DRDO Recruitment 2022 | ಉದ್ಯೋಗಾಕಾಂಕ್ಷಿಗಳಿಗೆ ಡಿಆರ್ ಡಿಓ ಗುಡ್ ನ್ಯೂಸ್ | 1901 ಹುದ್ದೆ ನೇಮಕಕ್ಕೆ ಸೂಚನೆ
ಉದ್ಯೋಗಾಕಾಂಕ್ಷಿಗಳಿಗೆ ಡಿಆರ್ ಡಿಓ ಗುಡ್ ನ್ಯೂಸ್
1901 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಸೆ 23 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ
ಅಭ್ಯರ್ಥಿಗಳು 18 – 28 ವರ್ಷದವರಾಗಿರಬೇಕು
ಉದ್ಯೋಗಾಕಾಂಕ್ಷಿಗಳಿಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಗುಡ್ ನ್ಯೂಸ್ ಕೊಟ್ಟಿದೆ.
ಒಟ್ಟು 1901 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಸೆಪ್ಟೆಂಬರ್ ಮೂರರಿಂದ ಅರ್ಜಿ ಪ್ರಕ್ರಿಯೆ ಆರಂಭಿಸಿದೆ.
ಟೆಕ್ನಿಕಲ್ ಅಸಿಸ್ಟೆಂಟ್ ಬಿ ಹುದ್ದೆಗಳಿಗೆ ನೇಮಕಾತಿ ಆಹ್ವಾನಿಸಿದ್ದು, ಸೆಪ್ಟೆಂಬರ್ 23 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ.
ಆಸಕ್ತರು ಆನ್ ಲೈನ್ ಮೂಲಕ ಅರ್ಜಿಸಲ್ಲಿಸಬಹುದಾಗಿದೆ.
ಹಿರಿಯ ತಾಂತ್ರಿಕ ಸಹಾಯಕ ಬಿ ಹುದ್ದೆಗೆ ಅಭ್ಯರ್ಥಿ ವಿಜ್ಞಾನದಲ್ಲಿ ಪದವಿ ಅಥವಾ ಎಂಜಿನಿಯರಿಂಗ್ / ತಂತ್ರಜ್ಞಾನ/ ಕಂಪ್ಯೂಟರ್ ಸೈನ್ಸ್ ಇಲ್ಲದೇ ಇನ್ನಿತರ ಸಂಬಂಧಿತ ವಿಷಯದಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.
ಈ ಪದವಿಗಳು ಅಖಿಲ ಭಾರತ ತಾಂತ್ರಿಕ ಸಂಘಗಳ ಪರಿಷತ್ತಿನಿಂದ ಮಾನ್ಯತೆ ಪಡೆದಿರಬೇಕು. ಅಭ್ಯರ್ಥಿಗಳು 18 ರಿಂದ 28 ವರ್ಷದವರಾಗಿರಬೇಕು.
ತಂತ್ರಜ್ಞರ ಹುದ್ದೆಗಾಗಿ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾನಿಲಯದಿಂದ ಎಸ್ ಎಸ್ ಎಲ್ ಸಿ ಅಥವಾ ಅದಕ್ಕೆ ಸಮಾನವಾದ ಪರೀಕ್ಷೆಯಲ್ಲಿ ಉತೀರ್ಣಗೊಂಡಿರಬೇಕು.
ಹಿರಿಯ ತಾಂತ್ರಿಕ ಸಹಾಯಕ ಬಿ ಹುದ್ದೆಗೆ ವೇತನ ಶ್ರೇಣಿ ಆರಕ್ಕೆ 35400 ರೂಪಾಯಿ ಯಿಂದ 1,12,400 ರೂಪಾಯಿ ಇರಲಿದೆ.