ಮೊಸರಲ್ಲಿ ಕಲ್ಲು ಹುಡುಕೋ ಕಾಂಗ್ರೆಸ್ ನಾಯಕರ ಪ್ರಯತ್ನ ದುರದೃಷ್ಟಕರ
ಬೆಂಗಳೂರು : ಲಸಿಕೆ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿರೋದು ನಿಜಕ್ಕೂ ದುರದೃಷ್ಟಕರ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕಿಡಿಕಾರಿದ್ದಾರೆ. dr k sudhakar blames congress vidhana soudha saaksha tv
ಇಂದಿನ ಕಲಾಪದಲ್ಲಿ ಮಾತನಾಡಿದ ಸುಧಾಕರ್, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇಡೀ ವಿಶ್ವವೇ ಬೆರಗಾಗುವ ರೀತಿ ಇತಿಹಾಸದ ಅತೀ ದೂಡ್ಡ ವಯಸ್ಕರ ಲಸಿಕಾ ಅಭಿಯಾನವನ್ನು ಭಾರತ ಅತ್ಯಂತ ಯಶಸ್ವಿಯಾಗಿ ಕೈಗೊಂಡಿರುವ ಈ ಸಂದರ್ಭದಲ್ಲಿ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲ ಕಾಂಗ್ರೆಸ್ ನಾಯಕರ ಪ್ರಯತ್ನ ನಿಜಕ್ಕೂ ದುರದೃಷ್ಟಕರ.
ಲಸಿಕೆಯೊಂದೇ ಸಾಂಕ್ರಾಮಿಕಕ್ಕೆ ಶಾಶ್ವತ ಪರಿಹಾರ ಎಂಬ ದೂರದೃಷ್ಟಿಯಿಂದ ಪ್ರಧಾನಿ ಮೋದಿ ಅವರು ಫೆಬ್ರವರಿ-ಮಾರ್ಚ್ 2020ರಲ್ಲೇ ಸಂಶೋಧಕರು, ವಿಜ್ಞಾನಿಗಳು, ಲಸಿಕಾ ತಯಾರಿಕಾ ಕಂಪನಿಗಳ ಜೊತೆ ಮಾತುಕತೆ ನಡೆಸಿ ದೇಶದಲ್ಲಿ ಕೊರೊನಾ ಸೋಂಕು ಪತ್ತೆಯಾದ ಕೇವಲ 11 ತಿಂಗಳೊಳಗೆ ಲಸಿಕಾ ಅಭಿಯಾನ ಆರಂಭವಾಗಲು ಅತ್ಯಂತ ವ್ಯವಸ್ಥಿತವಾಗಿ ಯೋಜನೆ ರೂಪಿಸಿದರು.
135 ಕೋಟಿ ಜನಸಂಖ್ಯೆ ಇರುವ ಭಾರತದಂತಹ ಬೃಹತ್ ದೇಶವನ್ನು ಸಾಂಕ್ರಾಮಿಕದಿಂದ ರಕ್ಷಿಸಿದ ಪ್ರಧಾನಿ ಮೋದಿರವರ ಕಾರ್ಯವೈಖರಿಯನ್ನು ಇಂದು ಇಡೀ ವಿಶ್ವವೇ ಮೆಚ್ಚಿದೆ. ಭಾರತದ ಈ ಸಾಧನೆಯನ್ನು ಅಭಿನಂದಿಸುವ ಹೃದಯ ವೈಶಾಲ್ಯತೆ ಇಲ್ಲದಿದ್ದರೆ ಕನಿಷ್ಠ ಪಕ್ಷ ಲಸಿಕಾ ಅಭಿಯಾನದ ಬಗ್ಗೆ ಟೀಕೆ, ಅಪಪ್ರಚಾರ ಮಾಡಬೇಡಿ ಎಂದು ಮನವಿ ಮಾಡಿಕೊಂಡರು.