10 ಲಕ್ಷ ರೂಪಾಯಿ ವರದಕ್ಷಿಣೆ ಕೇಳಿದಕ್ಕೆ , ವರನಿಗೆ ಮದುವೆ ಮನೆಯಲ್ಲೇ ಧರ್ಮದೇಟು ಕೊಟ್ಟರು..! Video
ಉತ್ತರಪ್ರದೇಶ : ವರದಕ್ಷಿಣೆ ಕಾನೂನು ಬಾಹಿರವಾಗಿದೆ.. ಇದರ ವಿರುದ್ಧ ಎಷ್ಟೇ ಹೋರಾಡಿದ್ರು , ಕಾನೂನು ತಂದ್ರು , ಅನಿಷ್ಟ ವರದಕ್ಷಿಣೆ ಪಿಡುಗು ಮಾತ್ರ ನಿಲ್ಲುತ್ತಿಲ್ಲ. ವರದಕ್ಷಿಣೆ ಕಿರುಕುಳದಿಂದಾಗಿ ಪಾಪ ಅನೇಕ ಮಹಿಳೆಯರು ಇಲ್ಲಿವರೆಗೂ ಸಾವನಪ್ಪಿರುವ ಉದಾಹರಣೆಗಳಿವೆ..
ಈ ನಡುವೆ ಉತ್ತರಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಸಾಹಿಬಾಬಾದ್ ಪ್ರದೇಶದಲ್ಲಿ ವರನೊಬ್ಬ ಮದುವೆ ಸಮಯದಲ್ಲಿ ಹೆಚ್ಚು ಹಣ ಬೇಕು ಎಂದು ಬೇಡಿಕೆಯನ್ನು ಇಟ್ಟಿದ್ದಾನೆ. ಆತ ಮದುವೆ ಮನೆಯಲ್ಲಿ 10 ಲಕ್ಷ ರೂಪಾಯಿ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದಾನೆ.. ಇದ್ರಿಂದ ರೊಚ್ಚಿಗೆದ್ದ ಜನರು ಆತನನ್ನ ನಾಯಿಗೆ ಬಾರಸಿದ ಹಾಗೆ ಬಾರಿಸಿದ್ದಾರೆ.. ಅಲ್ಲಿದ್ದ ಜನರು ಆತನನ್ನು ಥಳಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಸಾಹಿಬಾಬಾದ್ ನ ಬ್ಯಾಂಕ್ವೆಟ್ ಹಾಲ್‍ನಲ್ಲಿ ಶುಕ್ರವಾರ ರಾತ್ರಿ ಆರತಕ್ಷತೆ ಸಮಾರಂಭ ನಡೆಯುತ್ತಿದ್ದ ವೇಳೆ ವರನ ಕಡೆಯವರು 10 ಲಕ್ಷ ರೂ. ವರದಕ್ಷಿಣೆ ಬೇಕು ಎಂದು ಬೇಡಿಕೆಯನ್ನು ಇಟ್ಟಿದ್ದಾರೆ. ಇದರಿಂದ ರೊಚ್ಚಿಗೆದ್ದ ವಧುವಿನ ಕಡೆಯವರು ವರನ ಜೊತೆ ಕೆಟ್ಟದಾಗಿ ಮಾತನಾಡಲು ಪ್ರಾರಂಭಿಸಿದ್ದಾರೆ. ನಂತರ ವರನನ್ನು ಮಂಟಪದಿಂದ ಎಳೆದೊಯ್ದು ಥಳಿಸಲು ಪ್ರಾರಂಭಿಸಿದ್ದಾರೆ.
ಈ ವೇಳೆ ಆತನ ಸಂಬಂಧಿ ವಧುವಿನ ಕಡೆಯವರನ್ನು ತಡೆದಿದ್ದಾರೆ. ಗಲಾಟೆ ನಡೆಯುತ್ತಿರಬೇಕಾದರೆ ಸಂಭಾಗಣದಲ್ಲಿದ್ದ ಜನರು ಈ ಘಟನೆಯನ್ನು ಫೋನ್ ನಲ್ಲಿ ಸೆರೆ ಹಿಡಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ವರನ ವಿರುದ್ಧ ದೂರು ಸಹ ದಾಖಲಾಗಿದೆ.
ವಧುವಿನ ಪೋಷಕರಿಗೆ ವರನ ತಂದೆ ವರದಕ್ಷಿಣೆಯಾಗಿ 10 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದು, ಒಂದು ವೇಳೆ ನಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ಮದುವೆಯನ್ನು ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ..
ಈಗಾಗಲೇ ವಧುವಿನ ಕಡೆಯವರು 3 ಲಕ್ಷ ರೂಪಾಯಿ ನಗದು ಮತ್ತು 1 ಲಕ್ಷ ರೂಪಾಯಿ ಮೌಲ್ಯದ ವಜ್ರದ ಉಂಗುರವನ್ನು ವರನಿಗೆ ನೀಡಿದ್ದು, ಆದರೂ ಅವರು ಇನ್ನು ಹೆಚ್ಚು ಹಣಬೇಕು ಎಂದು ಬೇಡಿಕೆಯನ್ನು ಇಟ್ಟಿದ್ದರು. ಆದರೆ ವಧುವಿನ ಕಡೆಯವರಿಂದ ಅದು ಸಾಧ್ಯವಾಗಲಿಲ್ಲ.. ವರನ ಕಡೆಯವರಿಗೆ ಎಷ್ಟೇ ಮನವೊಲಿಸಿದರೂ ಅವರು ಒಪ್ಪಲು ತಯಾರಿರಲಿಲ್ಲ. ಇದರಿಂದ ಕೋಪಗೊಂಡ ವಧುವಿನ ಮನೆಯವರು ವರನಿಗೆ ಧರ್ಮದೇಟು ಕೊಟ್ಟಿದ್ದಾರೆ..
ವರನನ್ನು ಮುಝಮ್ಮಿಲ್ ಎಂದು ಗುರುತಿಸಲಾಗಿದ್ದು, ಈತ ಆಗ್ರಾ ನಿವಾಸಿಯಾಗಿದ್ದಾನೆ. ಅಂದ್ಹಾಗೆ ಈತ ಈ ಹಿಂದೆ 2-3 ಬಾರಿ ಮದುವೆಯಾಗಿದ್ದಾನೆ ಎಂದು ವಧುವಿನ ಕಡೆಯವರು ಆರೋಪಿಸಿದ್ದಾರೆ.
ವೈರಲ್ ವಿಡಿಯೋಗೆ ನೆಟ್ಟಿಗರು ನಾನಾ ಕಮೆಂಟ್ ಗಳನ್ನ ಮಾಡ್ತಿದ್ದು ವಧುವಿನ ಕಡೆಯವರು ಮಾಡಿದ್ದು ಸರಿ ಅಂತ ಅಭಿಪ್ರಾಯ ಹಂಚಿಕೊಳ್ತಿದ್ದಾರೆ..