ತಡರಾತ್ರಿ ಕೋಲಾರ ಭೇಟಿ ವಿಚಾರಕ್ಕೆ ಸುಧಾಕರ್ ಪ್ರತಿಕ್ರಿಯೆ
ಬೆಂಗಳೂರು : ಆರೋಗ್ಯ ಸಚಿವ ಡಾ ಕೆ ಸುಧಾಕರ್ ಸುಧಾಕರ್ ತಡರಾತ್ರಿ ಕೋಲಾರ ಭೇಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಕೋಲಾರದಲ್ಲಿ 40 ವೆಂಟಿಲೇಟರ್ ಬೆಡ್ ನೀಡಲಾಗಿತ್ತು.
ಆಕ್ಸಿಜನ್ ಪೈಪ್ನಲ್ಲಿ ಬರುವಾಗ ಸಮಸ್ಯೆ ಇದ್ದು ಅದನ್ನ ಸರಿಪಡಿಸಬೇಕು. ಅದರಲ್ಲಿರೋ ಸಮಸ್ಯೆಯನ್ನ ಸರ್ಕಾರದ ಗಮನಕ್ಕೆ ತರಬೇಕಿತ್ತು. ಇದರಲ್ಲಿ ನಿರ್ಲಕ್ಷ್ಯ ಕಂಡುಬಂದಿದೆ. ಹೀಗಾಗಿ ಇಬ್ಬರು ಅಧಿಕಾರಿಗಳನ್ನ ರಾತ್ರಿಯೇ ಸಸ್ಪೆಂಡ್ ಮಾಡಿದ್ದೇನೆ. ಕೋವಿಡ್ ವಾರ್ ರೂಮಲ್ಲಿ ಅಟೆಂಡರ್ ಬಿಟ್ಟಿದ್ರು.
ಎಲ್ಲರ ವಿರುದ್ಧ ಕ್ರಮ ಕೈಗೊಂಡಿದ್ದೇನೆ. ಕೆಲ ವ್ಯವಸ್ಥೆ ಇಂದ ಎಲ್ಲರ ಮೇಲೆ ಅಪವಾದ ಬರುತ್ತಿದೆ. ವೈದ್ಯರ ಪರಿಶ್ರಮ ಎಷ್ಟೋ ಜನರ ಪ್ರಾಣ ಉಳಿಸುತ್ತಿದ್ದಾರೆ. ಎಲ್ಲರೂ ಒಗ್ಗಟ್ಟಾಗಿ ಗೌರವಕ್ಕೆ ಪಾತ್ರರಾಗೋಣ ಎಂದಿದ್ದಾರೆ.