Driving Licence : 960 ಬಾರಿ ಪರೀಕ್ಷೆ ಬರೆದ ನಂತರ ಡ್ರೈವಿಂಗ್ ಲೈಸೆನ್ಸ್ ಪಡೆದ ಮಹಿಳೆ….
960 ಬಾರಿ ಪ್ರಯತ್ನಿಸಿದ ನಂತರ ಡ್ರೈವಿಂಗ್ ಲೈಸೆನ್ಸ್ ಪಡೆದ ದಕ್ಷಿಣ ಕೊರಿಯಾದ ಮಹಿಳೆಯ ಕಥೆ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಈ ಘಟನೆ ನಡೆದಿರುವುದು 18 ವರ್ಷಗಳ ಹಿಂದೆಯಾದರೂ ಇದೀಗ ರೆಡ್ ಇಟ್ ನಲ್ಲಿ ಮತ್ತೊಮ್ಮೆ ವೈರಲ್ ಆಗಿದೆ.
ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಚಾ ಸಾ-ಸೂನ್ ಅವರ ಕಥೆಯು 2005 ರಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು. ಅನೇಕ ವಿಫಲ ಪ್ರಯತ್ನಗಳ ಹೊರತಾಗಿಯೂ ಚಾಲನಾ ಪರವಾನಿಗೆ ಪಡೆಯಲು ಆಕೆಯ ಹಠ ಶ್ಲಾಘನೀಯವಾಗಿತ್ತು.
ಏಪ್ರಿಲ್ 2005 ರಲ್ಲಿ ಆಕೆ ಮೊದಲ ಭಾರಿಗೆ ಪರೀಕ್ಷೆ ಬರೆಯಲು ಪ್ರಯತ್ನಿಸಿದಳು. ವಿಫಲವಾದ ನಂತರ ಮೂರು ವರ್ಷಗಳ ವರೆಗೆ ಪ್ರತಿ ದಿನ, ವಾರಕ್ಕೆ ಐದು ದಿನಗಳ ಕಾಲ ಪರೀಕ್ಷೆ ಬರೆಯಲು ಪ್ರಯತ್ನಿಸಿದಳು. ಕೊನೆ ಕೊನೆಗೆ ವೇಗ ನಿಧಾನವಾಗಿ ವಾರಕ್ಕೆ ಎರಡು ಸಲ ಪರೀಕ್ಷೆ ಬರೆಯಲು ನಿರ್ಧರಿಸಿದಳು. ಕೊನಗೂ 960 ಪ್ರಯತ್ನಗಳ ನಂತರ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದಾಳೆ.
ಇನ್ನೂ ವಾಹನ ಚಲಾಯಿಸುವ ಪ್ರಾಯೋಗಿಕ ಪರೀಕ್ಷೆಯಲ್ಲಿ ಕೇವಲ 10 ಬಾರಿ ಪ್ರಯತ್ನಿಸಿ ಪಾಸ್ ಆಗಿದ್ದಾರೆ. 2010 ರಲ್ಲಿ ಅಂತಿಮವಾಗಿ ಆಕೆ ಪಾಸ್ ಆದಾಗ ಅವರ ವಯಸ್ಸು 69 ವರ್ಷವಾಗಿತ್ತು.
ಈ ಪರೀಕ್ಷೆ ಬರೆಯಲಿ ಆ ಮಹಿಳೆ 11,000 ಪೌಂಡ್‌ಗಳನ್ನ ಅಂದರೇ ರೂ. 11,15,273 ಗಳನ್ನ ಖರ್ಚುಮಾಡಿದ್ದಾರೆ. “ಕೊನೆಗೆ ಅವಳು ಪರವಾನಗಿ ಪಡೆದಾಗ, ನಾವೆಲ್ಲರೂ ಹರ್ಷೋದ್ಗಾರದಿಂದ ತಬ್ಬಿಕೊಂಡೆವು ಎಂದು ಡ್ರೈವಿಂಗ್ ಸ್ಕೂಲ್‌ನ ಮಾಸ್ಟರ್ ಸು-ಯೆಯೋನ್ 2010 ರಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಚಾ ಸಾ-ಸೂನ್ ಅವರ ಕಥೆಯು ಅವಳನ್ನ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುವಂತೆ ಮಾಡಿತು ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುವಂತೆ ಮಾಡಿತು. ಆನಂತರ ದಕ್ಷಿಣ ಕೊರಿಯಾದ ಕಾರು ತಯಾರಕರಾ ಕಂಪನಿ ಹ್ಯುಂಡೈ ಅವರಿಗೆ ಹೊಚ್ಚ ಹೊಸ ಕಾರೊಂದನ್ನ ಉಡುಗೊರೆಯಾಗಿ ನೀಡಿತು.
Driving Licence: A woman who got a driving license after writing the test 960 times…