ರಾಬರ್ಟ್ ಚಿತ್ರತಂಡ ದಾಸನ ಅಭಿಮಾನಿಗಳಿಗೆ ದೊಡ್ಡ ಉಡುಗೊರೆ ಕೊಟ್ಟಿದೆ. ಸಿನಿಮಾದ ಬಹು ನಿರೀಕ್ಷಿತ ‘ದೋಸ್ತ ಕಣೋ…’ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಊಹೆಗೂ ಮೀರಿದ ರೀತಿಯಲ್ಲಿ ವಿಡಿಯೋ ಮಾಡಿದೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ರಾಬರ್ಟ್ ಸಿನಿಮಾದ ಹಾಡುಗಳು ಈಗಾಗಲೇ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿವೆ. ಇನ್ನು ದೋಸ್ತ ಕಣೋ ಹಾಡಿಗೆ ಚೇತನ್ ಕುಮಾರ್ ಸಾಹಿತ್ಯವಿದ್ದು, ಹೇಮಂತ್ ಹಾಗೂ ವಿಜಯ್ ಪ್ರಕಾಶ್ ದನಿಯಾಗಿದ್ದಾರೆ.
ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಸಿನಿಮಾ ಏಪ್ರಿಲ್ ನಲ್ಲಿ ಬಿಡುಗಡೆಯಾಗಲಿದೆ. ಉಮಾಪತಿ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಕೊರೊನಾ ಭೀತಿ ಹಿನ್ನೆಲೆ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಸದ್ಯಕ್ಕೆ ಕ್ಯಾನ್ಸಲ್ ಆಗಿದೆ.