ಶೇ 100ರಷ್ಟು ಚಿತ್ರಮಂದಿರ ಭರ್ತಿ ವಿಚಾರ : ಸುಧಾಕರ್ ಹೇಳಿದ್ದೇನು..?
ಸಿನಿಮಾರಂಗ ಅನುಭವಿಸಿದ ವನವಾಸ ಇನ್ನೇನು ಕೊನೆಗೂ ಮುಗಿಯುತು. ಸಿನಿಮಾ ಮಂದಿರಗಳಲ್ಲಿ ಪೂರ್ಣಪ್ರಮಾಣದಲ್ಲಿ ಸೀಟಿಂಗ್ ವ್ಯವಸ್ಥೆ ಸಿಕ್ತು ಅನ್ನೋ ಖುಷಿ ಕರ್ನಾಟಕ ರಾಜ್ಯಕ್ಕೆ ಇಲ್ಲದಂತಾಗಿದೆ. ಯಾಕಂದ್ರೆ ಕೇಂದ್ರ ರ‍್ಕಾರ ಚಿತ್ರ ಮಂದಿರಗಳಲ್ಲಿ 50ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲು ಸೂಚಿಸಿದೆ. ನಂತರ ರಾಜ್ಯ ಕ್ರಮಕೈಗೊಳ್ಳಲು ಸೂಚಿಸಿದೆ. ಆದ್ರೆ ರಾಜ್ಯ ಸರ್ಕಾರ ಸಿನಿಮಾ ಮಂದಿರಗಳಲ್ಲಿ ಪೂರ್ಣ ಪ್ರಮಾಣದ ಆಸನ ವ್ಯವಸ್ಥೆಗೆ ಅನುಮತಿ ನೀಡದೇ ಶೇ. 50 ರಷ್ಟು ಸೀಟಿಂಗ್ ನಿಯಮವನ್ನೇ ಮುಂದುವರೆಸಿದೆ. ಇತ್ತ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಸಿನಿಮಾರಂಗದವರು ಆಕ್ರೋಶ ಹೊರಹಾಕ್ತಾಯಿದ್ದಾರೆ. ಅಲ್ದೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೂಡ ಈ ಬಗ್ಗೆ ಟ್ವೀಟ್ ಮಾಡಿ ಸರ್ಕಾರದ ನಿರ್ಧಾರದ ವಿರುದ್ಧ ಕೆಂಡಕಾರಿದ್ದಾರೆ.
ನಮಗೆ ಜನರ ಮನರಂಜನೆಗಿಂತ ಆರೋಗ್ಯ ಮುಖ್ಯ : ಸಚಿವ.ಕೆ.ಸುಧಾಕರ್
ಇತ್ತ ಆರೋಗ್ಯ ಸಚಿವ ಕೆ ಸುಧಾಕರ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ತಾಂತ್ರಿಕ ಸಲಹಾ ಸಮಿತಿ ಸಲಹೆ ಪ್ರಕಾರ ನಾವು SಔP ಬಿಡುಗಡೆ ಮಾಡಿದ್ದೇವೆ. ಫೆ.28 ವರೆಗು ಶೇ.50ರಷ್ಟು ತುಂಬಬಹುದು. ನೆರೆಯ ಕೇರಳದಲ್ಲಿ ಪ್ರತೀ ದಿನ 5 ಸಾವಿರ ಕೇಸ್ ದಾಖಲಾಗ್ತಿದೆ. ಮನರಂಜನೆಗಿಂತ ಮುಖ್ಯ ಜನರ ಆರೋಗ್ಯ. ಮತ್ತೊಮ್ಮೆ ತಾಂತ್ರಿಕ ಸಲಹ ಸಮಿತಿ ಜೊತೆ ಸಭೆ ಮಾಡುತ್ತೇನೆ. ಅವರ ಸಲಹೆ ಮೇರೆಗೆ ಅಂತಿಮ ನರ‍್ಧಾರ ಮಾಡುತ್ತೇನೆ. ಚಿತ್ರ ಮಂದಿರ ಅಂದ್ರೆ ಕ್ಲೋಸ್ಡ್, ಎಸಿ ಇರೋ ಜಾಗ. ಬಹಳ ಬೇಗನೆ ಸೋಂಕು ಹರಡಲಿದೆ. ಸಿಎಂ ಮತ್ತು ತಾಂತ್ರಿಕ ಸಲಹಾ ಸಮಿತಿ ಸಭೆ ಸೇರಿ ಮುಂದೆ ನರ‍್ಧಾರ ಮಾಡುತ್ತೇವೆ ಎಂದಿದ್ದಾರೆ.
ಸೌದಿ ಅರೇಬಿಯಾ – ಭಾರತ ಸೇರಿದಂತೆ 20 ದೇಶಗಳ ಪ್ರಯಾಣಿಕರ ಪ್ರವೇಶಕ್ಕೆ ನಿಷೇಧ
ಅಲ್ದೇ ಈ ಕುರತಿತಾಗಿ ಟ್ವೀಟ್ ಮಾಡಿರೋ ಅವ್ರು, ಕೊರೊನಾ ಬಿಕ್ಕಟ್ಟಿನಿಂದ ಉಂಟಾದ ಲಾಕ್ ಡೌನ್ ಮತ್ತು ನಂತರ ದಿನಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಹೇರಲಾಗಿದ್ದ ನರ‍್ಬಂಧಗಳಿಂದ ನಷ್ಟ ಅನುಭವಿಸಿದ ಕ್ಷೇತ್ರಗಳಲ್ಲಿ ಚಿತ್ರರಂಗವೂ ಒಂದು ಎಂಬ ಅರಿವಿದೆ. ಚಿತ್ರರಂಗ ಜನರಿಗೆ ಮನರಂಜನೆ ನೀಡುವುದಷ್ಟೇ ಅಲ್ಲದೆ, ಸಾವಿರಾರು ಜನರಿಗೆ ಜೀವನೋಪಾಯ ಒದಗಿಸಿರುವ ಉದ್ಯಮವೂ ಹೌದು. ನಾಡಿನ ಸಮಸ್ತ ಜನರ ಆರೋಗ್ಯ ಮತ್ತು ಚಿತ್ರೋದ್ಯಮದ ಒಳಿತು ಎರಡನ್ನೂ ಗಮನದಲ್ಲಿಟ್ಟುಕೊಂಡು ತಜ್ಞ ವೈದ್ಯರು ಹಾಗೂ ಮಾನ್ಯ ಮುಖ್ಯಮಂತ್ರಿಗಳ ಜೊತೆ ರ‍್ಚಿಸಿ ಚಿತ್ರಮಂದಿರಗಳನ್ನು ಪರ‍್ಣ ಪ್ರಮಾಣದಲ್ಲಿ ತೆರೆಯುವ ಕುರಿತು ಶೀಘ್ರವೇ ಸೂಕ್ತ ನರ‍್ಧಾರ ಕೈಗೊಳ್ಳುವ ಭರವಸೆ ನೀಡುತ್ತಿದ್ದೇನೆ ಎಂದಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel