ಬೆಂಗಳೂರು: ಸಿಸಿಬಿ ಪೊಲಿಸರು ಡ್ರಗ್ಸ್ ಪೆಡ್ಲರ್‍ಗಳ ಬೆನ್ನು ಬಿದ್ದಿರುವ ಬೆನ್ನೆಲ್ಲೇ ಡ್ರಗ್ಸ್ ಪಾರ್ಟಿಗಳ ಕಿಂಗ್‍ಪಿನ್ ವಿರೇನ್ ಖನ್ನಾ ಮತ್ತೆ ಸಿಸಿಬಿ ಖೆಡ್ಡಾಕ್ಕೆ ಬಿದ್ದಿದ್ದಾನೆ.
ಸತತ ಎರಡು ವಾರಗಳ ಸಿಸಿಬಿ ಪೊಲೀಸರು ಡ್ರಗ್ಸ್ ಪೆಡ್ಲರ್ ವಿರೇನ್ ಖನ್ನಾನ ವಿಚಾರಣೆ ನಡೆಸಿದ್ದರು. ನಂತರ ಕೋರ್ಟ್ ಆರೋಪಿಯನ್ನು ಪರಪ್ಪನ ಅಗ್ರಹಾರ ಜೈಲಿಗೆ ಅಟ್ಟಿತ್ತು.
ಇದೀಗ ಡ್ರಗ್ಸ್ ಜಾಲ ವ್ಯಾಪಕವಾಗಿ ಜಾಲ ವಿಸ್ತರಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೋರ್ಟ್‍ನಿಂದ 5 ದಿನ ಕಸ್ಟಡಿಗೆ ಸಿಸಿಬಿ ಪೊಲೀಸರು ಪಡೆದಿದ್ದಾರೆ.
ತ್ರಿಮೂರ್ತಿಗಳಿಗೆ ಸಿಸಿಬಿ ನೋಟಿಸ್
ಡ್ರಗ್ಸ್ ಪೆಡ್ಲರ್‍ಗಳ ನಂಟಿನ ಆರೋಪ ಹೊತ್ತಿರುವ ಶಾಸಕರೊಬ್ಬರ ಆಪ್ತ ಶೇಕ್ ಫಾಸಿಲ್, ಶಿವಪ್ರಕಾಶ್, ಆದಿತ್ಯ ಆಳ್ವ ನಾಪತ್ತೆಯಾಗಿದ್ದು, 20 ದಿನಗಳ ನಂತರವೂ ಸುಳಿವು ಸಿಕ್ಕಿಲ್ಲ. ಎಲ್ಲರೂ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು ಅವರ ಮೊಬೈಲ್ ಟವರ್ ಲೋಕೇಶ್ ಮಾಹಿತಿ ಪಡೆಯಲು ಸಿಡಿಆರ್ ಮಾಹಿತಿಯಲ್ಲೂ ಮಾಹಿತಿ ಲಭ್ಯವಾಗಿಲ್ಲ.
ಆದಿತ್ ಆಳ್ವ ಮುಂಬೈನಲ್ಲಿರುವ ಮಾಹಿತಿ ಅಧರಿಸಿ ಎರಡು ತಂಡ ಹೋದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಫಾಸಿಲ್ ಭಾರತದಲ್ಲಿ ಇದ್ದಾನಾ ವಿದೇಶಕ್ಕೆ ಪರಾರಿಯಾಗಿದ್ದನಾ ಎಂಬುದರ ಬಗ್ಗೆ ಪತ್ತೆ ಹಚ್ಚಲು ಲುಕ್‍ಔಟ್ ನೋಟಿಸ್ ಜಾರಿಗೊಳಿಸಲಾಗಿದೆ.
ನೆಲಮಂಗಲದ ಮನೆಯಲ್ಲಿದ್ದ ನಿರ್ಮಾಪಕ ಹಾಗೂ ರಾಗಿಣಿ ಬಾಯ್‍ಫ್ರೆಂಡ್ ಶಿವಪ್ರಕಾಶ್ 20 ದಿನಗಳಿಂದ ನಾಪತ್ತೆಯಾಗಿದ್ದಾನೆ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿರುವ ಶಿವಪ್ರಕಾಶ್‍ಗಾಗಿ ಸಿಸಿಬಿ ಪೊಲೀಸರು ಬೇಟೆ ಮುಂದುವರೆಸಿದ್ದಾರೆ.