ಚಾಲನಾ ಪರವಾನಗಿಯನ್ನು ಆನ್‌ಲೈನ್‌ನಲ್ಲಿ ಹೇಗೆ ನವೀಕರಿಸುವುದು? ಇಲ್ಲಿದೆ ಮಾಹಿತಿ
ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಅನೇಕ ಬದಲಾವಣೆಗಳಾಗಿದೆ. ಈ ಮಧ್ಯೆ, ಚಾಲನಾ ಪರವಾನಗಿಯನ್ನು ನೀವು ನವೀಕರಿಸಬೇಕಾದರೆ ಆರ್‌ಟಿಒ ಕಚೇರಿಗೆ ಹೋಗಲು ನಿಮಗೆ ಸೌಲಭ್ಯ ಮತ್ತು ಸಮಯವಿಲ್ಲದಿದ್ದರೆ, ನೀವು ಚಿಂತಿಸಬೇಕಾಗಿಲ್ಲ. ನಿಮ್ಮ ಚಾಲನಾ ಪರವಾನಗಿಯನ್ನು ಆನ್‌ಲೈನ್‌ನಲ್ಲಿ ನವೀಕರಿಸಬಹುದು.

ಇದು ಕಿಕ್ಕಿರಿದ ಸ್ಥಳಕ್ಕೆ ಹೋಗದಂತೆ ನಿಮ್ಮನ್ನು ತಡೆಯುತ್ತದೆ ಮತ್ತು ನಿಮ್ಮ ಸಮಯವನ್ನು ಸಹ ಉಳಿಸುತ್ತದೆ. ಇದಕ್ಕಾಗಿ, ಮೊದಲು ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ ಭರ್ತಿ ಮಾಡಿ ನಂತರ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕು.
ಇದಲ್ಲದೆ, ನಿಮ್ಮ ವಯಸ್ಸು 40 ಕ್ಕಿಂತ ಹೆಚ್ಚಿದ್ದರೆ, ನಿಮಗೆ ಪ್ರಮಾಣೀಕೃತ ವೈದ್ಯರು ತುಂಬಿಸಿದ ಫಾರ್ಮ್ 1 ಎ ಅಗತ್ಯವಿದೆ. ಮೂಲ ಅವಧಿ ಮೀರಿದ ಚಾಲನಾ ಪರವಾನಗಿ, ಪಾಸ್‌ಪೋರ್ಟ್ ಗಾತ್ರದ ಫೋಟೋ ಮತ್ತು ಆಧಾರ್ ಕಾರ್ಡ್ ಫೋಟೋವನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.
ಮೊಬೈಲ್‌ನಲ್ಲಿ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ – ಇಲ್ಲಿದೆ ಮಾಹಿತಿ
ನಿಮ್ಮ ಚಾಲನಾ ಪರವಾನಗಿಯನ್ನು ನವೀಕರಿಸಲು ಈ ವಿಧಾನವನ್ನು ಅನುಸರಿಸಿ…
1. ಆನ್‌ಲೈನ್ ಚಾಲನಾ ಪರವಾನಗಿ ನವೀಕರಣಕ್ಕಾಗಿ, ಮೊದಲು ಭಾರತ ಸರ್ಕಾರದ ರಸ್ತೆ ಸಾರಿಗೆ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ಗೆ ಹೋಗಿ https://parivahan.gov.in/parivahan/
2. ಇಲ್ಲಿ ನೀವು ಎಡಭಾಗದಲ್ಲಿರುವ ಆನ್‌ಲೈನ್ ನಲ್ಲಿ ಅನ್ವಯಿಸು ಕ್ಲಿಕ್ ಮಾಡಬೇಕು.
3. ಈಗ ‘ಸರ್ವೀಸಸ್ ಆನ್ ಡ್ರೈವಿಂಗ್ ಲೈಸೆನ್ಸ್’ ಕ್ಲಿಕ್ ಮಾಡಿ ತದನಂತರ ಪ್ರಸ್ತಾಪಿಸಿದ ಹಂತಗಳನ್ನು ಅನುಸರಿಸಿ.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665

4. ಇದರ ನಂತರ ನೀವು ಕೊಟ್ಟಿರುವ ಅರ್ಜಿಯನ್ನು ಭರ್ತಿ ಮಾಡಿ ಡಾಕ್ಯುಮೆಂಟ್ ಅನ್ನು ಅಪ್‌ಲೋಡ್ ಮಾಡಬೇಕು.
5. ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ ಮತ್ತು ಡಾಕ್ಯುಮೆಂಟ್ ಅನ್ನು ಅಪ್ಲೋಡ್ ಮಾಡಿದ ನಂತರ ಆನ್‌ಲೈನ್ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv/status/1356996556046491650?s=19
https://twitter.com/SaakshaTv/status/1356996818500874241?s=19








