ಭಾರತ – ಪಾಕಿಸ್ತಾನ ಗಡಿಯಲ್ಲಿ ಶಂಕಿತ ಡ್ರೋನ್ ಹಾರಾಟ – ಹೊಡೆದುರುಳಿಸಿದ ಸೇನೆ
ಶ್ರೀನಗರ : ಇತ್ತೀಚಿನ ದಿನಗಳಲ್ಲಿ ಗಡಿ ಭಾಗಗಳಲ್ಲಿ ಡ್ರೋನ್ ಆತಂಕ ಹೆಚ್ಚಾಗಿದೆ… ಆಗಾಗ ಡ್ರೋನ್ ಗಳು ಕಾಣಿಸಿಕೊಳ್ತಾಯಿದ್ದು, ಭಾರತೀಯ ಸೇನೆಯೂ ಕೂಡ ಇವುಗಳ ಮೇಲೆ ತೀವ್ರ ನಿಗಾ ಇಟ್ಟಿದೆ. ಇದೀಗ ಮತ್ತೆ ಭಾರತ – ಪಾಕಿಸ್ತಾನ ಗಡಿಯಲ್ಲಿ ಶಂಕಿತ ಡ್ರೋನ್ ಹಾರಾಡಿದ್ದು, ಬಿಎಸ್ ಎಫ್ ಯೋಧರು ಅದಕ್ಕೆ ಗುಂಡು ಹಾರಿಸಿ ನೆಲಕ್ಕುರುಳಿಸಿದ್ದಾರೆ.
ಜಮ್ಮು ಜಿಲ್ಲೆಯ ಅರ್ನಿಯಾ ಸೆಕ್ಟರ್‌ನ ಅಂತರರಾಷ್ಟ್ರೀಯ ಗಡಿಯಲ್ಲಿ ಸೋಮವಾರ ಬೆಳಿಗ್ಗೆ ಭಾರತದತ್ತ ಬರುತ್ತಿದ್ದ ಶಂಕಿತ ಹಾರುವ ವಸ್ತುವೊಂದನ್ನು ಗುರುತಿಸಿದ ಗಡಿ ಭದ್ರತಾ ಪಡೆಯ ಸಿಬ್ಬಂದಿ ಗುಂಡು ಹಾರಿಸಿದ್ದು, ಅದು ಪಾಕಿಸ್ತಾನದತ್ತ ಬಿದ್ದಿದೆ ಎಂದು ವರದಿಯಾಗಿದೆ. ಬೆಳಿಗ್ಗೆ 5.30ರ ವೇಳೆಗೆ ಆಕಾಶದಲ್ಲಿ ಮಿಣುಗುತ್ತಾ ಹಾರುವ ವಸ್ತು ಕಂಡುಬಂದಿದ್ದು, ಕೂಡಲೇ ಎಚ್ಚೆತ್ತ ಬಿಎಸ್‌ಎಫ್ ಸಿಬ್ಬಂದಿ ಅದರತ್ತ ಗುಂಡು ಹಾರಿಸಿದ್ದಾರೆ.








