ಹಲವಾರು ವರ್ಷಗಳಿಂದ ಯುವ ವಿಜ್ಙಾನಿ ಮುಖವಾಡದಲ್ಲಿ ಜನರನ್ನ ಯಾಮಾರಿಸಿ ಇದೀಗ ದೇಶದ ಜನರಿಂದ ಛೀ..ಥೂ.. ಎನಿಸಿಕೊಳ್ಳುತ್ತಿರುವ ಡ್ರೋನ್ ಪ್ರತಾಪನ ವಿರುದ್ಧ ಕಾನೂನಿನ ಕುಣಿಕೆ ಮತ್ತಷ್ಟು ಬಿಗಿಯಾಗಿದೆ. ಯಾವ್ಯಾವುದೋ ಕಂಪನಿಗಳ ಡ್ರೋನ್‌ಗಳನ್ನ ತಾನೇ ತಯಾರಿಸಿದ್ದು ಎಂದು ಕಾಗೆ ಹಾರಿಸುತ್ತಾ ಬಂದಿದ್ದ ಪ್ರತಾಪನ ವಿರುದ್ಧ ಈಗಾಗಲೇ ಪೊಲೀಸ್ ಮಾಹಾ ನಿರ್ದೇಶಕರಿಗೆ ದೂರು ಸಲ್ಲಿಸಲಾಗಿದೆ. ಇದರ ಬೆನ್ನಲೇ ಜರ್ಮನಿಯ ಡ್ರೋನ್ ಕಂಪನಿಯೊಂದು ಕೇಸ್ ಹಾಕುವುದಾಗಿ ಎಚ್ಚರಿಸಿದ್ದು ಪ್ರತಾಪನಿಗೆ ಶಾಕ್ ನೀಡಿದೆ. 
ಜರ್ಮನಿಯ ಬಿಲ್ಜ್ ಐ ಮಲ್ಟಿಕಾಪ್ಟರ್ ಸ್ಪೇಸ್ ಸಿಸ್ಟಮ್ ತಯಾರಿಸಿದ್ದ ಡ್ರೋನ್ ತಾನೇ ತಯಾರಿಸಿದ್ದು ಎಂದು ಫೋಟೋಗೆ ಫೋಸ್ ನೀಡಿ ಬಿಲ್ಡಪ್ ಕೊಟ್ಟಿದ್ದ. ಸಾಲದಕ್ಕೆ ಇಲ್ಲಿಯವರೆಗೆ ತನ್ನ ತಪ್ಪು ಒಪ್ಪಿಕೊಳ್ಳದೆ ಅದು ತಾನೇ ತಯಾರಿಸಿದ್ದು ಎಂದು ಮೊಂಡು ವಾದ ಮಾಡುತ್ತಿರುವ ಪ್ರತಾಪನಿಗೆ ಜರ್ಮನಿಯ ಕಂಪನಿ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದೆ ಈ ಕುರಿತು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಕಂಪನಿ ‘ಇದು ನೀವೇ ತಯಾರಿಸಿರುವ ಡ್ರೋನ್ ಆದರೇ ಸಾಬೀತು ಮಾಡಿ ಇಲ್ಲದೆ ಹೋದಲ್ಲಿ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಎಚ್ಚರಿಸಿದೆ.









