ಬೆಂಗಳೂರು: ಡ್ರಗ್ ಪೆಡ್ಲರ್ ವಿರೇನ್ ಖನ್ನಾನನ್ನು ಡ್ರಗ್ ಕೇಸಲ್ಲಿ ಬಲಿಪಶು ಮಾಡಲು ಸಿಸಿಬಿ ಪೊಲೀಸರು ಹೊರಟಿದ್ದಾರೆ. ನಮ್ಮ ಮನೆಯಲ್ಲಿ ಡ್ರಗ್ ಪ್ಲಾಂಟ್ ಮಾಡಲು ಸಿಸಿಬಿ ಪೊಲೀಸರು ಪ್ಲಾನ್ ಮಾಡಿದ್ದರು ಎಂದು ವಿರೇನ್ ಖನ್ನಾ ತಂದೆ ಶ್ರೀರಾಮ್ ಶಂಕೆ ವ್ಯಕ್ತಪಡಿಸಿದ್ದಾರೆ.
ಸಿಸಿಬಿ ಕಚೇರಿಗೆ ಬಂದಿದ್ದ ವಿರೇನ್ ಖನ್ನಾ ತಂದೆ ಶ್ರೀರಾಮನ್, ಸಿಸಿಬಿ ಪೊಲೀಸರು ನಮ್ಮ ಮನೆಯಲ್ಲಿ ಸರ್ಚ್ ಮಾಡಲು ವಾರೆಂಟ್ ಇಲ್ಲದೆ ಬಂದಿದ್ದರು. ಸುಮ್ಮನೆ ಬಿಟ್ಟಿದ್ದರೆ ಮನೆಯಲ್ಲಿಯೇ ಡ್ರಗ್ ಪ್ಲಾಂಟ್ ಮಾಡಿ ಬಿಡುತ್ತಿದ್ದರು. ಹೀಗಾಗಿ ಮನೆಗೆ ಸಿಸಿ ಕ್ಯಾಮೆರಾ ಅಳವಡಿಸಿದ್ದೇನೆ ಎಂದು ಶ್ರೀರಾಮ್ ಹೇಳಿದ್ದಾರೆ.
ಹೋಳಿ ಹಬ್ಬದ ಬಳಿಕ ನನ್ನ ಮಗ ಯಾವುದೇ ಪಾರ್ಟಿ ಆಯೋಜಿಸಿಲ್ಲ. ವಿರೇನ್ ಖನ್ನಾ ಫೇಮಸ್ ಪಾರ್ಟಿ ಆರ್ಗನೈಸರ್ ಆಗಿದ್ದಾನೆ. ಈ ಕಾರಣದಿಂದ ನನ್ನ ಮಗನನ್ನು ಬಂಧಿಸಲಾಗಿದೆ. ನನ್ನ ಮಗ ವಿರೇನ್ ಖನ್ನಾ ಡ್ರಗ್ಸ್ ಕಿಂಗ್‍ಪಿನ್ ಅಲ್ಲ. ಇ.ಡಿ ಹಾಗೂ ಪೊಲೀಸರ ತನಿಖೆಗೆ ನಾವು ಸಹಕಾರ ನೀಡುತ್ತೇವೆ. ಡ್ರಗ್ಸ್ ಕೇಸಲ್ಲಿ ನಮ್ಮ ಪುತ್ರನನ್ನು ಬಲಿಪಶು ಮಾಡಬೇಡಿ ಎಂದು ಖನ್ನಾ ತಂದೆ ಶ್ರೀರಾಮ್ ಕಣ್ಣೀರು ಹಾಕಿದ್ದಾರೆ.
ವಿರೇನ್ ಖನ್ನಾ ಆಯೋಜಿಸಿದ್ದ ಪಾರ್ಟಿಗಳಲ್ಲಿ ಡ್ರಗ್ಸ್ ಸಿಕ್ಕಿಲ್ಲ. ದೆಹಲಿಯಲ್ಲಿರುವ ಇರುವ ಮನೆ ನಮ್ಮ ತಾತ ಕಟ್ಟಿರುವುದು. ಅಲ್ಲಿ ವಿರೇನ್ ಖನ್ನಾ ವಾಸವಾಗಿಲ್ಲ ಎಂದಿದ್ದಾರೆ. ಇ.ಡಿ ಕಚೇರಿಯಿಂದ ನಿನ್ನೆ ನನಗೆ ಕರೆ ಬಂದಿತ್ತು. ಅಲ್ಲದೆ ಇ.ಡಿ ಅಧಿಕಾರಿಗಳು ನನ್ನ ಪಾಸ್‍ಪೋರ್ಟ್, ಪಾನ್ ಕಾರ್ಡ್ ಪಡೆದಿದ್ದಾರೆ.
ಆರೋಪಿ ರವಿಶಂಕರ್‍ನಿಂದ ನನ್ನ ಮಗನ ಹೆಸರನ್ನು ಹೇಳಿಸಿದ್ದಾರೆ. ಆದರೆ, ರವಿಶಂಕರ್‍ಗೂ ನಮ್ಮ ಪುತ್ರನಿಗೂ ಯಾವುದೇ ಸಂಬಂಧ ಇಲ್ಲ. ಅನಗತ್ಯವಾಗಿ ವಿರೇನ್ ಖನ್ನಾನನ್ನು ಈ ಕೇಸಲ್ಲಿ ಸಿಲುಕಿಸಲಾಗಿದೆ ಎಂದು ಶ್ರೀರಾಮ್ ಆರೋಪಿಸಿದ್ದಾರೆ.
ಸ್ಯಾಂಡಲ್‍ವುಡ್ ಡ್ರಗ್ ಕೇಸಲ್ಲಿ ಬಂಧನಕ್ಕೊಳಗಾಗಿರುವ ಆರೋಪಿ ವಿರೇನ್ ಖನ್ನಾ, ದೊಡ್ಡ ದೊಡ್ಡ ಪಾರ್ಟಿಗಳನ್ನು ಆಯೋಜಿಸಿ ಡ್ರಗ್ಸ್ ಸಪ್ಲೈ ಮಾಡುತ್ತಿದ್ದನಂತೆ. ಬೆಂಗಳೂರು ಮಾತ್ರವಲ್ಲ, ದೆಹಲಿ, ಗೋವಾ, ಮುಂಬೈ ಹಾಗೂ ವಿದೇಶಗಳಲ್ಲೂ ಡ್ರಗ್ಸ್ ಪಾರ್ಟಿ ಆಯೋಜನೆ ಮಾಡುತ್ತಿದ್ದ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
https://youtu.be/lwfLpyPrcX0
ಈ ಹಿನ್ನೆಲೆಯಲ್ಲಿ ವಿರೇನ್ ಖನ್ನಾನ ಮನೆಗೆ ಪರಿಶೀಲನೆ ಸಿಸಿಬಿ ಪೊಲೀಸರು ತೆರಳಿದ್ದಾಗ ಆತನ ತಂದೆ ಶ್ರೀರಾಮ್, ಪೊಲೀಸರನ್ನು ಮನೆಯೊಳಗೆ ಬಿಡದೆ ಕಾಯಿಸಿದ್ದರು. ಡ್ರಗ್ಸ್ ಕೇಸ್‍ನಿಂದ ಪುತ್ರ ವಿರೇನ್ ಖನ್ನಾ ಹೊರಬಹುದು ಅಸಾಧ್ಯ ಎಂಬುದನ್ನು ಅರಿತೇ ಅಸಹಾಯಕತೆಯಿಂದ ಖನ್ನಾ ತಂದೆ ಶ್ರೀರಾಮ್ ಸಿಸಿಬಿ ಪೊಲೀಸರ ಮೇಲೆಯೇ ಆರೋಪ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.