ಕೋಕಾ ಕೋಲಾ ಬೇಡ.. ನೀರು ಕುಡಿಯಿರಿ – ಕ್ರಿಸ್ಟಿಯಾನೊ ರೋನಾಲ್ಡೊ ಸಂದೇಶ..!
ಕಾರ್ಬೊನೇಟೆಡ್ ತಂಪು ಪಾನೀಯಗಳನ್ನು ಕುಡಿಯಬೇಡಿ..ಅದರ ಬದಲು ನೀರು ಕುಡಿಯಿರಿ.. ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ..
ಇದು ಯೂರೋ ಕಪ್ ಫುಟ್ ಬಾಲ್ ಟೂರ್ನಿಯ ಸುದ್ದಿಗೋಷ್ಠಿಯಲ್ಲಿ ಪೋರ್ಚ್‍ಗಲ್ ತಂಡದ ನಾಯಕ ಕ್ರಿಸ್ಟಿಯಾನೊ ರೋನಾಲ್ಡೊ ಅವರ ಸ್ಪಷ್ಟವಾದ ಸಂದೇಶವಾಗಿದೆ.
ಎಫ್ ಗುಂಪಿನ ಲೀಗ್ ಪಂದ್ಯದಲ್ಲಿ ಪೋರ್ಚ್‍ಗಲ್ ತಂಡ 3-0 ಗೋಲುಗಳಿಂದ ಹಂಗೇರಿ ತಂಡವನ್ನು ಸೋಲಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು.
ಪೋರ್ಚ್‍ಗಲ್ ತಂಡದ ನಾಯಕ ಕ್ರಿಸ್ಟಿಯಾನೊ ರೋನಾಲ್ಡೊ ಅವರು ಎರಡು ಗೋಲು ದಾಖಲಿಸಿ ತಂಡದ ಭರ್ಜರಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಅಷ್ಟೇ ಅಲ್ಲ, ಯೂರೋ ಕಪ್ ಟೂರ್ನಿಯಲ್ಲಿ ಗರಿಷ್ಠ ಗೋಲು ದಾಖಲಿಸಿದ್ದ ಲೀಸ್ಟ್ ನಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ.
ಇನ್ನು ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಕ್ರಿಸ್ಟಿಯಾನೊ ರೋನಾಲ್ಡೊ ಅವರು ತನ್ನ ಅಭಿಮಾನಿಗಳಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.
ಕ್ರಿಸ್ಟಿಯಾನೊ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ಮುನ್ನ ಟೇಬಲ್ ನಲ್ಲಿ ಎರಡು ಕೋಕಾ ಕೋಲಾ ಬಾಟಲ್‍ಗಳಿದ್ದವು. ಆದ್ರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರಿಗೆ ಈ ಕೋಕಾ ಕೋಲಾ ಬಾಟಲ್ ಗಳು ಇಷ್ಟವಾಗಲಿಲ್ಲ. ಕಾರ್ಬೊನೇಟೆಡ್ ತಂಪುಪಾನಿಯಗಳು ಆರೋಗ್ಯಕ್ಕೆ ಹಾನಿಕಾರ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.
ಟೇಬಲ್ ಮೇಲಿದ್ದ ಎರಡು ಕೋಕಾ ಕೋಲಾ ಬಾಟಲ್ ಗಳನ್ನು ಕೆಳಗಿಟ್ಟು, ಅದರ ಬದಲು ನೀರಿನ ಬಾಟಲ್ ಅನ್ನು ತೆಗೆದುಕೊಂಡು ಚಿಯರ್ ಅಪ್ ಮಾಡಿದ್ದಾರೆ.
ಒಟ್ಟಿನಲ್ಲಿ 36ರ ಹರೆಯದ ಪೋರ್ಚ್‍ಗಲ್ ನ ನಾಯಕ ಹಾಗೂ ವಿಶ್ವ ಫುಟ್ ಬಾಲ್ ನ ಅಪ್ರತಿಮ ಆಟಗಾರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ತನ್ನ ಅಭಿಮಾನಿಗಳಿಗೆ ಸಂದೇಶವನ್ನು ನೀಡಿದ್ದಾರೆ.