Dr Vishnuvardhan | ಸಾಹಸ ಸಿಂಹ ವಿಷ್ಣುವರ್ಧನ ಜನ್ಮದಿನ
ಸಾಹಸ ಸಿಂಹ, ಅಭಿನಯ ಭಾರ್ಗವ, ಕನ್ನಡ ಚಿತ್ರರಂಗದ ಹೃದಯವಂತ ಡಾ.ವಿಷ್ಣುವರ್ಧನ್ ಇಂದು ನಮ್ಮೊಂದಿಗಿದ್ದಿದ್ದರೇ ತಮ್ಮ 72 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು.
ಆದ್ರೆ ಅವರು ನಮ್ಮನ್ನಗಲಿ 13 ವರ್ಷಗಳಾಗಿವೆ. ಇಂದು ವಿಷ್ಣುದಾದಾ ಹುಟ್ಟಹಬ್ಬವನ್ನು ಅಭಿಮಾನಿಗಳು ವಿಭಿನ್ನವಾಗಿ ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ.
1950 ಸೆಪ್ಟೆಂಬರ್ 18 ರಂದು ಜನಸಿದ ವಿಷ್ಣುದಾದಾರ ಮೂಲ ಹೆಸರು ಸಂಪತ್ ಕುಮಾರ್.
![dr-vishnuvardhan-on-his-72nd-birthday](http://saakshatv.com/wp-content/uploads/2022/09/vishnu.jpg)
ಕನ್ನಡ ಸೇರಿ ತಮಿಳು, ತೆಲುಗು,ಮಲಯಾಳಂ, ಹಿಂದಿ ಭಾಷೆಗಳಲ್ಲೂ ನಟಿಸಿ ಜನಪ್ರಿಯತೆ ಗಳಿಸಿದ್ದ ಹೆಮ್ಮೆಯ ಕನ್ನಡಿಗ,ಕನ್ನಡದ ಕೋಟಿಗೊಬ್ಬ ನಮ್ಮ ವಿಷ್ಣುದಾದ ತಮ್ಮ 59ನೇ ವಯಸ್ಸಿನಲ್ಲಿ ಸ್ವರ್ಗಸ್ತರಾದರು.
ಇಂದು ಡಾ. ವಿಷ್ಣುವರ್ಧನ್ ಜನ್ಮದಿನ, ಡಿಸೆಂಬರ್ 29ಕ್ಕೆ ವಿಷ್ಣುದಾದಾ ಚಿತ್ರರಂಗಕ್ಕೆ ಬಂದು 50 ವರ್ಷಗಳು ಪೂರೈಸಲಿವೆ.
ಈ ಹಿನ್ನೆಲೆಯಲ್ಲಿ ಅಭಿಮಾನ್ ಸ್ಟುಡಿಯೋದಲ್ಲಿರುವ ಸಾಹಸ ಸಿಂಹನ ಸಮಾಧಿ ಬಳಿ ಅವರ ಪ್ರಮುಖ ಸಿನಿಮಾಗಳ 40 ಅಡಿ ಎತ್ತರದ 50 ಕಟೌಟ್ ಗಳು ರಾರಾಜಿಸುತ್ತಿವೆ. dr-vishnuvardhan