ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ವಿರುದ್ಧ ಆಕ್ಷೇಪಾರ್ಹ ಪದ ಉಪಯೋಗಿಸಿ ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಟೀಕಿಸಿದ್ದಾರೆ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಟಾಂಗ್ ನೀಡಿದ್ದಾರೆ.
ವಿಧಾನಸಭೆಯ ಒಳಗೆ ಸಿದ್ದರಾಮಯ್ಯನವರು ಯತ್ನಾಳರ ಹೇಳಿಕೆಯನ್ನು ಹಲವು ಬಾರಿ ಪುನರುಚ್ಛಿಸಿದ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಸಚಿವ ಎಸ್. ಸುರೇಶ್ ಕುಮಾರ್, ಶಾಸಕ ಯತ್ನಾಳ್ ರು ಶ್ರೀ ದೊರೆಸ್ವಾಮಿಯವರ ಕುರಿತು “ಪಾಕ್ ಏಜೆಂಟ್” ಎಂದು ಹೇಳಿದ್ದು ಖಂಡಿತ ತಪ್ಪು. ಆದರೆ ಅವರು ಹಾಗೆ ಹೇಳಿದ್ದು ವಿಧಾನ ಸಭೆಯ ಹೊರಗೆ.
ಆದರೆ ಅದನ್ನೇ ಸಿದ್ದರಾಮಯ್ಯನವರು ವಿಧಾನಸಭೆಯ ಒಳಗೆ ಮತ್ತೆ-ಮತ್ತೆ (ಹತ್ತು ಬಾರಿ) ಉಚ್ಛರಿಸಿದ್ದು ಯತ್ನಾಳರು “ಮಾಡಿದ್ದಕ್ಕಿಂತ” ದೊಡ್ಡ ತಪ್ಪು ಎಂದಿದ್ದಾರೆ.









