ಒಂದೇ ವೇದಿಕೆಯಲ್ಲಿ ದ್ರೌಪದಿ ಮುರ್ಮು, ಪ್ರಣಬ್ ಮುಖರ್ಜಿ, ಯಶವಂತ್ ಸಿನ್ಹಾ: Viral Pic
ರಾಷ್ಟ್ರಪತಿ ಚುನಾವಣೆ ಸಮೀಪಿಸುತ್ತಿದ್ದಂತೆ ಅಪರೂಪದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಸ್ತುತ ರಾಷ್ಟ್ರಪತಿ ರೇಸ್‌ನಲ್ಲಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ದ್ರೌಪದಿ ಮುರ್ಮು ಮತ್ತು ಯಶವಂತ್ ಸಿನ್ಹಾ ಆ ಫೋಟೋದಲ್ಲಿದ್ದಾರೆ. ಈ ಪೋಟೋ ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿರುವ ವಿನೋಬಾ ಭಾವೆ ವಿಶ್ವವಿದ್ಯಾಲಯದಲ್ಲಿ ನಡೆದ 7ನೇ ಪದವಿ ಪ್ರದಾನ ಸಮಾರಂಭದ ಫೋಟೋ.
ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಆ ಸಮಯದಲ್ಲಿ ಜಾರ್ಖಂಡ್‌ನ ರಾಜ್ಯಪಾಲರಾಗಿದ್ದ ಪ್ರಸ್ತುತ ಎನ್‌ಡಿಎ ಅಧ್ಯಕ್ಷೀಯ ಅಭ್ಯರ್ಥಿ ದ್ರೌಪದಿ ಮುರ್ಮು ವಿಶ್ವವಿದ್ಯಾಲಯದ ಕುಲಪತಿಯಾಗಿ ಹಾಜರಿದ್ದರು. ಪ್ರಸ್ತುತ ವಿಪಕ್ಷಗಳ ರಾಷ್ಟ್ರಪತಿ ರೇಸ್‌ನಲ್ಲಿರುವ ಯಶವಂತ್ ಸಿನ್ಹಾ ಅವರು ಈ ಭವ್ಯ ಪದವಿ ಪ್ರದಾನ ಸಮಾರಂಭದಲ್ಲಿ ಪ್ರಣಬ್ ಮುಖರ್ಜಿಯವರ ಕೈಯಿಂದ ಗೌರವ ಡಿ.ಲಿಟ್ ಪದವಿಯನ್ನು ಸ್ವೀಕರಿಸಿದರು. ಒಂದೇ ಚೌಕಟ್ಟಿನಲ್ಲಿರುವ ಅವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.








