಿ ಹಿಂದೂ. ಹಾಗಾಗಿ ಮನೆಯಲ್ಲಿ ಇಬ್ಬರ ಧರ್ಮದ ಆಚರಣೆ ನಡೆಯುತ್ತದೆ. ಆದರೆ ಅವರ ಪನ್ವೇಲ್ ಫಾರ್ಮ್ಹೌಸ್ನ ನೆರೆಮನೆಯಾತ ಸಲ್ಮಾನ್ ಖಾನ್ ಅವರ ಧರ್ಮದ ಬಗ್ಗೆ ಅವಹೇಳನಕಾರಿ ಮಾತನಾಡಿದ್ದಾರೆ ಎಂದು ಸಲ್ಮಾನ್ ಆರೋಪಿಸಿದ್ದಾರೆ. ಇದು ಅವರ ಕೋಪಕ್ಕೆ ಕಾರಣ. ಹಾಗಾಗಿ ಈ ಕಾರಣಕ್ಕೆ ಸಲ್ಮಾನ್ ನೇರವಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ಸಲ್ಮಾನ್ ಖಾನ್ ಮುಂಬೈನ ಹೊರ ವಲಯದ ಪನ್ವೇಲ್ನಲ್ಲಿ ಫಾರ್ಮ್ಹೌಸ್ ಹೊಂದಿದ್ದಾರೆ. ಇದು ಸಲ್ಮಾನ್ ಅವರ ನೆಚ್ಚಿನ ಸ್ಥಳವಾಗಿದೆ. ಶೂಟಿಂಗ್ ಇಲ್ಲದ ಸಮಯದಲ್ಲಿ ಫಾರ್ಮ್ಹೌಸ್ನಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಕೇತನ್ ಕಕ್ಕಡ್ ಎಂಬ ವ್ಯಕ್ತಿ ಪನ್ವೇಲ್ ಫಾರ್ಮ್ ಹೌಸ್ ಪಕ್ಕದಲ್ಲಿ ಆಸ್ತಿ ಹೊಂದಿದ್ದಾರೆ. ಸಲ್ಮಾನ್ ಖಾನ್ ಅವರಿಗೂ ಕೇತನ್ ಎಂಬುವವರಿಗೂ ಜಾಗಕ್ಕೆ ಸಂಬಂಧಿಸಿದಂತೆ ಕೆಲವು ತಗಾದೆಗಳಿವೆ. ಈ ಜಗಳದ ನಡುವೆಯೇ ಕೇತನ್, ಸಲ್ಮಾನ್ ಖಾನ್ ಧರ್ಮ ಕುರಿತು ಮಾತಾಡಿದ್ದಾರೆ. ಇದು ಸಲ್ಲು ಕೋಪಕ್ಕೆ ಕಾರಣವಾಗಿದೆ.
ಸಲ್ಮಾನ್ ಜೊತೆಗಿನ ಕಿರಿಕ್ ಬಗ್ಗೆ ಕೇತನ್ ಇತ್ತೀಚೆಗೆ ಯೂಟ್ಯೂಬ್ ಚಾನೆಲ್ಗಳಲ್ಲಿ ಮಾತಾಡಿದ್ದರು. ಸಲ್ಮಾನ್ ಖಾನ್ ವಿರುದ್ಧ ಹಲವು ಗಂಭೀರ ಆರೋಪ ಮಾಡಿದ್ದರು. ಈ ಎಲ್ಲಾ ವಿಚಾರಗಳನ್ನು ಸಲ್ಲು ಗಂಭೀರವಾಗಿ ತೆಗೆದುಕೊಂಡಿದ್ದು, ನ್ಯಾಯಾಲಯದ ಮೊರೆ ಹೋಗಿದ್ದಾರೆ. ಕೇತನ್ ಕಕ್ಕಡ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
‘ನನ್ನ ವೈಯಕ್ತಿಕ ಘನತೆಗೆ ಏಕೆ ಧಕ್ಕೆ ತರುತ್ತಿದ್ದೀರಿ? ನನ್ನ ಧರ್ಮವನ್ನು ಯಾಕೆ ಎಳೆದು ತರುತ್ತಿದ್ದೀಯ? ನನ್ನ ತಂದೆ ಮುಸ್ಲಿಂ, ತಾಯಿ ಹಿಂದೂ. ನನ್ನ ಸಹೋದರರು ಹಿಂದೂಗಳನ್ನು ಮದುವೆಯಾಗಿದ್ದಾರೆ. ನಾವು ಎಲ್ಲಾ ಹಬ್ಬಗಳನ್ನು ಆಚರಿಸುತ್ತೇವೆ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ. ಫೇಸ್ಬುಕ್, ಟ್ವಿಟರ್, ಯೂಟ್ಯೂಬ್ ಮತ್ತು ಗೂಗಲ್ನಲ್ಲಿ ತಮ್ಮ ಬಗ್ಗೆ ಅವಹೇಳನಕಾರಿ ಮಾಹಿತಿಯನ್ನು ತೆಗೆದುಹಾಕುವ ಬಗ್ಗೆ ನೋಟಿಸ್ ತೆಗೆದುಕೊಳ್ಳುವಂತೆ ಸಲ್ಮಾನ್ ಖಾನ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.