ನಾಯಿ ಹಾಗೂ ಬೆಕ್ಕಿನ ಮರಿಗೆ ವ್ಯಾಕ್ಸಿನ್ ಹೆಸರಿಟ್ಟ ಖ್ಯಾತ ವೈದ್ಯ
ಬೆಂಗಳೂರು : ಕೊರೊನಾ ಕಂಟ್ರೋಲ್ ಗೆ ದೇಶದಲ್ಲಿ ಲಸಿಕಾ ಅಭಿಯಾನ ನಡೆಯುತ್ತಿದೆ. ಕೋವಿಶೀಲ್ಡ್, ಕೋವ್ಯಾಕ್ಸಿನ್ ಲಸಿಕೆಯನ್ನು ಜನರಿಗೆ ನೀಡಲಾಗುತ್ತಿದೆ.
ಈ ಮಧ್ಯೆ ಬೆಂಗಳೂರಿನ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ವೈದ್ಯರು ತನ್ನ ಮುದ್ದಿನ ನಾಯಿ ಹಾಗೂ ಬೆಕ್ಕಿನ ಮರಿಗೆ ವ್ಯಾಕ್ಸಿನ್ ಹೆಸರಿಟ್ಟಿದ್ದಾರೆ.
ಸೈಬೀರಿಯನ್ ಹಸ್ಕಿ ನಾಯಿ ಹಾಗೂ ಪರ್ಷಿಯನ್ ಕ್ಯಾಟ್ ಬೆಕ್ಕಿಗೆ ಮರಿಗಳಿಗೆ ಕೊರೊನಾ ವ್ಯಾಕ್ಸಿನ್ ಹೆಸರಿಡಲಾಗಿದೆ. ಸೈಬೀರಿಯನ್ ಹಸ್ಕಿ ನಾಯಿಗೆ ಕೋವಿಶೀಲ್ಡ್ ಹಾಗೂ ಪರ್ಷಿಯನ್ ಕ್ಯಾಟ್ ಬೆಕ್ಕಿಗೆ ಕೋವ್ಯಾಕ್ಸಿನ್ ಎಂದು ನಾಮಕರಣ ಮಾಡಲಾಗಿದೆ.
ಡಾಕ್ಟರ್ ಕಿರಣ್ ತೋಟಂಬೈಲ್ ಎಂಬುವವರು ತಮ್ಮ ನಾಯಿಮರಿ ಹಾಗೂ ಬೆಕ್ಕಿಗೆ ವ್ಯಾಕ್ಸಿನ್ ಹೆಸರಿಟ್ಟಿದ್ದು, ಇವರು ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ ಎಂದು ತಿಳಿದುಬಂದಿದೆ.
ಕಿರಣ್ ಅವರು ವೃತ್ತಿಯಲ್ಲಿ ವೈದ್ಯರಾಗಿ ಪ್ರವೃತ್ತಿಯಲ್ಲಿ ಸಂಗೀತ ನಿರ್ದೇಶಕರಾಗಿದ್ದಾರೆ. ಇವರು ಉಪೇಂದ್ರ ಅಭಿನಯದ ಐ ಲವ್ ಯು ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಇದಲ್ಲದೇ ಚಿ.ತು ಯುವಕರ ಸಂಘ, ಒಲವೇ ಮಂದಾರ-2 ಸಿನಿಮಾಗೆ ಸಂಗೀತ ನೀಡಿದ್ದಾರೆ.